50 ವರ್ಷಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ: ಘಟನೆ ಏನು?
ಚಿತ್ರದುರ್ಗ, ಅಕ್ಟೋಬರ್ 29: ವ್ಯಕ್ತಿಯೊಬ್ಬ 50 ವರ್ಷಗಳ ಹಿಂದೆ ಮೃತಪಟ್ಟಿದ್ದು ಈಗ ಇದ್ದಕ್ಕಿದ್ದಂತೆ ಆದೆ ವ್ಯಕ್ತಿ ದಿಢೀರ್ ಪ್ರತ್ಯಕ್ಷವಾಗಿದ್ದು, ಪತ್ನಿ ಮಕ್ಕಳು ಶಾಕ್ ಆಗಿದ್ದಾರೆ.
ಈ ಘಟನೆ ಚಿತ್ರದುರ್ಗ ಜಿಲ್ಲೆಯ ಚಿತ್ರನಾಯಕನಹಳ್ಳಿ ಗ್ರಾಮದಲ್ಲಿ ವಿಚಿತ್ರ ಘಟನೆ ನಡೆದಿದೆ. 50 ವರ್ಷದ ಹಿಂದೆ ಈರಣ್ಣ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು.
ಮೃತ ದೇಹವನ್ನು ಕುಟುಂಬಸ್ಥರು ಸಮಾದಿ ಮಾಡಿದ್ದರು ಮರು ದಿನವೇ ಗುಂಡಿಯಲ್ಲಿ ದೇಹ ಇರಲಿಲ್ಲ ಎನ್ನಲಾಗಿದ್ದು, ಸಣ್ಣ ಈರಣ್ಣ, 50 ವರ್ಷದ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯಾಗಿದ್ದನು. ಈಗ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ ವ್ಯಕ್ತಿ ಹೇಗಿ ಬದುಕಿ ಬಂದ ಅನ್ನೋದೆ ಆಶ್ಚರ್ಯ ಉಂಟುಮಾಡಿದೆ. ಈಗ ಸತ್ತು ಹೋಗಿದ್ದ ಸಣ್ಣ ಈರಣ್ಣ 50 ವರ್ಷದ ಬಳಿಕ ಚಿತ್ರನಾಯಕನಹಳ್ಳಿಗೆ ಬಂದಿದ್ದಾನೆ.

ಇದ್ದಕಿದ್ದಂತೆ ಮನೆಗೆ ಬಂದ ಸಣ್ಣ ಈರಣ್ಣನನ್ನು ಮನೆಯಾವರು ಶಾಕ್ ಆಗಿದ್ದರು. ಮತ್ತೊಂದು ಕಡೆ ಹೆಂಡತಿಗ ಎತ್ತು ಇರಿದು ಗಾಯಗೊಂಡಿದ್ದರು, ಗಾಯಗೊಂಡಿದ್ದ ಹೆಂಡತಿಗೆ ಹೊಲಿಗೆ ಹಾಕಿಸಿದ್ದನ್ನು ಪತ್ತೆ ಗುರುತಿಸಿದ ಈರಣ್ಣ. ಹೆಂಡ್ತಿ ಈರಮ್ಮ, ಸಹೋದರರಾದ ಬೇವಣ್ಣ, ಅಜ್ಜಪ್ಪ, ಮಕ್ಕಳಾದ ಈರಣ್ಣ, ಮರಿಯಪ್ಪ, ಮತ್ತಿತರರನ್ನು ಈರಣ್ಣ ಗುರುತಿಸಿದ್ದಾರೆ.
ಅಲೆಮಾರಿಗಳು ಮೃತ ದೇಹ ಹೊತ್ತೊಯ್ದು ಮರು ಜೀವ ಕೊಟ್ಟಿದ್ದಾರೆ ಎನ್ನುತ್ತಿರುವ ಗ್ರಾಮಸ್ಥರು. ಈರಣ್ಣ ಇಷ್ಟು ವರ್ಷ ಆಂಧ್ರಪ್ರದೇಶದ ಅನಂತಪುರ ತಾಲೂಕಿನ ಗುಮ್ಮಗಟ್ಟೆಯಲ್ಲಿ ವಾಸವಾಗಿದ್ದರು.

ಕುರಿ ಗೊಬ್ಬರಕ್ಕಾಗಿ ಆಂಧ್ರಪ್ರದೇಶಕ್ಕೆ ಹೋಗಿದ್ದಾಗ ಸಂಬಂಧಿಕರಿಗೆ ಸಿಕ್ಕಿದ್ದಾನೆ ಎಂದು ಹೇಳಲಾಗಿದೆ. ಗುಮ್ಮಗಟ್ಟೆಯಲ್ಲಿ ಈರಣ್ಣ ಜೋಗಿ ಸಮುದಾಯದ ಜೊತೆಗಿದ್ದರು. ಅದೇ ಜೋಗಿ ಸಮುದಾಯದ ಅಕ್ಕ-ತಂಗಿಯನ್ನು ಈರಣ್ಣ ಮದುವೆಯಾಗಿದ್ದು, ಮೂರು ಜನ ಹೆಂಡತಿಯರ ಮುದ್ದಿನ ಗಂಡನಾಗಿದ್ದಾನೆ. ಇತ್ತ ಈರಜ್ಜನನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ತಂಡೋಪ ತಂಡವಾಗಿ ಬರುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications