ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಟ್ಟಿದ್ದು ಗಂಡು, ಕೊಟ್ಟಿದ್ದು ಹೆಣ್ಣು; ಏನಿದು ದಾವಣಗೆರೆ ವೈದ್ಯರ ಎಡವಟ್ಟು?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 31: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿನ ತಕರಾರು ಒಂದೆರಡಲ್ಲ. ಆದರೆ ಈ ಬಾರಿ ಮಗುವನ್ನೇ ಬದಲಿಸಿ ದೊಡ್ಡ ಎಡವಟ್ಟನ್ನೇ ಮಾಡಿದ್ದಾರೆ ಎಂದು ದೂರಿದ್ದಾರೆ ಪೋಷಕರು.

ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ‌ಮಗುವನ್ನು ಅದಲು ಬದಲು‌ ಮಾಡಿ ನೀಡಿದ್ದಾರೆ ಎಂದು ಪೋಷಕರು ಆರೋಪ‌ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಮಲ್ಲೇಶ್ವರಿ ಅವರಿಗೆ ಇದೇ ತಿಂಗಳು 8ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ಅಂದು ರಾತ್ರಿ 12.30ಕ್ಕೆ ಹೆಣ್ಣು ಮಗು ಜನಿಸಿದ್ದು. ಕೆಲವು ದಿನಗಳ ನಂತರ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ: ಆಸ್ಪತ್ರೆ ಬಾಗಿಲಲ್ಲೇ ಮಹಿಳೆಗೆ ಹೆರಿಗೆಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ: ಆಸ್ಪತ್ರೆ ಬಾಗಿಲಲ್ಲೇ ಮಹಿಳೆಗೆ ಹೆರಿಗೆ

ನಂತರ ಮನೆಗೆ ಭೇಟಿ ನೀಡಿದ ಆಶಾ ಕಾರ್ಯಕರ್ತೆ, ಗಂಡು ಮಗುವಿನ ಆರೋಗ್ಯ ಹೇಗಿದೆ ಎಂದು ವಿಚಾರಿಸಿದ್ದಾರೆ. ಮಗುವಿನ ತಾಯಿ ಮಲ್ಲೇಶ್ವರಿ ಅವರು ನಮ್ಮದು ಹೆಣ್ಣು ಮಗು ಎಂದಿದ್ದಾರೆ. ಅದಕ್ಕೆ ಕಾರ್ಯಕರ್ತೆ ದಾಖಲೆ ತೋರಿಸಿ, ನೋಡಿ ಇದರಲ್ಲಿ ನಿಮ್ಮ ಹೆಸರಿನ ಮುಂದೆ ಗಂಡು ಮಗು ಜನಿಸಿದೆ ಎಂದು ದಾಖಲಾಗಿದೆ ಎಂದಿದ್ದಾರೆ.

Davanagere District Doctors Mistake In Giving Baby To Parents

ಇದನ್ನು ನೋಡಿ ಮಲ್ಲೇಶ್ವರಿ ಅವರಿಗೆ ಗಾಬರಿ ಆಗಿದೆ. ಆಸ್ಪತ್ರೆಯಲ್ಲೇನಾದರೂ ಮಗು ಬದಲಾಯಿಸಿರಬಹುದೇ ಎಂಬ ಅನುಮಾನ ಬಂದು ಮಗುವಿನ ತಂದೆ, ಅಜ್ಜ ಹಾಗೂ ಸೋದರ ಮಾವ ಸೇರಿದಂತೆ ಸಂಬಂಧಿಗಳು ಜಿಲ್ಲಾಸ್ಪತ್ರೆಗೆ ಬಂದು ಮಗುವನ್ನು ಅದಲು‌ ಬದಲು‌ ಮಾಡಿದ್ದೀರಾ ಎಂದು ವೈದ್ಯರನ್ನು ತರಾಟಗೆ ತೆಗೆದುಕೊಂಡಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ದೇವರ ಗುಡಿ ನಿರ್ಮಿಸಿ: ಸಚಿವ ರಾಮುಲು ಸೂಚನೆಸರ್ಕಾರಿ ಆಸ್ಪತ್ರೆಯಲ್ಲಿ ದೇವರ ಗುಡಿ ನಿರ್ಮಿಸಿ: ಸಚಿವ ರಾಮುಲು ಸೂಚನೆ

ಆಸ್ಪತ್ರೆಯ ದಾಖಲೆಗಳಲ್ಲಿ ಗಂಡು ಮಗು ಎಂದು ಇದ್ದು‌, ಪೋಷಕರಿಗೆ ಕೊಟ್ಟಿದ್ದು‌ ಹೆಣ್ಣು ಮಗು ಆಗಿದೆ. ಇದರಿಂದ ಗೊಂದಲ ಉಂಟಾಗಿದೆ. ಇದರಿಂದ ಪೋಷಕರು ಮಗುವಿನ ಡಿಎನ್ಎ ಪರೀಕ್ಷೆಗೆ ಒಳಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯರು ಸದ್ಯಕ್ಕೆ ಯಾವ ತನಿಖೆಗಾದರೂ ಸಿದ್ಧ ಎಂದಿದ್ದಾರೆ. ಆದರೆ ಮಗುವಿನ ವಿಷಯದಲ್ಲಿ ಗೊಂದಲ ಉಂಟಾಗಿರುವುದು ಆಸ್ಪತ್ರೆಗೆ ಕಪ್ಪು ಚುಕ್ಕೆಯಾಗಿದೆ.

English summary
The Davangere district hospital doctors did mistake in giving baby to parents. parents have complained that they have changed the baby and gave girl baby instead of boy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X