Get Updates
Get notified of breaking news, exclusive insights, and must-see stories!

Lok Sabha Election 2024 Result: ಮಹಿಳಾ ಸಂಸದೆ ಆಯ್ಕೆ, ಇತಿಹಾಸ ಬರೆದ ದಾವಣಗೆರೆ

ದಾವಣಗೆರೆ, ಜೂನ್ 04; ದಾವಣಗೆರೆ ಲೋಕಸಭಾ ಕ್ಷೇತ್ರದ 2024ರ ಫಲಿತಾಂಶ ಘೋಷಣೆಯಾಗಿದೆ. ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್‌ 26,094 ಮತಗಳ ಅಂತರದಿಂದ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷದಿಂದ ಮಹಿಳಾ ಅಭ್ಯರ್ಥಿಗಳೇ ಕಣದಲ್ಲಿದ್ದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬರೋಬ್ಬರಿ ಎರಡೂವರೆ ದಶಕಗಳ ಬಳಿಕ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ 26,094 ಮತಗಳಿಂದ ಗೆದ್ದು ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಸಂಸತ್ ಪ್ರವೇಶಿಸಿದ್ದಾರೆ.

Davanagere Lok Sabha Election 2024 Result Prabha Mallikarjun First Woman Elected AS MP From Seat

ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು 6,33,059 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರಿಗೆ 6,06,965 ಮತಗಳು ಸಿಕ್ಕಿವೆ. ತೀವ್ರ ಸ್ಪರ್ಧೆ ಒಡ್ಡುತ್ತಾರೆ ಎಂದುಕೊಂಡಿದ್ದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು 42,496 ಮತಗಳನ್ನು ಮಾತ್ರ ಪಡೆದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿನ ಶಿವಗಂಗೋತ್ರಿಯಲ್ಲಿ ಮತ ಎಣಿಕೆ ಮಂಗಳವಾರ ಬೆಳಗ್ಗೆ ಆರಂಭವಾಯಿತು. ಅಂಚೆ ಮತಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, ಆ ಬಳಿಕ ಇವಿಎಂ ಮತಯಂತ್ರ ತೆರೆಯುತ್ತಿದ್ದಂತೆ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ 3,641 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡರು. ಆ ನಂತರ ಮತ ಗಳಿಕೆ ಪಡೆಯುತ್ತಲೇ ಹೋದ ಪ್ರಭಾ ಮಲ್ಲಿಕಾರ್ಜುನ್ ಅವರು 4ನೇ ಸುತ್ತಿನಲ್ಲಿ ಹಿನ್ನೆಡೆ ಅನುಭವಿಸಬೇಕಾಯಿತು.

ಮುನ್ನಡೆ ಪಡೆದುಕೊಂಡ ಪ್ರಭಾ: 5ನೇ ಸುತ್ತಿನಿಂದ ಮುನ್ನಡೆ ಸಾಧಿಸಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕೊನೆಯವರೂ ಮುನ್ನಡೆಯಲ್ಲಿಯೇ ಇದ್ದರು. ಕೊನೆ ಕ್ಷಣದಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬರಲಾರಂಭಿಸಿದವು.

ಈ ವೇಳೆ ಕಾಂಗ್ರೆಸ್ ಪಾಳೆಯದಲ್ಲಿ ಆತಂಕ ಮನೆ ಮಾಡಿದ್ದರೆ, ಬಿಜೆಪಿ ಪಾಳೆಯದಲ್ಲಿ ಕೊನೆ ಕ್ಷಣದಲ್ಲಿಯಾದರೂ ಗೆಲ್ಲಬಹುದು ಎಂಬ ಮಾತು ಕೇಳಿ ಬಂತು. ಸತತವಾಗಿ 4 ಬಾರಿ ಗೆದ್ದಿದ್ದ ಸಂಸದ ಸಿದ್ದೇಶ್ವರ ಅವರು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಆದರೆ, ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಸೋಲಿನಿಂದ ಬಿಜೆಪಿ ಭದ್ರಕೋಟೆ ಛಿದ್ರವಾಯಿತು.

ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಜಿ. ಎಂ. ಸಿದ್ದೇಶ್ವರ ಸತತ 4 ಬಾರಿ ಸಂಸತ್ ಪ್ರವೇಶಿಸಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಗಾಯಿತ್ರಿ ಸಿದ್ದೇಶ್ವರ ಅವರನ್ನು ಸೋಲಿಸಿ ಪ್ರಭಾ ಮಲ್ಲಿಕಾರ್ಜುನ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಬಿಜೆಪಿ ಸೋಲಿಸುವ ಮೂಲಕ ದಾವಣಗೆರೆ ಜಿಲ್ಲೆ ಬಿಜೆಪಿ ಭದ್ರಕೋಟೆ ಎಂಬುದನ್ನು ಛಿದ್ರಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವೇ ಹೆಚ್ಚು ಎಂಬುದು ಸ್ಪಷ್ಟವಾಗಿದ್ದರೂ, ಈ ಬಾರಿ ಬಿಜೆಪಿ ಮಣ್ಣುಮುಕ್ಕಿದೆ.

ಕೊನೆ ಗಳಿಗೆಯಲ್ಲಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದರು. ಇದಕ್ಕೆ ಪ್ರತಿಯಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸಹ ಪ್ರಚಾರವನ್ನು ಜೋರಾಗಿಯೇ ಮಾಡಿದ್ದರು.

ನರೇಂದ್ರ ಮೋದಿ ಹವಾ ಇಲ್ಲಿ ಮತ್ತೊಮ್ಮೆ ವರ್ಕೌಟ್ ಆಗಲಿಲ್ಲ. ದಾವಣಗೆರೆಯಲ್ಲಿ ಮೋದಿ ಅವರು ಸಮಾವೇಶ ನಡೆಸಿದರೂ ಸಹ ಅದು ಕೈ ಕೊಟ್ಟಿದೆ. 2004, 2009, 2014ರ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಸೋಲಿಸಿದ್ದ ಸಿದ್ದೇಶ್ವರ್, 2019ರಲ್ಲಿ ಮಂಜಪ್ಪರನ್ನು ಸೋಲಿಸುವ ಮೂಲಕ 4 ಬಾರಿ ಗೆದ್ದ ಇತಿಹಾಸವನ್ನು ಬರೆದಿದ್ದರು.

ಚನ್ನಯ್ಯ ಒಡೆಯರ್ ಬಳಿಕ ಇಷ್ಟು ಬಾರಿ ಗೆದ್ದ ಮೊದಲಿಗರು ಎಂಬ ಕೀರ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು ಸಿದ್ದೇಶರ. ಆದರೆ ಈ ಬಾರಿ ಅವರ ಪತ್ನಿ ಕಣಕ್ಕಿಳಿಸಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ. ಸಿದ್ದೇಶ್ವರ ಅವರ ಕುಟುಂಬಕ್ಕೆ ಸೋಲಾಗಿದೆ.

ಜಿಲ್ಲೆಯ ಜನರ ನಾಡಿಮಿಡಿತ ಅರಿತಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಚುನಾವಣೆಗೆ ಮುನ್ನ ಮತ್ತು ನಂತರ ಜನರ ಸಂಪರ್ಕ, ಒಡನಾಟ ಕೆಲಸ ಮಾಡಿದೆ. ವಿಜಯಲಕ್ಷ್ಮೀ ಕಾಂಗ್ರೆಸ್‌ಗೆ ಈ ಬಾರಿ ಒಲಿದಿದ್ದಾಳೆ.

ಜಿಲ್ಲೆಯಲ್ಲಿ ಪ್ರಚಾರಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರ ಪ್ರಚಾರ ವರ್ಕ್ ಔಟ್ ಆಗಿದೆ. ಮೋದಿ ಅಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊಚ್ಚಿಕೊಂಡು ಹೋಗಲಿಲ್ಲ. ಕುರುಬ ಸಮುದಾಯ, ಶಾಮನೂರು ಕುಟುಂಬದ ಬಲ, ಅಹಿಂದ ವರ್ಗದ ಶಕ್ತಿ ಸಿಗುತ್ತದೆ ಎಂದುಕೊಂಡಿದ್ದ ಪ್ರಭಾ ಮಲ್ಲಿಕಾರ್ಜುನ್ ಲೆಕ್ಕಾಚಾರ ಸರಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+