ದಾವಣಗೆರೆಯಲ್ಲಿ ಐವರು ಗರ್ಭಿಣಿಯರಿಗೆ ಕೊರೊನಾ ಸೋಂಕು
ದಾವಣರೆಗೆ, ಜೂನ್ 20: ಬೆಣ್ಣೆನಗರಿ ದಾವಣಗೆರೆಯಲ್ಲಿ ಶುಕ್ರವಾರ ಒಂದೇ ದಿನ ಐವರು ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿ, ನಗರದ ಜನರಲ್ಲಿ ಭೀತಿ ಮೂಡಿಸಿದೆ.
Recommended Video
ಭಾರತೀಯ ಸೇನೆ ಸೇರಿಕೊಳ್ಳಲು ಮುಂದಾದ ನಾಗಸಾಧುಗಳು | NagaSadhus | Oneindia Kannada
ಎರಡು ದಿನಗಳ ಹಿಂದೆ ಮಹಾರಾಷ್ಟ್ರದಿಂದ ಬಂದಿದ್ದ ಒಬ್ಬ ಗರ್ಭಿಣಿಗೆ ಸೋಂಕು ತಗಲಿತ್ತು. ಆದರೆ ನಿನ್ನೆ ಶುಕ್ರವಾರ ಒಂದೇ ದಿನ ಐವರು ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿದ್ದು, ನಗರದ ಜನರು ಆತಂಕದಲ್ಲಿದ್ದಾರೆ. ಯಾರಿಂದ, ಹೇಗೆ ಸೋಂಕು ತಗುಲಿದೆ ಎಂಬುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ.

ಹರಿಹರ ತಾಲೂಕಿನ ರಾಜನಹಳ್ಳಿಯ ಓರ್ವ ಮಹಿಳೆಗೆ, ದೊಡ್ಡಬಾತಿಯಲ್ಲಿ ಒಬ್ಬರು ಹಾಗೂ ಆವರಗೊಳ್ ಗ್ರಾಮದ ಇಬ್ಬರು ಮಹಿಳೆಯರಿಗೆ, ನಗರದ ವೆಂಕಾಭೋವಿ ಕಾಲೋನಿಯ ಓರ್ವ ಮಹಿಳೆ ಸೇರಿದಂತೆ ಒಟ್ಟು ಐದು ಜನ ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿದೆ. ಈ ಐದು ಜನ ಮಹಿಳೆಯರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಸೋಂಕು ಪತ್ತೆ ಆಗುತ್ತಿದ್ದಂತೆ ಸೋಂಕಿತ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.












Click it and Unblock the Notifications