ಟಿಕ್ ಟಾಕ್ ಮಾಡಲು ವಿವಿ ಸಾಗರ ಡಾಮ್ ಗೆ ಜಿಗಿದ ಯುವಕ; ವೀಡಿಯೋ ವೈರಲ್

ಚಿತ್ರದುರ್ಗ, ಜನವರಿ 02: ಟಿಕ್ ಟಾಕ್ ಮಾಡಲೆಂದು ಯುವಕನೊಬ್ಬ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿನ್ನೆ ಹೊಸ ವರ್ಷದ ಸಂಭ್ರಮಾಚರಣೆಗೆ ಹಿರಿಯೂರಿನ ವಿವಿ ಸಾಗರಕ್ಕೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬಂದಿದ್ದರು. ಈ ನಡುವೆ ಜಲಾಶಯಕ್ಕೆ ಯುವಕನೊಬ್ಬ ಮೇಲಿನಿಂದ ಜಿಗಿದು ಈಜಿದ ವೀಡಿಯೋ ವೈರಲ್ ಆಗಿದೆ.

Video Of A Boy who Jumped Into Vv Sagar Dam To Make Tik Tok Is Viral

ಆತ ಜಿಗಿದು ಈಜಿದ ವೀಡಿಯೋವನ್ನು ಆತನ ಸಹಪಾಠಿಗಳೇ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆತ ಜಲಾಶಯಕ್ಕೆ ಜಿಗಿದ ನಂತರ ಸುರಕ್ಷಿತವಾಗಿ ದಡ ಸೇರಿದ್ದಾನೆ. ಯುವಕ ಹಿರಿಯೂರಿನವರು ಎಂದು ತಿಳಿದುಬಂದಿದೆ.

Video Of A Boy who Jumped Into Vv Sagar Dam To Make Tik Tok Is Viral

"ಹೊಸ ವರ್ಷದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು, ವಾಚ್ ಮ್ಯಾನ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ನಾನು ಕೂಡ ಅಲ್ಲಿಯೇ ಇದ್ದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಆದರೆ ಅಧಿಕಾರಿಗಳನ್ನು ಕಣ್ಣು ತಪ್ಪಿಸಿ ಈ ಯುವಕ ಹುಚ್ಚಾಟ ಮೆರೆದಿದ್ದಾನೆ" ಎಂದು ಹಿರಿಯೂರು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿ ದರ್ಶನ್ "ಒನ್ ಇಂಡಿಯಾ"ಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+