ಕಸಾಯಿಖಾನೆಗೆ ಸಾಗಿಸುತಿದ್ದ ಕರುಗಳನ್ನು ರಕ್ಷಿಸಿದ ಹೊಸದುರ್ಗ ಪಿಎಸ್ಐ
ಚಿತ್ರದುರ್ಗ, ಜನವರಿ 30: ಒಂದೇ ವಾಹನದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸು ಮತ್ತು ಕರುಗಳನ್ನು ಹೊಸದುರ್ಗ ತಹಶೀಲ್ದಾರ್ ತಿಪ್ಪೇಸ್ವಾಮಿ ಮತ್ತು ಪಿಎಸ್ಐ ಶಿವಕುಮಾರ್ ಮತ್ತು ಭಜರಂಗದಳ ಕಾರ್ಯಕರ್ತರು ಸೇರಿ ರಕ್ಷಿಸಿದ್ದಾರೆ.
2 ಹಸು ಮತ್ತು 19 ಕರುಗಳನ್ನು ಒಂದೇ ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ, ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಅಧಿಕಾರಿಗಳು ಹೊಸದುರ್ಗದ ಎಪಿಎಂಸಿ ಮಾರುಕಟ್ಟೆ ಬಳಿ ಗೋವುಗಳನ್ನು ರಕ್ಷಿಸಿದ್ದಾರೆ.

ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿ, ಚಿಕ್ಕ ಕರುಗಳಿಗೆ ಹಾಲು ಕುಡಿಸಿ ಮಾನವೀಯತೆ ಮೆರೆದಿದ್ದಾರೆ. ನಂತರ ಹಸು ಮತ್ತು ಕರುಗಳನ್ನು ವಿಶ್ವ ಜನನಿ ಗೋ ಶಾಲೆಗೆ ಬಿಡಲಾಗಿದೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿ ಮತ್ತು ಭಜರಂಗದಳದ ಕಾರ್ಯಕರ್ತರು ಹಾಜರಿದ್ದರು.












Click it and Unblock the Notifications