C V Raman Nagar Elections : ಬಿಜೆಪಿ ಭದ್ರಕೋಟೆ ಸಿವಿ ರಾಮನ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು?
ಮುಂಬರುವ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಸಿವಿ ರಾಮನ್ ನಗರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಎಸ್ ರಘು ಜಯ ಗಳಿಸಿದ್ದರು. ಕಾಂಗ್ರೆಸ್‌ನ ಸಂಪತ್ ರಾಜ್ 12227 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಸಿವಿ ರಾಮನ್ ನಗರ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲು ಕ್ಷೇತ್ರ ಸಿ.ವಿ. ರಾಮನ್ ನಗರ. ಸಿವಿ ರಾಮನ್ ನಗರವು ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದ ಖ್ಯಾತ ವಿಜ್ಞಾನಿ, ಭಾರತ ರತ್ನ ಸರ್ ಸಿ.ವಿ. ರಾಮನ್ ಅವರ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿದೆ.

ಈ ಬಾರಿ ಟಿಕೆಟ್ ಯಾರಿಗೆ?
ಸಿ.ವಿ.ರಾಮನ್‌ನಗರ ವಿಧಾನಸಭೆ ಕ್ಷೇತ್ರವು ಟಿಕೆಟ್ ವಿಚಾರದಲ್ಲಿ ಭಾರಿ ಜಿದ್ದಾಜಿದ್ದಿಯ ಕ್ಷೇತ್ರವಾಗಿ ಪರಿಣಮಿಸಿದೆ. ಸಚಿವರಿಂದ ಆರಂಭವಾಗಿ ಕಾರ್ಯಕರ್ತರವರೆಗೂ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಪೈಪೋಟಿ ನಡೆದಿದೆ. ಮೂರು ಪ್ರಮುಖ ಪಕ್ಷಗಳ ಪೈಕಿ
ಇನ್ನು ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿರುವ ಕಲಿಗಳ ಬಗ್ಗೆ ಹೇಳೋದಾದ್ರೆ, ಸಿವಿ ರಾಮನ್ ನಗರದಲ್ಲಿ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿ ರಘು ಇದ್ದಾರೆ. ಮೋದಿ ಅಲೆ, ಸರ್ಕಾರದ ಜನವಿರೋಧಿ ಅಲೆ ಜೊತೆ ತಾವು ಮಾಡಿರುವ ಅಭಿವೃದ್ಧಿ ಕೈ ಹಿಡಿಯಬಹುದೆನ್ನುವ ವಿಶ್ವಾಸ ಅವರದ್ದು.

ಮತ್ತೊಂದೆಡೆ ಕಾಂಗ್ರೆಸ್‌ನಿಂದ ಮಾಜಿ ಮೇಯರ್ ಸಂಪತ್ ರಾಜ್ ಈ ಬಾರಿ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಈ ಹಿಂದೆ ಸ್ಪರ್ಧಿಸಿ ಸೋತಿದ್ದ ಸಂಪತ್ ರಾಜ್, ಈ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಇನ್ನು ಜೆಡಿಎಸ್‌ನಲ್ಲಿ ಸದ್ಯ ಟಿಕೆಟ್ ಆಕಾಂಕ್ಷಿಗಳು ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ಆಮ್ ಆದ್ನಿ ಪಕ್ಷದಿಂದ ಮೋಹನ್ ದಾಸರಿ ಕಣಕ್ಕಿಳಿದಿದ್ದು ಮತ ವಿಭಜನೆಯಾಗುವುದರಲ್ಲಿ ಅನುಮಾನವಿಲ್ಲ.
ಮತದಾರರ ಸಂಖ್ಯೆ
ಬೆನ್ನಿಗಾನಹಳ್ಳಿ, ಸಿವಿ ರಾಮನ್ ನಗರ, ನ್ಯೂ ತಿಪ್ಪಸಂದ್ರ, ಸರ್ವಜ್ಞ ನಗರ, ಹೊಯ್ಸಳ ನಗರ, ಜೀವನ್ ಭೀಮಾ ನಗರ, ಕೋನೇನ ಅಗ್ರಹಾರ ಎಂಬ ಏಳು ವಾರ್ಡ್ಗಳಿರುವ ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ಇರುವ ಒಟ್ಟು ಮತದಾರರು 2,60,811. ಇವರಲ್ಲಿ 1,37,650 ಪುರುಷರಾದ್ರೆ, 1,22,811 ಮಹಿಳಾ ಮತದಾರರು. ಇನ್ನು ಜಾತಿವಾರು ಲೆಕ್ಕಾಚಾರ ನೋಡಿದ್ರೆ, ಈ ಪೈಕಿ ಎಸ್‌ಸಿ - 60,000 ಮತಗಳಿದ್ದರೆ, ಇತರೇ ಸಮುದಾಯದ ವೋಟ್ 66,669 ಆಗಿದೆ. ಇನ್ನುಳಿದಂತೆ ತಮಿಳು - 40,000, ಒಕ್ಕಲಿಗ - 20,000, ಅಲ್ಪಸಂಖ್ಯಾತ - 10,000, ಲಿಂಗಾಯತ - 8,000, ಕುರುಬ - 18,000 ಹಾಗೂ ಬೋವಿ - 8,000 ಮತದಾರರಿದ್ದಾರೆ ಎನ್ನುತ್ತೆ ಚುನಾವಣಾ ಆಯೋಗ.

C V Raman Nagar Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎಸ್ ರಘು(ಬಿಜೆಪಿ) | 58,887 | ಸಂಪತ್ ರಾಜ್(ಕಾಂಗ್ರೆಸ್) | 46,660 |
| 2013 | ಎಸ್ ರಘು(ಬಿಜೆಪಿ) | 53,364 | ಪಿ. ರಮೇಶ್(ಕಾಂಗ್ರೆಸ್) | 44,945 |
| 2008 | ಎಸ್ ರಘು(ಬಿಜೆಪಿ) | 47,369 | ಕೆ.ವಿ. ವಿಜಯ್ ಕುಮಾರ್(ಕಾಂಗ್ರೆಸ್) | 30,714 |
{video1}
ಸಮಸ್ಯೆಗಳು
ದೇಶದ ಯಾವುದೇ ಒಂದೇ ಒಂದು ಸ್ಥಳದಲ್ಲಿ 114 ಪಬ್, ಬಾರ್ ಮತ್ತು ಬ್ರೂವರೀಸ್ ಗಳಿರುವುದು ಇದೊಂದೇ ಸ್ಥಳದಲ್ಲಿ ಅಂದರೇ ಇಂದಿರಾನಗರದ 100 ಅಡಿ ರಸ್ತೆಯಲ್ಲಿ, ಇದರ ವಿರುದ್ಧ ವಾಗಿ ಹೈಕೋರ್ಟ್ ಆದೇಶವಿದ್ದರೂ ಯಾವುದೇ ಕಾನೂನು ಇದುವರೆಗೂ ಅನುಷ್ಠಾನಗೊಂಡಿಲ್ಲ, ಇಲ್ಲಿನ ಪಬ್ ಮತ್ತು ಬಾರ್ ಗಳಲ್ಲಿ ಬರುವ ಶಬ್ದದಿಂದ ಇಲ್ಲಿನ ನಿವಾಸಿಗಳು ಬೇಸತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ರೇಷನ್ ಕಾರ್ಡ್ ಕೊಡಿಸಿಲ್ಲ. ಒಳಚರಂಡಿ ಕಾರ್ಯ ಪೂರ್ಣಗೊಂಡಿಲ್ಲ. ಬಯಪ್ಪನಹಳ್ಳಿ ಕೊಳೆಗೇರಿ ಸಮಸ್ಯೆ ಬೃಹದಾಕಾರವಾಗಿದೆ.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications