ಹೊಸದುರ್ಗ: ಏಪ್ರಿಲ್‌ನಲ್ಲಿ ಚುನಾವಣೆ ನಡೆಯುತ್ತೆ, ಹಿಂದೆ ಮಾಡಿದ ತಪ್ಪು ಮಾಡ್ಬೇಡಿ- ಸಿದ್ದರಾಮಯ್ಯ

ಚಿತ್ರದುರ್ಗ, ಅಕ್ಟೋಬರ್ 20 : 2023ರ ವಿಧಾನಸಭಾ ಚುನಾವಣೆ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ. ಹಿಂದೆ ಮಾಡಿದ ತಪ್ಪಗಳನ್ನು ಮತ್ತೆ ಮಾಡಬೇಡಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಕಾರ್ಯಕರ್ತರಿಗೆ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಶಾಸಕ ಬಿಜಿ ಗೋವಿಂದಪ್ಪ ಅವರ 68ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭಕೋರಿ ಮಾತನಾಡಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗ್ಯಾಸ್, ಪೆಟ್ರೋಲಿಯಂ, ಬೆಲೆ ಏರಿಕೆಯಾಗುತ್ತಿದೆ. ತಿನ್ನುವ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ತಂದಿದ್ದಾರೆ. ಬರುವ ಮುಂದಿನ ಚುನಾವಣೆಯಲ್ಲಿ ಜಾತಿ, ಗೀತಿ ನೋಡಬೇಡಿ, ಗೋವಿಂದಪ್ಪಗೆ ವೋಟು ಹಾಕ್ತಿರಾ ಅಲ್ವಾ ಎಂದರು. ವಿಧಾನಸಭೆಯಲ್ಲಿ ಗೋವಿಂದಪ್ಪ ಇರಬೇಕು ಕಾರ್ಯಕರ್ತರಿಗೆ ಕರೆ ನೀಡಿದರು.

ಭಾರತ್ ಜೋಡೊ ಯಾತ್ರೆ ಬಿಟ್ಟು, ಹೊಸದುರ್ಗ ಪಟ್ಟಣಕ್ಕೆ ಗೋವಿಂದಪ್ಪ ಅವರಿಗೆ ಜನ್ಮ ದಿನದ ಶುಭಾಶಯ ಕೋರಲು ಬಂದಿದ್ದೇನೆ. ಬಿಜಿ ಅವರು ನನಗಿಂತ ಮೊದಲೇ 2006 ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ಅವರ ಜನ್ಮದಿನವನ್ನು ಅದ್ದೂರಿಯಾಗಿ ಮಾಡಿದ್ದೀರಿ, ಎಲ್ಲಾರಿಗೂ ಧನ್ಯವಾದಗಳು ಎಂದರು.

Siddaramaiah Requests the People of Hosadurga to support BJ Govindappa in Next Election

ಕೆಲವೇ ಕೆಲವು ರಾಜಕಾರಣಿಗಳಲ್ಲಿ ಸರಳ ವ್ಯಕ್ತಿ ಗೋವಿಂದಪ್ಪ ಕೂಡ ಒಬ್ಬರಾಗಿದ್ದಾರೆ. ಮೂರು ಭಾರಿ ಶಾಸಕರಾದರೂ ಸಹ ಸರಳ ವ್ಯಕ್ತಿತ್ವ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರು ಸಹ ಜನರ ನಡುವೆ ಇದ್ದಾರೆ ಇದು ಬಹಳ ಮುಖ್ಯ ಎಂದು ತಿಳಿಸಿದರು.

ನಾನು ಸಿಎಂ ಆಗಿದ್ದಾಗ ಹೊಸದುರ್ಗ ಅಭಿವೃದ್ಧಿ ಸಂಬಂಪಟ್ಟ ಯಾವುದೇ ಪತ್ರ ಕೊಟ್ಟರು ಅನುದಾನ ಕೊಟ್ಟಿದ್ದೇನೆ. ಬಿಜಿ ಅವರು ಒಂದು ದಿನವೂ ಮಂತ್ರಿ ಸ್ಥಾನ ಕೊಡಿ ಎಂದು ಕೇಳಲ್ಲಿಲ್ಲ. ನಾನು ಮುಖ್ಯಮಂತ್ರಿ ಆದಾಗ 15 ಲಕ್ಷ ಮನೆಗಳನ್ನು ನೀಡಿದ್ದೇನೆ. ಬಿಜೆಪಿಯವರ ಯೋಗ್ಯತೆಗೆ ನಾವು ಕೊಟ್ಟ ಗ್ರ್ಯಾಂಟ್ ಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರ ಏನು ಮಾಡಿಲ್ಲ ಬರೀ ಲೂಟಿ ಮಾಡಿದೆ. 40% ಕಮಿಷನ್ ಆರೋಪ ನಾವು ಹೇಳಿದ್ದಲ್ಲ, ಪ್ರಧಾನಿ ಅವರಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಮೋದಿ ಹೇಳುತ್ತಾರೆ ನಾನು ತಿನ್ನಲ್ಲ, ತಿನ್ನಲು ಬಿಡಲ್ಲ ಅಂತಾ, ಒಂದು ವರ್ಷ ಮೂರು ತಿಂಗಳು ಆಯಿತು ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು..?

ಸಿಬಿಐಗೆ ಕೊಟ್ಟು ತನಿಖೆ ಮಾಡಿಸಬೇಕಿತ್ತು. ಯಾಕೆ ಮಾಡಲ್ಲಿಲ್ಲ. ಬೊಮ್ಮಾಯಿ ಅವರೇ ತಾಕತ್ ಇದ್ರೆ ಭ್ರಷ್ಟಾಚಾರದ ಬಗ್ಗೆ ನಮ್ಮ ಸರಕಾರದ್ದು ಸೇರಿ, ನಿಮ್ಮ ಸರ್ಕಾರದ್ದು ತನಿಖೆ ನೆಡಿಸಿ, ಒಪನ್ ಚಾಲೆಂಜ್ ಮಾಡುತ್ತೇನೆ ಎಂದು ಸಿಎಂಗೆ ಸವಾಲು ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+