ಕೊರೊನಾ ಟೈಮಲ್ಲಿ ಕಾರ್ಪೊರೇಟರ್ ಟಿಕ್ ಟಾಕ್ ಡ್ಯಾನ್ಸ್ ವೈರಲ್
ದಾವಣಗೆರೆ, ಮಾರ್ಚ್ 30: ಇಡೀ ದೇಶವೇ ಕೊರೊನಾದಿಂದ ತಲ್ಲಣಗೊಂಡಿದೆ. ದೇಶವಿಡೀ ಲಾಕ್ ಡೌನ್ ಆಗಿದೆ. ಕೊರೊನಾ ಹರಡುವಿಕೆಯನ್ನು ಹೇಗಾದರೂ ತಡೆಯಬೇಕು ಎಂಬ ಕುರಿತು ಎಲ್ಲೆಲ್ಲೂ ಜಾಗೃತಿಯ ಸಂದೇಶಗಳೂ ಕೇಳಿಬರುತ್ತಿವೆ. ಹೀಗಾಗಿ ಜನರನ್ನು ಮನೆಯಲ್ಲೇ ಇರುವಂತೆ ಕೋರಲಾಗಿದೆ.
Recommended Video
ಲಾಕ್ ಡೌನ್ ಹಿನ್ನೆಲೆ ಮನೆಯಲ್ಲೇ ಇರಬೇಕು ನಿಜ. ಆದರೆ ಈ ಸಮಯದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಕಾಂಗ್ರೆಸ್ ಹಾಲಿ ಸದಸ್ಯ, ವಿರೋಧ ಪಕ್ಷದ ನಾಯಕ ಎಚ್.ಎಸ್. ನಾಗರಾಜ್ ಹಾಗೂ ಪಾಲಿಕೆ ಕಾಂಗ್ರೆಸ್ ಮಾಜಿ ಮೇಯರ್ ದಂಪತಿ ಟಿಕ್ ಟಾಕ್ ಡ್ಯಾನ್ಸ್ ಮಾಡಿರುವುದು ಇದೀಗ ವೈರಲ್ ಆಗಿದೆ.
ಅವರು ಕುಟುಂಬದ ಜೊತೆ ನೃತ್ಯ ಮಾಡಿ ಕಾಲ ಕಳೆದಿರುವುದಾಗಿ ಟಿಕ್ ಟಾಕ್ ನಲ್ಲಿ ಹಾಕಿದ್ದಾರೆ. ಲಾಕ್ ಡೌನ್ ಇರುವ ಕಾರಣ ಮನೆಯಲ್ಲಿರುವುದು ಸಂತಸವೇ. ಆದರೆ ಜನಪ್ರತಿನಿಧಿಯಾಗಿ ನೃತ್ಯ ಮಾಡಿದ್ದು ಸರಿಯಲ್ಲ ಎನ್ನುತ್ತಿದ್ದಾರೆ ಕೆಲವರು.

ಗಂಡ ಹಾಲಿ ಕಾಂಗ್ರೆಸ್ ಕಾರ್ಪೊರೇಟರ್, ಪತ್ನಿ ಮಾಜಿ ಮೇಯರ್ ರಾಜಕೀಯ ಕುಟುಂಬ ಸಮಾಜಕ್ಕೆ ಮಾದರಿಯಾಗುವಂತೆ ಕೆಲಸ ಮಾಡಬೇಕಿತ್ತು. ಅದನ್ನ ಬಿಟ್ಟು ಈ ರೀತಿ ನೃತ್ಯ ಮಾಡಿದ್ದು ಸರಿಯಿಲ್ಲ. ಇಡೀ ದೇಶವೇ ಕೊರೊನಾ ಭೀತಿಯಿಂದ ಸಂಕಷ್ಟದಲ್ಲಿದೆ. ಇಂಥ ಸಮಯದಲ್ಲಿ ಜನಪ್ರತಿನಿಧಿಗಳು ಸಮಾಜಕ್ಕೆ ಮಾದರಿಯಾಗುವ ಅಥವಾ ಕೊರೊನಾ ಬಗ್ಗೆ ಜಾಗೃತಿಗೊಳ್ಳುವ ಸಂದೇಶವುಳ್ಳ ವಿಡಿಯೋ ಮಾಡಬಹುದಿತ್ತು ಎಂಬುದು ಕೆಲವರ ಅಭಿಪ್ರಾಯ.












Click it and Unblock the Notifications