ಚಿತ್ರದುರ್ಗದಲ್ಲಿ ನವೆಂಬರ್‌ 4ರಂದು ಉದ್ಯೋಗ ಮೇಳ, ನೇರ ಸಂದರ್ಶನ

ಚಿತ್ರದುರ್ಗ, ನವೆಂಬರ್‌, 02: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ತಿಂಗಳ ನವೆಂಬರ್ 4ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದಲ್ಲಿ ಕಲರ್ಸ್ ಟೆಕ್ನಾಲಜಿ ಕಂಪನಿಯು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ, ಜಿಲ್ಲಾ ಪ್ರೋಗ್ರಾಂ ಪ್ಲಾನಿಂಗ್ ಆಫೀಸರ್ಸ್, ವೀಭಾಗೀಯ ಪ್ರೋಗ್ರಾಂ ಪ್ಲಾನಿಂಗ್ ಆಫೀಸರ್‌, ಟೆಲಿಕಾಲರ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದಾರೆ.

ವಿದ್ಯಾರ್ಹತೆ:

60 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಬಿಎ, ಬಿಕಾಂ, ಬಿಸಿಎ, ಬಿಎಸ್‌ಸಿ, ಡಿಇಡಿ, ಬಿಇಡಿ, ಎಂಎ, ಎಂ.ಕಾಂ, ಎಂಎಸ್‌ಸಿ, ಎಂಸಿಎ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ 6,000 ದಿಂದ 16,000 ವೇತನವನ್ನು ನಿಗದಿಪಡಿಸಲಾಗಿದೆ. ಜಿಲ್ಲಾ ಪ್ರೋಗ್ರಾಂ ಪ್ಲಾನಿಂಗ್ ಆಫೀಸರ್ ಹುದ್ದೆಗೆ ಎಂಎ, ಎಂಕಾಂ, ಎಂಎಸ್‌ಸಿ, ಎಂಸಿಎ, ಎಂಬಿಎ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗೆ ಒಂದು ಹುದ್ದೆ ಖಾಲಿ ಇದೆ. ಡಿವಿಜನ್ ಪ್ರೋಗ್ರಾಮಿಂಗ್ ಪ್ಲಾನಿಂಗ್ ಆಫೀಸರ್ ಹುದ್ದೆಗೆ ಬಿಎ, ಬಿಕಾಂ, ಬಿಸಿಎ, ಬಿಎಸ್‌ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಎರಡು ಹುದ್ದೆಗಳು ಖಾಲಿ ಇವೆ. ಇವರಿಗೆ 16 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ವೇತನ ನೀಡಲಾಗುವುದು.

ಅಭ್ಯರ್ಥಿಗಳಿಗೆ ನೀಡುವ ಸಂಬಳದ ವಿವರ

ಇನ್ನು ಡಿವಿಜನ್ ಪ್ರೋಗ್ರಾಮಿಂಗ್ ಪ್ಲಾನಿಂಗ್ ಆಫೀಸರ್ ಹುದ್ದೆಗೆ ಬಿಎ, ಬಿಕಾಂ. ಬಿಸಿಎ. ಎಂಸಿಎ, ಎಂಬಿಎ, ಎಂಎಸ್ಸಿ, ಎಂಎ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಎರಡು ಹುದ್ದೆ ನಿಗದಿಪಡಿಸಲಾಗಿದೆ. ಇವರಿಗೆ 16 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ವೇತನ ನೀಡಲಾಗುವುದು. ಟೆಲಿಕಾಲರ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಪಿಯುಸಿ ಅಥವಾ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳಿಗೆ 6 ಹುದ್ದೆಗಳನ್ನು ನಿಗದಿಪಡಿಸಿದ್ದು, ಇವರಿಗೆ 6 ರಿಂದ 10 ಸಾವಿರ ರೂಪಾಯಿಗಳವರೆಗೂ ವೇತನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

Job Fair, Direct Interview for various jobs in Chitradurga

ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಭಾವಚಿತ್ರಗಳನ್ನು ಸಂದರ್ಶನಕ್ಕೆ ತರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ 7022459064, 8310785143, 8105619020ಕ್ಕೆ ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ. ಈ ಬಗ್ಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+