ಬೀದರ್: ಸಹಪಾಠಿಗಳ ರ‌್ಯಾಗಿಂಗ್ ಗೆ ಬಲಿ ಆಯ್ತು ವಿದ್ಯಾರ್ಥಿಯ ಜೀವ!

Written By: Ramesh
Subscribe to Oneindia Kannada

ಬೀದರ್, ನವೆಂಬರ್ . 06 : ಶಾಲಾ-ಕಾಲೇಜುಗಳಲ್ಲಿ ರ‌್ಯಾಗಿಂಗ್ ಮಾಡದಂತೆ ಹಲವು ಕಾನೂನುಗಳು ಜಾರಿಗೆ ತಂದರೂ ಕೆಲ ಕಿಡಿಗೇಡಿಗಳು ಕಾಲೇಜುಗಳಲ್ಲಿ ರ‌್ಯಾಗಿಂಗ್ ಮಾಡುವ ಚಾಳಿಯನ್ನು ಇನ್ನೂ ಬಿಟ್ಟಿಲ್ಲ.

ಆಗಾಗ ಇಂತಹ ರ‌್ಯಾಗಿಂಗ್ ನಿಂದಾಗಿ ಹಲವರ ಪ್ರಾಣಗಳು ಹೋಗಿದ್ದು ಉಂಟು. ಶಾಲಾ-ಕಾಲೇಜುಗಳಲ್ಲಿ ಸಹಪಾಠಿಗಳು ಮಾಡುವ ಕ್ಷುಲ್ಲಕ ಕಿರುಕುಳದಿಂದ ಅದೇಷ್ಟು ತಂದೆ-ತಾಯಿಗಳು ಮಕ್ಕಳನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೋ.

ಇನ್ನು ಜೀವನದಲ್ಲಿ ಬಾಳಿ ಬದುಕ ಬೇಕಾದ ನವ ಯುವಕನ್ನು ಬೀದರ್ ನಲ್ಲಿ ಈ ರ‌್ಯಾಗಿಂಗ್ ಬಲಿ ಪಡೆದಿದೆ. ಡ್ರಗ್ಸ್ ಸೇವಿಸುವಂತೆ ಸಹಪಾಠಿಗಳ ಕಿರಿಕುಳದಿಂದ ಬೇಸತ್ತ ಎಂಜಿನಿಯರಿಂಗ್ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಬೀದರ್ ನ ವಿದ್ಯಾನಗರ ಕಾಲೋನಿಯಲ್ಲಿ ನಡೆದಿದೆ.

Bidar- Engineering student commits suicide

ಸಚಿನ್ ಕುಮಾರ್(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತನ ಸ್ನೇಹಿತರು ನಿತ್ಯ ಡ್ರಗ್ಸ್ ಸೇವಿಸುವಂತೆ ಒತ್ತಾಯಿಸುತ್ತದ್ದರು. ಅಲ್ಲದೇ ಮನೆಯಿಂದ ಹಣ ತಂದುಕೊಡುವಂತೆ ಕಿರುಕುಳ ನೀಡುತ್ತಿದ್ದರು ಎಂದು ಸಚಿನ್ ಕುಮಾರ್ ಡೆತ್ ನೋಟ್ ನಲ್ಲಿ ಆರೋಪಿಸಿದ್ದಾನೆ.

ಸಚಿನ್ ಕುಮಾರ್ ಬೀದರ್‍ ಗುರುನಾನಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ 3ನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದನು. ಈ ಸಂಬಂಧ ಗಾಂಧಿಗಂಜ್ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು. ಪೊಲೀಸರು ಈತನ ಗೆಳೆಯರನ್ನು ವಿಚಾರಣೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A student of Guru Nanak Dev Engineering college committed suicide at his home in Bidar today November 06. The student Sachin Kumar Dhanraj Bajawale, 19, was in the third semester of civil engineering. A suicide note was recovered from the spot.
Please Wait while comments are loading...