ದಾವಣಗೆರೆ: ಪ್ರಸ್ತುತ ಕ್ವಿಂಟಾಲ್ ಅಡಿಕೆ ದರ ಎಷ್ಟಿದೆ ಗೊತ್ತಾ?-ಅಂಕಿಅಂಶಗಳ ವಿವರ ಇಲ್ಲಿದೆ
Arecanut Price: ಬೆಳ್ಳಿ-ಬಂಗಾರದಂತೆ ಅಡಿಕೆ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇದೀಗ ಪ್ರಸ್ತುತ ಅಂದರೆ ಇಂದು (ಜುಲೈ 19) ದಾವಣಗೆರೆ ಜಿಲ್ಲೆಯಲ್ಲಿ ತಾಲೂಕುವಾರು ಕ್ವಿಂಟಾಲ್ ಅಡಿಕೆ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಶುಕ್ರವಾರ (ಜುಲೈ 19) ರಾಶಿ ಅಡಿಕೆ ಧಾರಣೆಯಲ್ಲಿ ಗರಿಷ್ಠ ಬೆಲೆ ಕ್ವಿಂಟಲ್‌ಗೆ 51,600 ರೂಪಾಯಿ ಇದ್ದು, ಕನಿಷ್ಠ ದರ 39,199 ರೂಪಾಯಿ ಆಗಿದೆ. ನಿನೆಗೆ ಹೋಲಿಕೆ ಮಾಡಿದರೆ, ಯಾವುದೇ ಏರಿಕೆ ಆಗದೇ ಸ್ಥಿರವಾಗಿದೆ. ಜೂನ್ ಮೊದಲ ವಾರ 54,000 ರೂಪಾಯಿ ಗಡಿ ದಾಟಿದ್ದ ಕ್ವಿಂಟಾಲ್ ಅಡಿಕೆ ದರ, ಜೂನ್ 20ರಿಂದ ಕುಸಿಯುತ್ತಲೇ ಬಂದಿತ್ತು. ಆದರೆ ಮತ್ತೆ ಚೇತರಿಕೆ ಕಂಡಿತ್ತು.

ಅದರಲ್ಲೂ ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾಗಿರುವ ಚನ್ನಗಿರಿ ವಹಿವಾಟಿನಲ್ಲಿ ಜುಲೈ 19ರಂದು ಅಂದರೆ ಇಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 39,199 ರೂಪಾಯಿ ಇದ್ದರೆ, ಗರಿಷ್ಠ ಬೆಲೆ 51,600 ಹಾಗೂ ಸರಾಸರಿ ಬೆಲೆ 48,042 ರೂಪಾಯಿಗೆ ಮಾರಾಟ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
2023ರ ಜುಲೈನಲ್ಲಿ ಗರಿಷ್ಠ ಕ್ವಿಂಟಾಲ್ ಅಡಿಕೆ ದರ 57,000 ರೂಪಾಯಿ ತಲುಪಿದ್ದು, ಈ ವರ್ಷ ಅಂದರೆ 2024ರ ಮೇ ತಿಂಗಳಲ್ಲಿ ಗರಿಷ್ಠ 55,000 ರೂಪಾಯಿ ತಲುಪಿತ್ತು. ಆದ್ದರಿಂದ ಇನ್ಮುಂದೆ ಉತ್ತಮ ದರ ಸಿಗುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ. ಕಾರಣ ಮಾರುಕಟ್ಟೆಗೆ ಹೊಸ ಅಡಿಕೆ ಬರುವುದು ಆರಂಭವಾಗುತ್ತದೆ.
ಇನ್ನು ಇದೀಗ ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದೆ. ಪರಿಣಾಮ ಇದೀಗ ಬಿಸಿ ಗಾಳಿಯ ಅಲೆ ತಗ್ಗಿದ್ದು, ತಂಪಾದ ವಾತಾವರಣ ನಿರ್ಮಾಣ ಆಗಿದೆ. ಕಳೆದ ಬಾರಿಯ ತೀವ್ರ ಬರದಿಂದ ಬೋರ್ ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿತ್ತು. ಆದರೆ ಇದೀಗ ಮುಂಗಾರು ಚುರುಕು ಪಡೆದ ಹಿನ್ನೆಲೆ ಮತ್ತೆ ಬೋರ್ ವೆಲ್‌ಗಳು ಚೇತರಿಕೆ ಕಾಣುತ್ತಿವೆ.
ಅಲ್ಲದೆ, ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಇನ್ನೂ ಹೆಚ್ಚಳವಾಗಲಿದೆ ಎನ್ನುವ ಮುನ್ಸೂಚನೆಯೂ ಇದೆ.
ಈಗಾಗಲೇ ಭಾರೀ ಮಳೆಯಿಂದ ಜಿಲ್ಲೆಯ ಹಲವೆಡೆ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಅವಾಂತರಗಳೇ ಸೃಷ್ಟಿಯಾಗಿವೆ. ಮತ್ತೊಂದೆಡೆ ಜಲಮೂಲಗಳಿಗೆ ನೀರುವ ಬರುತ್ತಿರುವ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಇನ್ನಿ 2024 ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿದ್ದು, ಫೆಬ್ರವರಿ ತಿಂಗಳಲ್ಲಿ ದಿಢೀರ್ 48,000 ರೂಪಾಯಿಗೆ ಕುಸಿತ ಕಂಡಿತ್ತು. ಮಾರ್ಚ್ ತಿಂಗಳಲ್ಲಿ ತುಸು ಚೇತರಿಕೆ ಕಂಡು 50,000 ರೂಪಾಯಿ ಮುಟ್ಟಿತ್ತು. ಏಪ್ರಿಲ್‌ನಲ್ಲಿ ಗರಿಷ್ಠ 54,000 ರೂಪಾಯಿ ಗಡಿ ತಲುಪಿದ್ದು, ಮೇ ತಿಂಗಳಲ್ಲಿ ಗರಿಷ್ಠ 55,000 ರೂಪಾಯಿ ತಲುಪಿ, ಮತ್ತೆ ಕುಸಿತ ಕಂಡಿತ್ತು. ಜೂನ್ ತಿಂಗಳ ಎರಡನೇ ವಾರದಿಂದ ಮತ್ತೇ ಕುಸಿತ ಕಂಡು, ಜುಲೈನಲ್ಲಿ 51,000 ರೂಪಾಯಿಗೆ ಬಂದು ನಿಂತಿದೆ.












Click it and Unblock the Notifications