ಅಮೆರಿಕದ ಏಂಜಲ್ಸ್ ಫಾಲ್ಸ್ ಹತ್ತಲು ಜ್ಯೋತಿರಾಜ್ ದೇಹ ತೂಕ ಅಡ್ಡಿ
ಚಿತ್ರದುರ್ಗ, ಫೆಬ್ರವರಿ 29: ಚಿತ್ರದುರ್ಗದ ಜ್ಯೋತಿರಾಜ್ ಫೆಬ್ರವರಿ 26, 27ರಂದು ಅಮೆರಿಕದ ಅತಿ ಎತ್ತರದ ಏಂಜಲ್ ಫಾಲ್ಸ್ ಹತ್ತುವ ನಿರ್ಣಯದ ಕುರಿತು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಆದರೆ ಅದಕ್ಕೀಗ ಜ್ಯೋತಿರಾಜ್ ದೇಹದ ತೂಕ ಅಡ್ಡಿಯಾಗಿದೆ. ಹೀಗಾಗಿ ಏಂಜಲ್ ಫಾಲ್ಸ್ ಹತ್ತುವ ಕಾರ್ಯವನ್ನು ಮುಂದೂಡಲಾಗಿದೆ.
ಜ್ಯೋತಿರಾಜ್, ವಿಶ್ವದ ಅತಿ ಎತ್ತರದ ಫಾಲ್ಸ್ ಹತ್ತುವ ಸಾಹಸ ಮಾಡುವುದನ್ನು ಕೇಳಿದ್ದ ರಾಜ್ಯದ ಜನತೆ ಹಾಗೂ ಹಿತೈಷಿಗಳು ಅವರಿಗೆ ಶುಭ ಕೋರಿದ್ದರು.

"ಎರಡು ದಿನಗಳ ಹಿಂದೆ ಜ್ಯೋತಿರಾಜ್ ಏಂಜಲ್ ಫಾಲ್ಸ್ ಹತ್ತಿದ್ದಾರೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಆದರೆ ಅವೆಲ್ಲವೂ ಸುಳ್ಳು, ಜ್ಯೋತಿರಾಜ್ ಅವರ ದೇಹದ ತೂಕ 85 ಕೆ.ಜಿ ಇದ್ದು, ಫಾಲ್ಸ್ ಹತ್ತಲು ದೇಹದ ತೂಕವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಆಯುರ್ವೇದದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ" ಎಂದು ಅವರ ಸ್ನೇಹಿತ ಬಸವರಾಜ್ ತಿಳಿಸಿದ್ದಾರೆ.
ಹಾಗಾಗಿ ಈ ತಿಂಗಳ 26 ಹಾಗೂ 27ರಂದು ಫಾಲ್ಸ್ ಹತ್ತಲು ಅವರಿಗೆ ಸಾಧ್ಯವಾಗಿಲ್ಲ. ಏಪ್ರಿಲ್ ತಿಂಗಳಲ್ಲಿ ಈ ಸಾಧನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.












Click it and Unblock the Notifications