• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಣ್ಣೆನಗರಿಯ ಯುವತಿ ಗಣರಾಜ್ಯೋತ್ಸವದ ಎನ್ ಸಿಸಿ ಪೆರೇಡ್ ಲೀಡರ್

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಜನವರಿ 23: ನವದೆಹಲಿಯಲ್ಲಿ ನಡೆಯುವ 2020ನೇ ಗಣರಾಜ್ಯೋತ್ಸವದ ಎನ್‌ಸಿಸಿ ಪರೇಡ್ ಗೆ ಬೆಣ್ಣೆ ನಗರಿ ದಾವಣಗೆರೆ ಯುವತಿ ಲೀಡರ್ ಆಗಿ ಸೆಲೆಕ್ಟ್ ಆಗಿದ್ದಾಳೆ.

ಇದೇ ಜನವರಿ 26 ರಂದು ನವದೆಹಲಿಯ ರಾಜಪಥ್ ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ ಗೆ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿ ಶ್ರೀಷ್ಮಾ ಹೆಗ್ಡೆ ಎನ್‌ಸಿಸಿ ಪರೇಡ್ ಲೀಡರ್ ಆಗಿ ಕಾರ್ಯನಿರ್ವಹಿಸಲಿದ್ದಾಳೆ.

ದಾವಣಗೆರೆಯ ಸೂಳೆಕೆರೆ ಸರ್ವೇ ಕಾರ್ಯಕ್ಕೆ ಸಿಕ್ಕಿತು ದ್ರೋಣ್ ಕ್ಯಾಮೆರಾ ಸಾಥ್

ಹರಿಹರ ಪಟ್ಟಣದ ನಿವಾಸಿಗಳಾದ ಡಾ.ಪ್ರವೀಣ್ ಹೆಗ್ಡೆ ಮತ್ತು ಬಿಂದು ಹೆಗ್ಡೆ ದಂಪತಿ ಪುತ್ರಿ ಶ್ರೀಷ್ಮಾ ಹೆಗ್ಡೆ ಕುಮಾರಪಟ್ಟಣದ ಆದಿತ್ಯ ಬಿರ್ಲಾ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

ರಸ್ತೆಯಲ್ಲಿ ತೊಗರಿ ಒಣಹಾಕಿದ್ದ ರೈತರಿಗೆ ಬಿಸಿ ಮುಟ್ಟಿಸಲು ಪಿಎಸ್ಐ ಮಾಡಿದ್ದೇನು?

ದೆಹಲಿಯ ಗಣರಾಜ್ಯೋತ್ಸವದ ಎನ್‌ಸಿಸಿ ಪೆರೇಡ್ ಗೆ ಆಯ್ಕೆಯಾಗಿದ್ದು, 2020ರ ಗಣರಾಜ್ಯೋತ್ಸವದ ಎನ್‌ಸಿಸಿ ಪರೇಡ್ ಲೀಡ್ ಮಾಡಲಿದ್ದಾರೆ. 2017 ರ ದೆಹಲಿ ಗಣರಾಜ್ಯೋತ್ಸದ ಪರೇಡ್ ನಲ್ಲಿ ಕೊಡಗಿನ ಐಶ್ವರ್ಯಾ ಲೀಡರ್ ಆಗಿದ್ದರು. ಈಗ 3 ವರ್ಷದ ನಂತರ ಮತ್ತೆ ಕರ್ನಾಟಕದ ಎನ್‌ಸಿಸಿ ಯುವತಿಗೆ ಅವಕಾಶ ದೊರೆತಿದೆ.

English summary
Davangere girl selected as Leader for the NCC Parade of the 2020 Republic Day in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X