Get Updates
Get notified of breaking news, exclusive insights, and must-see stories!

P.T. Parameshwar Naik Profile: ಕಾಂಗ್ರೆಸ್‌ ಅಭ್ಯರ್ಥಿ ಪಿ.ಟಿ.ಪರಮೇಶ್ವರ್ ನಾಯ್ಕ್ ವ್ಯಕ್ತಿ ಪರಿಚಯ

ವಿಜಯನಗರ, ಮಾರ್ಚ್ 29: ಹೂವಿನ ಹಡಗಲಿ ಕ್ಷೇತ್ರದ ಹೆಸರೇ ಸೂಚಿಸುವಂತೆ ಇಲ್ಲಿಯ ಮಲ್ಲಿಗೆ ಹೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿದೆ. ಹೂವಿನ ಹಡಗಲಿಯ ಏಳು ಕೋಟಿ ಮೈಲಾರಲಿಂಗೇಶ್ವರ ಕಾರ್ಣಿಕವು ಸತ್ಯವಾಕ್ಯ ಎನ್ನುವುದು ರಾಜ್ಯದ ಹಲವರ ಧಾರ್ಮಿಕ ನಂಬಿಕೆ. ವಿಜಯನಗರದ ಹೂವಿನ ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರ ರಾಜಕೀಯ ಜೀವನದ ಪರಿಚಯ ಇಲ್ಲಿದೆ.

ಪಿ.ಟಿ.ಪರಮೇಶ್ವರ್ ನಾಯ್ಕ್ 1964ರ ಮೇ 11ರಂದು ಪಿ. ಥಾವರ್ಯ ನಾಯ್ಕ ಹಾಗೂ ಗಂಗಿಬಾಯಿ ದಂಪತಿಯ ಪುತ್ರನಾಗಿ ಹರಪನಹಳ್ಳಿ ಬಳಿಯ ಲಕ್ಷ್ಮಿಪುರ ತಾಂಡಾದಲ್ಲಿ ಜನಿಸಿದರು. ಬಿ.ಎ. ಪದವೀಧರರಾಗಿರುವ ಇವರು ಪ್ರೇಮಾ ಎನ್ನುವವರನ್ನು ವಿವಾಹವಾಗಿದ್ದು, ಅವಿನಾಶ್ ಮತ್ತು ಭರತ್ ಎಂಬ ಮಕ್ಕಳಿದ್ದಾರೆ.

Congress Leader P. T. Parameshwar Naik Career Details

ಕಾಂಗ್ರೆಸ್‌ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ರಾಜಕೀಯ ಜೀವನ

1987ರಲ್ಲಿಯೇ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ಪಿ.ಟಿ.ಪರಮೇಶ್ವರ್ ನಾಯ್ಕ್ 1987ರಲ್ಲಿ ಹಿರೇಮ್ಯಾಗಳಗೇರಿ ಮಂಡಲ ಪಂಚಾಯಿತಿ ಸದಸ್ಯರಾಗಿ, 1993ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಲಕ್ಷ್ಮಿಪುರ ತಾಂಡಾವನ್ನು ಪ್ರತಿನಿಧಿಸಿದ್ದರು. 1995ರಲ್ಲಿ ಹಡಗಲಿ ತಾಲೂಕು ಪಂಚಾಯಿತಿಯ ಹಿರೇ ಮ್ಯಾಗಳಗೇರಿ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಲ್ಲದೇ, 1997ರಲ್ಲಿ ಹರಪನಹಳ್ಳಿ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಪಿ.ಟಿ.ಪರಮೇಶ್ವರ್ ನಾಯ್ಕ್ 1999ರಿಂದ ವಿಧಾನಸಭಾ ಚುನಾವಣಾ ಕಣಕ್ಕಿಳಿದಿದ್ದು, ದಾವಣಗೆರೆ ಜಿಲ್ಲೆಯ ಹರಪನಹಳ್ಳಿ (ಮೀಸಲು) ವಿಧಾನಸಭೆ ಕ್ಷೇತ್ರದಿಂದ 1999 ಹಾಗೂ 2004ರಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿ ಶಾಸಕರಾಗಿದ್ದರು. ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಹೂವಿನ ಹಡಗಲಿ ಕ್ಷೇತ್ರವು ಪರಿಶಿಷ್ಟ ಜಾತಿಗೂ, ಹರಪನಹಳ್ಳಿ ಕ್ಷೇತ್ರವು ಸಾಮಾನ್ಯ ವರ್ಗಕ್ಕೂ ಮೀಸಲಾಯಿತು. ಹೀಗಾಗಿ ಪಿ.ಟಿ.ಪರಮೇಶ್ವರ್ ನಾಯ್ಕ್ 2008ರಲ್ಲಿ ಎಂ.ಪಿ. ಪ್ರಕಾಶ್ ಅವರಿಗಾಗಿ ಕ್ಷೇತ್ರ ಬದಲಿಸಿದರು.

Congress Leader P. T. Parameshwar Naik Career Details

2008ರಿಂದ ವಿಧಾನಸಭಾ ಚುನಾವಣ ಕಣಕ್ಕಿಳಿದ ಪಿ.ಟಿ.ಪರಮೇಶ್ವರ್ ನಾಯ್ಕ್

2008ರಲ್ಲಿ ಪಿ.ಟಿ.ಪರಮೇಶ್ವರ್ ನಾಯ್ಕ್ ಹೂವಿನ ಹಡಗಲಿ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಬಿ ಚಂದ್ರ ನಾಯಕ್‌ ವಿರುದ್ಧ 6,518 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲಿಯೇ ಪಿ.ಟಿ.ಪರಮೇಶ್ವರ್ ನಾಯ್ಕ್ ಹಡಗಲಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು.

ಬಳಿಕ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ ಪಿ.ಟಿ.ಪರಮೇಶ್ವರ್ ನಾಯ್ಕ್ 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ಚಂದ್ರ ನಾಯಕ್‌ ಅವರನ್ನು 40,810 ಮತಗಳ ಅಂತರದಲ್ಲಿ ಸೋಲಿಸಿ ಮೊದಲ ಬಾರಿ ಹಡಗಲಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ 9,178 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. ಇನ್ನು 2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ಪಿ.ಟಿ.ಪರಮೇಶ್ವರ್ ನಾಯ್ಕ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಕ್ಷೇತ್ರದ ಈ ಬಾರಿಯ ಚುನಾವಣೆ ಕಣ ರಂಗೇರಿದ್ದು, ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿವುದು ನಿಶ್ಚಿತವಾಗಿದೆ. ಹಾಲಿ ಶಾಸಕ ಪಿ. ಟಿ. ಪರಮೇಶ್ವರ ಮತ್ತು ಬಿಜೆಪಿ ಅಭ್ಯರ್ಥಿಯ ನಡುವಿನ ಕಾದಾಟಕ್ಕೆ ಹೂವಿನ ಹಡಗಲಿ ಕ್ಷೇತ್ರ ಮತ್ತೊಮ್ಮೆ ಸಜ್ಜಾಗಿದೆ.

ಹೂವಿನಹಡಗಲಿ ಕ್ಷೇತ್ರದ ಮತದಾರರ ವಿವರ

ಒಟ್ಟು ಮತದಾರರು-1,90,000

ಪುರುಷ ಮತದಾರರು-1,00,000

ಮಹಿಳಾ ಮತದಾರರು-90,000

ಜಾತಿವಾರು ಮತ ಲೆಕ್ಕಾಚಾರ

ಲಿಂಗಾಯತ-55,000

ಎಸ್ಸಿ-45,000

ಕುರುಬರು-30,000

ಮುಸ್ಲಿಂ-20,000

ಎಸ್ಟಿ-15,000

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+