ಹನಿಟ್ರ್ಯಾಪ್‌ಗೆ ಯತ್ನ: ಬೆತ್ತಲಾಗಿ ಬಿಜೆಪಿ ಶಾಸಕನಿಗೆ ಕರೆ ಮಾಡಿದ ಯುವತಿ
ಚಿತ್ರದುರ್ಗ ನವೆಂಬರ್2: ಇತ್ತೀಚಿಗೆ ಸೈಬರ್ ಕ್ರೈಂ ಪ್ರಕರಣಗಳು, ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಚಿತ್ರದುರ್ಗದಲ್ಲಿಯೂ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದೀಗ ರಾಜಕಾರಣಿಗಳು ವಂಚಕರ ಟಾರ್ಗೆಟ್ ಆಗಿದ್ದಾರೆ.
ಚಿತ್ರದುರ್ಗದ ಹಿರಿಯ ಬಿಜೆಪಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಅವರನ್ನು ಯುವತಿಯೊಬ್ಬಳು ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿಗೆ ಯುವತಿಯೊಬ್ಬಳು ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡುವ ಮೂಲಕ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸುವ ಯತ್ನ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸ್ವತಃ ಶಾಸಕರೇ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಕಳೆದ ಎರಡು ದಿನಗಳಿಂದೆ ಶಾಸಕರು ತಮ್ಮ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸುವ ಸಂದರ್ಭದಲ್ಲಿ ಅಪರಿಚಿತ ಯುತಿಯೊಬ್ಬಳು ನಗ್ನವಾಗಿದ್ದುಕೊಂಡು ವಿಡಿಯೋ ಕಾಲ್ ಮಾಡಿದ್ದಾಳೆ. ಕೂಡಲೇ ಎಚ್ಚೆತ್ತುಕೊಂಡ ಶಾಸಕ ತಿಪ್ಪಾರೆಡ್ಡಿ ಅವರು, ನಗ್ನ ಯುವತಿ ನೋಡಿದ ಕೂಡಲೇ ವಿಡಿಯೋ ಕಾಲ್ ಕಡಿತ ಮಾಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ಶಾಸಕರನ್ನು ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುಲು ಯತ್ನಿಸಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಅಪರಿತರು ಶಾಸಕರನ್ನು ಹನಿಟ್ರ್ಯಾಪ್‌ಗೆ ಬೀಳಿಸುವ ಯತ್ನ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಶಾಸಕ ತಿಪ್ಪಾರೆಡ್ಡಿ ಚಿತ್ರದುರ್ಗ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಶಾಸಕರ ದೂರು ದಾಖಲು ಮಾಡಿಕೊಂಡ ಪೊಲೀಸರು ದಾಖಲೆಗಳನ್ನು ಕಲೆ ಹಾಕಿ, ನಗ್ನವಾಗಿ ವಿಡಿಯೋ ಕಾಲ್ ಮಾಡಿದ ಯುವತಿ ಅಥವಾ ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಗ್ಯಾಂಗ್ ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯ ಶಾಸಕರು ನೀಡಿದ ಮಾಹಿತಿ ಮೇರೆಗೆ ಚಿತ್ರದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಾಸಕ ತಿಪ್ಪಾರೆಡ್ಡಿ, ''ಅಪರಿಚಿತ ಮಹಿಳೆಯಿಂದ ವಾಟ್ಸಪ್‍ನಲ್ಲಿ ವಿಡಿಯೋ ಕಾಲ್ ಬಂದಿತ್ತು. ಕ್ಷೇತ್ರದ ಜನರು ಅಥವಾ ಸಂಬಂಧಿಕರು ಎಂದು ಕಾಲ್ ರಿಸೀವ್ ಮಾಡಿದೆ. ಆದರೆ ಅವರ ಭಾಷೆ ನನಗೆ ಅರ್ಥವಾಗಿಲ್ಲ. ಆ ಸಮಯದಲ್ಲಿ ನನ್ನ ಪತ್ನಿಗೆ ತಿಳಿಸಿ ತಕ್ಷಣ ಆ ನಂಬರ್ ಅನ್ನು ಬ್ಲಾಕ್ ಮಾಡಿಸಿದೆ. ಘಟನೆಯ ಕುರಿತು ಯಾರ ಮೇಲೂ ನನಗೆ ಅನುಮಾನವಿಲ್ಲ. ನನಗೆ ಯಾರು ವಿರೋಧಗಳಿಲ್ಲ'' ಎಂದಿದ್ದಾರೆ.












Click it and Unblock the Notifications