ತೀವ್ರ ರಕ್ತಸ್ರಾವದಿಂದ ಬಾಣಂತಿ ಸಾವು; ವೈದ್ಯರ ಮೇಲೆ ಪೋಷಕರ ಆರೋಪ
ಚಿಕ್ಕಮಗಳೂರು, ಫೆಬ್ರವರಿ 04: ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವವಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
ಕೊಪ್ಪ ತಾಲೂಕಿನ ಹುಲುಗಾರು ಗ್ರಾಮದ ಉಷಾ (24) ಮೃತಪಟ್ಟ ಮಹಿಳೆ. ಉಷಾ ಅವರನ್ನು ಕೊಪ್ಪ ಆಸ್ಪತ್ರೆಗೆ ಸೇರಿಸಲಾಗಿತ್ತು. ಉಷಾ ಅವರು ಹೆರಿಗೆ ಸಂದರ್ಭ ತೀವ್ರ ಅಸ್ವಸ್ಥರಾಗಿದ್ದು, ತೀವ್ರ ಅಸ್ವಸ್ಥರಾದ ನಂತರ ಶಿವಮೊಗ್ಗಕ್ಕೆ ಕಳುಹಿಸಿಕೊಡಲಾಯಿತು. ಹೀಗಾಗೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಉಷಾ ಸಂಬಂಧಿಗಳು ದೂರಿದ್ದಾರೆ.

ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿಯ ಸಾವು ಸಂಭವಿಸಿದೆ ಎಂದು ಡಾ.ಬಾಲಕೃಷ್ಣ ಹಾಗೂ ದಾದಿಯರ ಮೇಲೆ ಮೃತ ಮಹಿಳೆ ಸಂಬಂಧಿಗಳು ಆರೋಪಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ನಡೆ ಖಂಡಿಸಿ ಆಸ್ಪತ್ರೆಯ ಮುಂದೆ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ.












Click it and Unblock the Notifications