ಚಿತ್ರದುರ್ಗ ಜಿಲ್ಲಾಧಿಕಾರಿ ಕಾರು ಅಪಘಾತ

ಚಿತ್ರದುರ್ಗ, ಫೆಬ್ರವರಿ 18: ಕೆಎಸ್ಆರ್ಟಿಸಿ ಬಸ್ ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿಯಾದ ವಿನೋತ್ ಪ್ರಿಯಾ ಚಲಿಸುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ನಜ್ಜುಗುಜ್ಜಾಗಿದೆ.

ಸದ್ಯ ಯಾವುದೇ ಯಾರಿಗೂ ಯಾವದೇ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದುಬಂದಿದೆ. ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದ ಬಳಿ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಕಾರಿಗೆ ಅಡ್ಡಲಾಗಿ ಬಂದ ಹಸು ತಪ್ಪಿಸಲು ಹೋಗಿ ಬಸ್ ಗೆ ಡಿಕ್ಕಿಯಾಗಿದೆ.

Chitradurga DC Car Accident In Holalkere

ಜಿಲ್ಲಾಧಿಕಾರಿಯವರ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಚಿತ್ರದುರ್ಗದಿಂದ ಹೊಳಲ್ಕೆರೆ ತಾಲ್ಲೂಕಿಗೆ ವೀಕ್ಷಣೆಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗದಿಂದ ಚಿತ್ರದುರ್ಗ ಕಡೆಗೆ ತೆರಳುತ್ತಿದ್ದ ಬಸ್ ಗೂ ಪರಸ್ಪರ ಡಿಕ್ಕಿಯಾಗಿದೆ.

Oneindia Kannada on Twitter

ಶಿವಗಂಗಾ ಗ್ರಾಮದ ಬಳಿ ಚಿತ್ರದುರ್ಗ ಡಿಸಿ ಕಾರಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಸಿಸಿ ದೃಷ್ಯ ಒನ್ ಇಂಡಿಯಾಗೆ ಲಭ್ಯ #Chitradurga | #Dccaraccident | #Holalkere https://t.co/RrHJ5dHJb9

ಅಪಘಾತವಾದ ನಂತರ ಬೇರೆ ಕಾರಿನಲ್ಲಿ ಮರಳಿದ ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಕೂಡಲೇ ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿ ಚಿತ್ರಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+