ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ನಗರದಲ್ಲಿ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆ!

ಮುಂಬರುವ ದಿನಗಳಿಗೆ ನೀರು ಸಂರಕ್ಷಿಸುವ ಉದ್ದೇಶದಿಂದ, ವಾರಕ್ಕೊಮ್ಮೆ ಒಂದು ಗಂಟೆ ಮಾತ್ರ ಕುಡಿಯುವ ಉದ್ದೇಶಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ದಾವಣಗೆರೆ ನಗರ ಪಾಲಿಕೆ ಪ್ರಕಟಿಸಿದೆ.

By Mahesh
|
Google Oneindia Kannada News

ದಾವಣಗೆರೆ, ಫ್ಬ್ರವರಿ 07: ದಾವಣಗೆರೆಯಲ್ಲಿ ಕುಡಿಯುವ ನೀರಿನ ಅಭಾವ ಮತ್ತೊಮ್ಮೆ ಎದುರಾಗಿದೆ. ಭದ್ರಾ ನಾಲೆಯಿಂದ ನೀರು ಸಮರ್ಪಕವಾಗಿ ಲಭ್ಯವಾಗದ ಕಾರಣ ಹಾಗೂ ಮುಂಬರುವ ದಿನಗಳಿಗೆ ನೀರು ಸಂರಕ್ಷಿಸುವ ಉದ್ದೇಶದಿಂದ, ವಾರಕ್ಕೊಮ್ಮೆ ಒಂದು ಗಂಟೆ ಮಾತ್ರ ಕುಡಿಯುವ ಉದ್ದೇಶಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ದಾವಣಗೆರೆ ನಗರ ಪಾಲಿಕೆ ಪ್ರಕಟಿಸಿದೆ.

ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದಕ್ಕಾಗಿ ಕೆರೆಗಳ ಆಂತರಿಕ ಜೋಡಣೆಯೇ ಪರಿಹಾರ, ಯೋಜನೆ ಸದ್ಯಕ್ಕೆ ಕಾರ್ಯಗತವಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಎಂದು ಮೇಯರ್ ರೇಖಾ ತಿಳಿಸಿದರು.

Davanagere City facing water scarcity water supply once in a week

ತುಂಗಭದ್ರಾ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದು, ಇದರಿಂದಾಗಿ ಪಾಲಿಕೆಯು ಶೇ.60 ರಷ್ಟು ಪ್ರದೇಶಗಳಿಗೆ ನೀರು ಸರಬರಾಜು ಮಾಡುವುದು ತೊಂದರೆಯಾಗಿದೆ. ಭದ್ರಾ ನಾಲೆಗೆ ಜನವರಿ 19ರಿಂದ ನೀರು ನಿಲುಗಡೆಯಾಗಿದೆ. ಫೆಬ್ರವರಿ 18 ರಿಂದ ಹತ್ತು ದಿನಗಳು ಮಾತ್ರ ನಾಲೆಗೆ ನೀರು ಪೂರೈಕೆಯಾಗಲು ಸಾಧ್ಯ, ಇದರಿಂದ ಟಿ.ವಿ. ಸ್ಟೇಷನ್ ಕೆರೆಗೆ ನೀರು ಭರ್ತಿ ಮಾಡಲು ಸಾಧ್ಯವಾಗುವುದಿಲ್ಲ.

ಕುಂದುವಾಡ ಕೆರೆ ಹಾಗೂ ಟಿ.ವಿ. ಸ್ಟೇಷನ್ ಕೆರೆಗಳಲ್ಲಿ ಲಭ್ಯವಿರುವ ನೀರನ್ನು ಜೂನ್ ತಿಂಗಳವರೆಗೆ ಬಳಸಿಕೊಳ್ಳಬೇಕಿದೆ. ಹೀಗಾಗಿ ಕುಡಿಯಲು ಮಾತ್ರ ವಾರಕ್ಕೊಮ್ಮೆ ನೀರು ಪೂರೈಸಲು ಮಹಾಪೌರರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ನಿರ್ಧರಿಸಲಾಗಿದೆ. ಸಾರ್ವಜನಿಕರು ಕುಡಿಯಲು ಮಾತ್ರ ನಲ್ಲಿ ನೀರನ್ನು ಬಳಸಿ, ನಿತ್ಯದ ಕೆಲಸ ಕಾರ್ಯಗಳಿಗೆ ಬೋರ್‌ ವೆಲ್ ನೀರು ಬಳಸಬೇಕೆಂದು ಆಯುಕ್ತ ಬಿ.ಹೆಚ್. ನಾರಾಯಣಪ್ಪ ಮನವಿ ಮಾಡಿಕೊಂಡಿದ್ದಾರೆ.

English summary
Davanagere City facing water scarcity, Drinking water supply can be provided only for an hour once in a week. Lakes inter linking project is underway said Mayor Rekha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X