ಕಾಂಗ್ರೆಸ್ ಮಾಡುತ್ತಿರುವುದು ಭಾರತ್ ಜೋಡೊ ಅಲ್ಲ, ಭಾರತ್ ತೋಡೋ: ಬಿ.ಸಿ. ಪಾಟೀಲ್ ವ್ಯಂಗ್ಯ

ಚಿತ್ರದುರ್ಗ, ಸೆಪ್ಟೆಂಬರ್‌, 07: ಕಾಂಗ್ರೆಸ್ ಪಕ್ಷ ಕನ್ಯಾಕುಮಾರಿಯಿಂದ ದೆಹಲಿಗೆ ಹಮ್ಮಿಕೊಂಡಿರುವ "ಭಾರತ್ ಜೋಡೋ" ಯಾತ್ರೆ "ಭಾರತ್ ತೋಡೋ" ಕಾಂಗ್ರೆಸ್ ಆಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಚಿತ್ರದುರ್ಗದಲ್ಲಿ ಕಿಡಿಕಾರಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಪ್ರವಾಸಿ ಮಂದಿರಲ್ಲಿ ಮತನಾಡಿದ ಅವರು ಈಗಾಗಲೇ ಕಾಂಗ್ರೆಸ್‌ ಅನ್ನು ಅವರ ಪಕ್ಷದವರೇ "ತುಕ್ಡ ತುಕ್ಡ" ಮಾಡಿದ್ದಾರೆ. ಇನ್ನು ಬಿಜೆಪಿಯವರು ವಲಸಿಗರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು ಸಿದ್ದರಾಮಯ್ಯ ಅವರು ಮೊದಲು ಜೆಡಿಎಸ್ ಪಕ್ಷದಲ್ಲಿದ್ದವರು. ಹಾಗಾದ್ರೆ ಅವರು ಕಾಂಗ್ರೆಸ್‌ಗೆ ವಲಸೆ ಹೋಗಿಲ್ವಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ಗೆ ಯಾಕೆ ಹೋಗಿದ್ದಾರೋ ಗೊತ್ತಿಲ್ಲ ಎಂದರು.

ಡಿ.ಕೆ.ಶಿ ವಿರುದ್ಧ ಬಿಸಿ ಪಾಟೀಲ್‌ ವಾಗ್ದಾಳಿ:

ಬಿಜೆಪಿಯವರು ಬೆಂಗಳೂರಿನಲ್ಲಿ ಒತ್ತುವರಿ ಮಾಡಿದ್ದಾರೆ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್‌ ಅವರು ಮಂತ್ರಿ ಆಗಿದ್ದಾಗ ಒತ್ತುವರಿ ತೆರವು ಮಾಡಬಹುದಿತ್ತು. ಆಗ ಯಾಕೆ ಅವರು ಒತ್ತುವರಿ ತೆರವು ಮಾಡಲಿಲ್ಲ? ಬಿಬಿಎಂಪಿಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಅವಧಿ ಆಡಳಿತ ನಡೆಸಿದೆ. ಆಡಳಿತದಲ್ಲಿ ಕಾಂಗ್ರೆಸ್‌ನವರು ಬರೀ ಒತ್ತುವರಿ ಮಾಡಿದ್ದಾರೆ. ಬೆಂಗಳೂರು ಅವಂತಾರಕ್ಕೆ ಕಾಂಗ್ರೆಸ್ ಕಾರಣ ಎಂದು ತಿರುಗೇಟು ನೀಡಿದರು.

Congress doing not Bharat jodo, its Bharat thodo: Minister BC Patil

ಮುರುಘಾ ಶ್ರೀಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, "ಮುರುಘಾ ಶರಣರ ಪ್ರಕರಣ ತನಿಖೆಯಲ್ಲಿದ್ದು, ಪೊಲೀಸ್‌ ಇಲಾಖೆಯವರು ಪ್ರಕರಣದ ತೂಕದ ಮೇಲೆ ಅವರನ್ನು ಬಂಧಿಸಿ ವಿಚಾರಣೆ ಮಾಡಿ, ಸ್ಥಳ ಮಹಜರು ನಡೆಸಿದ್ದಾರೆ. ಅದರ ಇನ್ನು ಬಗ್ಗೆ ತನಿಖೆ ನಡೆಯುತ್ತಿದೆ. ಹಾಗಾಗಿ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ," ಎಂದರು.

ಬೆಳೆ ಹಾನಿಗೆ ಪರಿಹಾರದ ಭರವಸೆ

ಸೆಪ್ಟೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಳೆ ಆಗಿದೆ. ಚಿತ್ರದರ್ಗ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಾಲ್ಕು ಚಿಕ್ಕ ಹಾಗೂ ನಾಲ್ಕು ದೊಡ್ಡ ಪ್ರಾಣಿಗಳು ಮೃತಪಟ್ಟಿವೆ. ಅವುಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಐದು ಮನೆಗೆಳು ಜಲಾವೃತವಾಗಿವೆ. 30 ಮನೆಗಳು ಸ್ವಲ್ಪ ಮಟ್ಟಿಗೆ ಹಾನಿ ಆಗಿದ್ದು, ಅವುಗಳಿಗೂ ಪರಿಹಾರ ನೀಡಲಾಗಿದೆ ಎಂದರು.

ವಾಣಿ ವಿಲಾಸ ಸಾಗರದ ಜಲಾಶಯ ತುಂಬಿದ್ದು, ಅತಿ ಸಂತೋಷವನ್ನು ಉಂಟು ಮಾಡಿದೆ. 89 ವರ್ಷಗಳ ಬಳಿಕ ವಾಣಿ ವಿಲಾಸ ಸಾಗರದ ಡ್ಯಾಂ ತುಂಬಿ ಕೋಡಿ ಬಿದ್ದಿರುವುದು ಸಂತೋಷ ಆಗುತ್ತಿದೆ. ಹಿರಿಯೂರಿನ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ, ಕೆಲವು ಮನೆಗಳು ಜಲಾವೃತವಾಗಿವೆ. ನೆರೆ ಸಂತ್ರಸ್ತರಿಗೆ ಗಂಜಿ ಕೇಂದ್ರಹಗಳನ್ನು ಪ್ರಾರಂಭಿಸಲಾಗಿದೆ. ಇದರ ಬಗ್ಗೆ ಸ್ಥಳೀಯ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ 50,136 ಹೆಕ್ಟೇರ್ ಬೆಳೆ ನಾಶ :

ಜಿಲ್ಲೆಯಲ್ಲಿ 50,136 ಹೆಕ್ಟೇರ್ ಬೆಳೆ ನಾಶ ಉಂಟಾಗಿದ್ದು, ಜಂಟಿ ಸರ್ವೇ ಮುಗಿದಿದೆ. ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಾನಿಗೊಳಗಾದ ಮನೆಗೆಳನ್ನು ಸರ್ವೇ ಮಾಡಲು ತಿಳಿಸಲಾಗಿದ್ದು, ಸರ್ವೆ ಮುಗಿದ ಬಳಿಕ, ಸೆಪ್ಟೆಂಬರ್ 12ರೊಳಗೆ ಪರಿಹಾರ ಬಿಡುಗಡೆ ಮಾಡಲಾಗುತ್ತದೆ. ಇಂದು ಎನ್‌ಡಿಆರ್‌ಫ್ ತಂಡ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಲಿದೆ. ಈಗಾಗಲೇ ಇಲ್ಲಿನ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಮುಂದಿನ ನಾಲ್ಕೈದು ದಿನ ಮಳೆ ಆಗುವ ಸಾಧ್ಯತೆ ಇರುವುದರಿಂದ ‌ಅಧಿಕಾರಿಗಳು ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿ ಹೇಳಬೇಕು ಎಂದು ಸಚಿವರು ತಿಳಿಸಿದರು.

ವೇದಾವತಿ ನದಿ ಪಾತ್ರದದಲ್ಲಿ ಜಲಾವೃತವಾಗಿರುವ ಮನೆಗಳ ಸ್ಥಳಕ್ಕೆ ಭೇಟಿ ನೀಡಿ ತರಾತುರಿಯಲ್ಲಿ ಪರಿಶೀಲನೆ ಮಾಡಿ, ಸಚಿವರು ತೆರಳಿದ್ದಾರೆ. ಈ ಸಂದರ್ಭದಲ್ಲಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೇರಿ, ಜಿಲ್ಲಾ ವರಿಷ್ಠಾಧಿಕಾರಿ ಪರುಶುರಾಮ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+