ದಾವಣಗೆರೆಯಲ್ಲಿ ಮಾಟ ಮಂತ್ರ: ಬಿಜೆಪಿ ಮುಖಂಡನ ಕುಟುಂಬಕ್ಕೆ ಆಘಾತ
ದಾವಣಗೆರೆ, ನವೆಂಬರ್ 6: ಮನೆಯಲ್ಲಿ ರಾತ್ರಿ ನೆಮ್ಮದಿಯಿಂದ ಮಲಗಿ, ಪ್ರತಿನಿತ್ಯದಂತೆ ಬೆಳಗ್ಗೆ ಎದ್ದು ಹೊರ ಬಂದಾಗ ಆಘಾತವೊಂದು ಕಾದಿತ್ತು. ಮನೆಯವರು ಹೊರಬಂದು ನೋಡಿದ ನಂತರ ಗಾಬರಿಗೊಳಗಾಗಿದ್ದರು.
ಆಧುನಿಕ ಕಾಲದಲ್ಲಿ ಮಾಟ-ಮಂತ್ರ ಎನ್ನುವ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ನಿದರ್ಶನ ಎನ್ನುವಂತೆ, ದಾವಣಗೆರೆಯ ಜಯನಗರದಲ್ಲಿರುವ ಬಿಜೆಪಿ ಮುಖಂಡ ನಿಂಗರಾಜ್ ಎನ್ನುವವರ ಮನೆ ಮುಂಭಾಗ ಮಾಟ-ಮಂತ್ರ ನಡೆದಿದೆ.
ಗುರುವಾರ ರಾತ್ರಿ ನಿಂಗರಾಜ್ ಹಾಗೂ ಆತನ ಕುಟುಂಬದವರು ಊಟ ಮಾಡಿ ಮಲಗಿದ್ದು, ಬೆಳಗ್ಗೆ ಎದ್ದು ಮನೆಯಿಂದ ಹೊರ ಬಂದರೆ ಬಾಗಿಲ ಬಳಿ ರಕ್ತದ ಓಕಳಿಯಾಗಿತ್ತು, ಇದರಿಂದ ಭಯಭೀತರಾದ ನಿಂಗರಾಜ್ ಪತ್ನಿ, ಮನೆಯವರಿಗೆಲ್ಲ ವಿಷಯ ತಿಳಿಸಿದ್ದು, ನಂತರ ಕೆಟಿಜೆ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಿಜೆಪಿ ಮುಖಂಡನ ಮನೆಯ ಮುಂಭಾಗದಲ್ಲಿ ರಕ್ತದ ಓಕಳಿ, ರಕ್ತವನ್ನು ನೋಡಿ ಮನೆಯವರು ಭಯಭೀತರಾಗಿದ್ದಾರೆ. ನಂತರ ಇಡೀ ಏರಿಯಾವನ್ನು ಪೊಲೀಸರು ಹಾಗೂ ಶ್ವಾನದಳ ತನಿಖೆ ನಡೆಸಿದರು.
ನಿಂಗರಾಜ್ ಅವರು ಬಿಜೆಪಿ ಹಾಗೂ ಡಿಎಸ್ಎಸ್ ಮುಂಖಂಡನಾಗಿದ್ದು, ರಾಜಕೀಯವಾಗಿ ಸಾಕಷ್ಟು ವೈರಿಗಳು ಕೂಡ ಇದ್ದಾರೆ. ಇದರಿಂದ ಯಾರೋ ತಮಗೆ ಆಗದವರು ಹೀಗೆ ಮಾಟ-ಮಂತ್ರ ಮಾಡಿದ್ದಾರೆ ಎನ್ನುವ ಅರೋಪ ಮಾಡುತ್ತಿದ್ದಾರೆ.
ದಾವಣಗೆರೆಯ ಕೆಟಿಜೆ ನಗರ ಪೊಲೀಸರು ಹಾಗೂ ಶ್ವಾನದಳದದಿಂದ ಇಡೀ ಏರಿಯಾವನ್ನು ತಪಾಸಣೆ ನಡೆಸಿದ್ದು, ನಿಂಗರಾಜ್ ಮನೆಯ ಸುತ್ತಾಮುತ್ತಲಿರುವ ಸಿಸಿ ಕ್ಯಾಮರಾಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
Recommended Video
ಯಾವ ಕಾರಣಕ್ಕೆ ತಮ್ಮ ಮೇಲೆ ಇಷ್ಟು ದ್ವೇಷ ಎನ್ನುವುದು ಕೂಡ ನಿಂಗರಾಜ್ ಗೆ ತಿಳಿಯದಾಗಿದ್ದು, ಒಟ್ಟಾರೆ ಈಗಿನ ಅಧುನಿಕ ಕಾಲದಲ್ಲೂ ಹೀಗೆ ಮಾಟ, ಮಂತ್ರ ಎನ್ನುವ ಘಟನೆಗಳು ನಡೆಯುತ್ತಲೇ ಇದೆ. ಪೊಲೀಸರು ತನಿಖೆ ನಡೆಸಿದ ನಂತರ ಸತ್ಯಾಸತ್ಯಾತೆ ಹೊರ ಬರಬೇಕಿದೆ.












Click it and Unblock the Notifications