• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

19 ವಸ್ತುಗಳ ಆಮದು ಸುಂಕ ಏರಿಕೆ, ಬುಧವಾರ ಮಧ್ಯರಾತ್ರಿಯಿಂದ ಜಾರಿ

|

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ನವದೆಹಲಿ, ಸೆಪ್ಟೆಂಬರ್ 27: ಕೇಂದ್ರ ಸರ್ಕಾರವು 19 ವಸ್ತುಗಳ ಆಮದು ಸುಂಕ ಏರಿಸಿ ಆದೇಶ ಹೊರಡಿಸಿದೆ. ಈ ಆದೇಶವು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಜೆಟ್ ಇಂಧನ, ಎಸಿ, ಫ್ರಿಡ್ಜ್‌, ವಾಷಿಂಗ್ ಮಷೀನ್, ಆಭರಣ, ಸ್ಪೀಕರ್, ಕಾರ್ ಟಯರ್‌, ಸೂಟ್‌ಕೇಸ್, ಕೆಲವು ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ 19 ವಿವಿಧ ವಸ್ತುಗಳ ಮೇಲಿನ ಕಸ್ಟಮ್ಸ್‌ ಸುಂಕ ಏರಿಸಲಾಗಿದ್ದು, ಈ ಆದೇಶ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಅಗತ್ಯವಲ್ಲದ ವಸ್ತುಗಳ ಆಮದನ್ನು ತಗ್ಗಿಸುವ ಉದ್ದೇಶದಿಂದ ಈ ನಿರ್ಧಾರ ತಳೆಯಲಾಗಿದೆ. ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆಗೆ ಕಡಿವಾಣ ಹಾಕಲು ಸಹ ಇದು ನೆರವಾಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಈ ಹಿಂದಿನ ಹಣಕಾಸು ವರ್ಷದಲ್ಲಿ ಇದೇ ವಸ್ತುಗಳ ಆಮದಿಗೆ ಮಾಡಿದ ವೆಚ್ಚ 86 ಸಾವಿರ ಕೋಟಿಗಳಾಗಿತ್ತು ಎಂದು ಹಣಕಾಸು ಸಚಿವಾಲಯ ಹೇಳಿದೆ.

English summary
Government Wednesday hiked customs duties on as many as 19 non-essential goods. order will effective wednesday midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X