ಲಂಚ ಪ್ರಕರಣ: ಚಳ್ಳಕೆರೆ ತಾ.ಪಂ ಇಒ ಮನೆ ಮೇಲೆ ಎಸಿಬಿ ದಾಳಿ; 6 ಲಕ್ಷ ನಗದು ವಶ

ಚಿತ್ರದುರ್ಗ, ಮಾರ್ಚ್ 13: ಲಂಚ ಸ್ವೀಕರಿಸುವ ವೇಳೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಎಸಿಬಿ ಅಧಿಕಾರಿಗಳ ಬೆಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಪಂಚಾಯತಿ ಇಒ ಶ್ರೀಧರ್ ನಿವಾಸದ ಮೇಲೆ ಕೂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 6 ಲಕ್ಷ ರೂ. ನಗದು ಸೇರಿದಂತೆ ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

 Chitradurga: ACB Raid On Challakere Taluk Panchayat EO Residence; Rs 6 Lakh Cash Siezed

ಚಿತ್ರದುರ್ಗ ಜಿಲ್ಲೆಯ ಮಹಾವೀರ ಬಡಾವಣೆಯಲ್ಲಿರುವ ಶ್ರೀಧರ್ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದು, ಕಚೇರಿಯ ಅನೇಕ ಕಡತ ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

 Chitradurga: ACB Raid On Challakere Taluk Panchayat EO Residence; Rs 6 Lakh Cash Siezed

ಶ್ರೀಧರ್, ಬೆಳಗೆರೆ ಗ್ರಾಮ ಪಂಚಾಯತಿಯ 10 ಯೋಜನೆಗಳಿಗೆ ಅನುಮೋದನೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಪಿಡಿಒ ಗುಂಡಪ್ಪ ಬಳಿ ಶ್ರೀಧರ್ 20 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿದ್ದು, ಎಸಿಬಿ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

Recommended Video

      ನಾನು, ಗೀತಾ ಶಿವರಾಜ್‌ಕುಮಾರ್‌ ಇಬ್ಬರೂ ಕಾಂಗ್ರೆಸ್‌ ಸೇರುತ್ತಿದ್ದೇವೆ ಎಂದ ಮಾಜಿ ಶಾಸಕ ಮಧು ಬಂಗಾರಪ್ಪ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+