ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ
ದಾವಣಗೆರೆ, ಸೆಪ್ಟೆಂಬರ್ 20: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡಿಕೊಂಡು ವಿವಾಹ ಆದ ಕೆಲವೇ ದಿನಗಳಲ್ಲೇ ವಿಚ್ಛೆದನ ಮೊರೆ ಹೋತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಕೆಲ ದಂಪತಿಗಳ ಜಗಳ ಸಾವಿನಲ್ಲಿ ಅಂತ್ಯವಾಗಿರುವ ಉದಾಹರಣೆಗಳಿವೆ. ಇನ್ನೂ ಇದೀಗ ಕೋರ್ಟ್‌ನಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಾಕು ಇರಿದ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ.
ಪದ್ಮಾವತಿ (30) ಚಾಕು ಇರಿತಕ್ಕೆ ಒಳಗಾದ ಮಹಿಳೆ ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರು ವಿಚ್ಛೇದನ ಅರ್ಜಿ ವಿಚಾರಣೆ ಹಿನ್ನೆಲೆ ಕೋರ್ಟ್‍ಗೆ ಬಮದಿದ್ದರು. ಈ ವೇಳೆ ಆರೋಪಿ ಇದ್ದಕ್ಕಿದ್ದಂತೆ ಪತ್ನಿಗೆ ಚಾಕು ಇರಿದಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ಪ್ರವೀಣ್ ಕುಮಾರ್ ವಿರುದ್ಧ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನೂ ಇದಕ್ಕೆ ಕಾರಣ ಏನೆಂದು ಇನ್ನಷ್ಟೇ ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.
ಪತಿ, ಪತ್ನಿ ನಡುವೆ ಮನಸ್ತಾಪ ಹಿನ್ನೆಲೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಕೌಟುಂಬಿಕ ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ವಿಚಾರಣೆ ಇದ್ದು, ಕೋರ್ಟ್ ಒಳಗಡೆ ಬರುತ್ತಿದ್ದಂತೆ ಪತ್ನಿಗೆ ಪತಿ ಚಾಕು ಇರಿದಿದ್ದಾನೆ. ವಿಚ್ಚೇದನ ಬಯಸಿ ಇಬ್ಬರು ಬೇರೆ ಬೇರೆಯಾಗಿದ್ದರು. ಪದ್ಮಾವತಿ ತಾಯಿ ಮನೆಗೆ ಹಿಂದಿರುಗಿದ್ದರು. ಆದ್ದರಿಂದ ವಿಚ್ಚೇದನ ಅರ್ಜಿ ದಾವಣೆಗೆರೆ ಕೋರ್ಟ್‌ನಲ್ಲಿ ದಾಖಲು ಗಿತ್ತು. ಕೋರ್ಟ್ ಆದೇಶದಂತೆ ಅರ್ಜಿ ವಿಚಾರಣೆಗೆ ಪತಿ ಪ್ರವೀಣ್ ಕುಮಾರ್ ಹಾಗೂ ಪತ್ನಿ ಪದ್ಮಾವತಿ ಬಂದಿದ್ದರು.
ಈ ವೇಳೆ ಪ್ರವೀಣ್ ಕುಮಾರ್ ಚಾಕು ತೆಗೆದುಕೊಂಡು ಕೋರ್ಟ್ ಒಳಗೆ ಆಗಮಿಸಿದ್ದು, ಪದ್ಮಾವತಿ ಕೋರ್ಟ್ ಹಾಲ್‌ಗೆ ಪ್ರವೇಶಿಸಿದ ತಕ್ಷಣವೇ ಪತ್ನಿ ಪದ್ಮಾವತಿಗೆ ಚಾಕು ಇರಿದಿದ್ದಾನೆ. ಬಳಿ ಪೊಲೀಸರು ಪ್ರವೀಣ್ ಕುಮಾರ್‌ನನ್ನು ಹಿಡಿದು ಚಾಕು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇಂತಹ ಪ್ರಕರಣಗಳು ಇದೇ ಮೊದಲೇನಲ್ಲ, ಪ್ರತಿನಿತ್ಯ ನಡೆಯುತ್ತಲೇ ಬೆಳಕಿಗೆ ಬರುತ್ತಲಿವೆ. ಆದರೆ, ಪೊಲೀಸರ ತನಿಖೆ ಬಳಿಕ ತಡವಾಗಿ ಬೆಳಕಿಗೆ ಬರುತ್ತಿವೆ. ಹೀಗೆ ಕ್ರೈಂ ಅನ್ನು ಪೊಲೀಸರು ಮಟ್ಟಹಾಕು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಮತ್ತ ಮತ್ತೆ ಇಂತಹ ನೀಚ ಕೃತ್ಯಗಳು ನಡೆಯುತ್ತಲಿವೆ. ಅದರಲ್ಲೂ ಬೆಂಗಳೂರಿನಂತರ ಮಹಾನಗರಗಳಲ್ಲಿ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಲಿವೆ.
ಯುವತಿಗೆ ಚಾಕು ಇರಿದ ವಿವಾಹಿತ: ಇನ್ನು ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣ ಯುವತಿಗೆ ವಿವಾಹಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವಂತಹ ನೀಚ ಕೃತ್ಯ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಕೋ ಲಿವಿಂಗ್ ಪಿಜಿಯೊಂದರಲ್ಲಿ ನಡೆದಿದೆ. ವಿವಾಹ ಆಗಿ ಮಗು ಇದ್ದರೂ ಸಹ ಕೋ ಲಿವಿಂಗ್ ಪಿಜಿಯಲ್ಲಿ ಟೆಕ್ಕಿ ಬಾಬು ಎಂಬಾತ ಒಬ್ಬನೇ ವಾಸ ಇದ್ದನು. ಎರಡು ತಿಂಗಳ ಹಿಂದೆ ಅದೇ ಪಿಜೆಗೆ ಯುವತಿ ಬಂದು ವಾಸ ಆಗಿದ್ದಳು. ಆಕೆ ಬಾಬುಗೆ ಪರಿಚಯ ಆಗಿದ್ದಳು.
ಬಳಿಕ ಬಾಬು ಆಕೆಯ ಪೋನ್ ನಂಬರ್ ಪಡೆದಿದ್ದು, ಆಕೆಯೊಂದಿಗೆ ಮಾತನಾಡುತ್ತಿದ್ದನಂತೆ. ಮೂರು ದಿನಗಳ ಹಿಂದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು, ಇದಕ್ಕೆ ಯುವತಿ ಒಪ್ಪಿರಲಿಲ್ಲ. ಆಗ ಆಕೆಯ ಖಾಸಗಿ ಪೋಟೋ ಇಟ್ಟುಕೊಂಡು 70,000 ರೂಪಾಯಿ ಹಣಕ್ಕೂ ಬೇಡಿಕೆ ಇಟ್ಟಿದ್ದನಂತೆ. ಕೊಡದಿದ್ದರೆ, ವಿಡಿಯೋ ಲೀಕ್ ಮಾಡುವುದಾರಿ ಬೆದರಿಕೆ ಹಾಕಿದ್ದನಂತೆ ಎಂದು ವರದಿಯಾಗಿದೆ.
ಅಷ್ಟೇ ಸಾಲದೆಂಬಂತೆ ಯುವತಿಯ ಮೊಬೈಲ್ ಪಡೆದು, ಆಕೆಯ ಖಾತೆಯಲ್ಲಿದ್ದ 14,000 ರೂಪಾಯಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಇನ್ನೂ ಹಣಕ್ಕೆ ಬೇಡಿಕೆ ಇಟ್ಟ ವೇಳೆ ಸ್ನೇಹಿತರ ಬಳಿ ಸಾಲ ಪಡೆದು ಕೊಡುವುದಾಗಿ ಯುವತಿ ತಿಳಿಸಿದ್ದಾರೆ. ಇದಕ್ಕೂ ಬಿಡದೇ ಗಲಾಟೆ ಮಾಡಿದ್ದಾನೆ. ಈ ವೇಳೆ ಯುವತಿಯ ಬೆನ್ನಿಗೆ ಚಾಕುವಿನಿಂದ ಟೆಕ್ಕಿ ಬಾಬು ಇರಿದು ಪರಾರಿ ಆಗಿದ್ದಾನೆ.
ಬಳಿಕ ಚಾಕು ಇರಿದ ಬಾಬುನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ ಎನ್ನಲಾಗಿದೆ.












Click it and Unblock the Notifications