• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆವ್ವ ಬಿಡಿಸುವ ನೆಪದಲ್ಲಿ ಯುವತಿಯ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ

|

ಚಿತ್ರದುರ್ಗ, ಅಕ್ಟೋಬರ್ 31: ದೆವ್ವ ಬಿಡಿಸುವ ನೆಪದಲ್ಲಿ ಯುವತಿಯ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ತಡವಾಗಿ ಬೆಳಕಿ ಬಂದಿದೆ.

ಚಿತ್ರದುರ್ಗ ಜಿಲ್ಲೆಯ ತಾಲೂಕಿನ ಭರಮಸಾಗರ ಗ್ರಾಮದಲ್ಲಿ, ದೆವ್ವ ಬಿಡಿಸುವ ನೆಪದಲ್ಲಿ 19 ವರ್ಷದ ಯುವತಿಗೆ, ನೀರಿನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕೊಟ್ಟು ಕುಡಿಸಿ, ಆಕೆಯ ಪ್ರಜ್ಞೆ ತಪ್ಪಿಸಿ ಅಶ್ಲೀಲ ವಿಡಿಯೋ ಮಾಡಿರುವ ಭಾಸ್ಕರ್ ಎಂಬ ಯುವಕ ನಂತರ ಯುವತಿಗೆ ಬೆದರಿಕೆ ಒಡ್ಡಲು ಆರಂಭಿಸಿದ್ದಾನೆ. ಆಕೆಗೆ ಆ ವಿಡಿಯೋ ತೋರಿಸಿ ಬೆದರಿಸಿ, ಯುವತಿಯನ್ನು ವಿವಾಹ ಕೂಡ ಆಗಿದ್ದಾನೆ.

ಮಕ್ಕಳ ಅಶ್ಲೀಲ ವಿಡಿಯೋ ಪೋಸ್ಟ್ ಮಾಡುತ್ತಿದ್ದ ರೌಡಿ ಶೀಟರ್ ಬಂಧನ

ಭಾಸ್ಕರ್ ನ ತಂದೆ ಶರಣಪ್ಪ ಮಂತ್ರವಾದಿ ಎನಿಸಿಕೊಂಡಿದ್ದು, ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮಾಟ ಮಂತ್ರ ನಡೆಸುತ್ತಿದ್ದ ಎನ್ನಲಾಗಿದೆ. ಇತ್ತ ಭಾಸ್ಕರ್ ಅಶ್ಲೀಲ ಫೋಟೊ ವಿಡಿಯೋ ತೋರಿಸಿ ಹೇಳಿದಂತೆ ಕೇಳದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಯುವತಿಯನ್ನು ಪಾವಗಡಕ್ಕೆ ಕರೆದೊಯ್ದು ಮದುವೆ ಮಾಡಿಕೊಂಡಿರುವುದಾಗಿ ದೂರು ಬಂದಿದೆ.

   Yediyurappa Valmiki ನಾಯಕರಿಗೆ ಒಳ್ಳೇದೇ ಮಾಡ್ತಾರೆ | Sriramulu | Oneindia Kannada

   ಐದು ತಿಂಗಳ ಹಿಂದೆ 14 ವರ್ಷದ ಅಪ್ರಾಪ್ತೆಯನ್ನು ಭಾಸ್ಕರ್ ವಿವಾಹವಾಗಿ, ತನ್ನನ್ನೂ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಯುವತಿಯ ಪೋಷಕರು ಹಾಗೂ ಯುವತಿ ಜಿಲ್ಲಾ ವರಿಷ್ಠಾಧಿಕಾರಿ ಜಿ. ರಾಧಿಕಾ ಅವರಿಗೆ ದೂರು ನೀಡಿದ್ದಾರೆ.

   English summary
   A man threatens young woman by obscene video extorts at chitradurga,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X