ಚಿತ್ರದುರ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ : ಡಿ ಸುಧಾಕರ್ ಆಯ್ಕೆ
ಚಿತ್ರದುರ್ಗ, ಮೇ 31: ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿ. ಸುಧಾಕರ್ ಅವರು ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಳ್ಳಕೆರೆ ಶಾಸಕ ಹಾಗೂ ಹಟ್ಟಿ ಚಿನ್ನದ ನಿಗಮದ ಅಧ್ಯಕ್ಷ ಟಿ. ರಘುಮೂರ್ತಿ ಅಭಿನಂದಿಸಿದ್ದಾರೆ. ನಂತರ ಮಾತನಾಡಿದ ಸುಧಾಕರ್, ಮುಂದಿನ ದಿನಗಳಲ್ಲಿ ಠೇವಣಿಯನ್ನು ಇನ್ನೂರು ಕೋಟಿಗೆ ಹೆಚ್ಚಿಸುವುದೇ ನನ್ನ ಗುರಿಯಾಗಿದೆ ಎಂದರು.

ಹಿರಿಯೂರು ತಾಲ್ಲೂಕಿನ ಹಿರಿಯೂರು ನಗರಸಭೆ ಮಾಜಿ ಅಧ್ಯಕ್ಷ ಈ ಮಂಜುನಾಥ್, ಖಾದಿ ರಮೇಶ್, ಓಂಕಾರಪ್ಪ ಸೇರಿದಂತೆ ನೂರಾರು ಅಭಿಮಾನಿಗಳು ಡಿ. ಸುಧಾಕರ್ ನವರನ್ನು ಅಭಿನಂದಿಸಿದರು.












Click it and Unblock the Notifications