ಹೊಸದುರ್ಗ-ಬೆಂಗಳೂರು; ನೂತನ ರಾಜಹಂಸ ಬಸ್, ವೇಳಾಪಟ್ಟಿ

ಚಿತ್ರದುರ್ಗ, ಫೆಬ್ರವರಿ 04: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗದ ಹೊಸದುರ್ಗ ಮತ್ತು ಬೆಂಗಳೂರು ನಡುವೆ ರಾಜಹಂಸ ಬಸ್‌ಗಳನ್ನು ಓಡಿಸಲಿದೆ. ಬಸ್‌ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕೆಎಸ್ಆರ್ ಟಿಸಿಯ ಚಿತ್ರದುರ್ಗ ವಿಭಾಗ ಹೊಸದುರ್ಗ ಘಟಕದಿಂದ ಈ ಬಸ್‌ಗಳನ್ನು ಓಡಿಸಲಾಗುತ್ತಿದೆ. ಪ್ರತಿದಿನ ಈ ಬಸ್‌ಗಳು ಸಂಚಾರ ನಡೆಸಲಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಹೊಸದುರ್ಗದಿಂದ ಹೊರಡುವ ಬಸ್ ಹಿರಿಯೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಲಿದೆ. ಹೊಸದುರ್ಗ-ಮಾಡದಕೆರೆ-ಮಾರಿಕಣಿವೆ-ಹಿರಿಯೂರು- ಬೆಂಗಳೂರು ಮಾರ್ಗವಾಗಿ ಬಸ್ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

KSRTC Announces Rajahamsa Bus Between Hosadurga And Bengaluru

ವೇಳಾಪಟ್ಟಿ: ನೂತನ ರಾಜಹಂಸ ಬಸ್ ಹೊಸದುರ್ಗದಿಂದ ಬೆಳಗ್ಗೆ 5.15, 11 ಗಂಟೆ ಮತ್ತು ಸಂಜೆ 5 ಗಂಟೆಗೆ ಹೊರಡಲಿದೆ. ಹೊಸದುರ್ಗ-ಮಾಡದಕೆರೆ-ಮಾರಿಕಣಿವೆ-ಹಿರಿಯೂರು-ಬೆಂಗಳೂರು ಮಾರ್ಗದಲ್ಲಿ ಬಸ್ ಸಂಚಾರ ನಡೆಸಲಿದೆ.

ಬೆಂಗಳೂರಿನಿಂದ ಬೆಳಗ್ಗೆ 11.15, ಸಂಜೆ 4 ಗಂಟೆ ಮತ್ತು ರಾತ್ರಿ 10 ಗಂಟೆಗೆ ಬಸ್ ಹೊರಡಲಿದೆ. ಬೆಂಗಳೂರು-ಹಿರಿಯೂರು-ಮಾರಿಕಣಿವೆ-ಮಾಡದಕೆರೆ-ಹೊಸದುರ್ಗ ಮಾರ್ಗದಲ್ಲಿ ಸಂಚಾರ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+