ವಿಡಿಯೋ; ತಮಟೆ ವಾದನಕ್ಕೆ ಸಖತ್ ಸ್ಟೆಪ್ ಹಾಕಿದ ಸಚಿವ ಸಿ.ಟಿ ರವಿ
ಚಿಕ್ಕಮಗಳೂರು, ಫೆಬ್ರವರಿ 29: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿನ್ನೆ ಜಿಲ್ಲಾ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಈ ಉತ್ಸವದಲ್ಲಿ ಸಚಿವ ಸಿ.ಟಿ ರವಿ ಕುಣಿದು ಕುಪ್ಪಳಿಸಿದ್ದಾರೆ.
Recommended Video
ನಿನ್ನೆ ಸಂಜೆ 6.30ಕ್ಕೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ದೀಪ ಬೆಳಗುವ ಮೂಲಕ ಚಿಕ್ಕಮಗಳೂರು ಉತ್ಸವಕ್ಕೆ ಚಾಲನೆ ನೀಡಿದ್ದರು. ಸಚಿವ ಸಿ.ಟಿ.ರವಿ ಡೋಲು ಬಾರಿಸುವ ಮೂಲಕ ಕಾರ್ಯಕ್ರಮ ಆರಂಭಿಸಿದ್ದರು. ರಾತ್ರಿ 10.30ರ ವೇಳೆಗೆ ಉತ್ಸವ ಮುಗಿಯುತ್ತಿದ್ದಂತೆ ಸಚಿವರು, ಮಕ್ಕಳು ಹಾಗೂ ಸ್ಥಳೀಯರ ಜೊತೆ ಸೇರಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ತಮಟೆ ವಾದನಕ್ಕೆ ಕುಣಿದು ಕುಪ್ಪಳಿಸಿದ್ದಾರೆ.

ರಾಮನಗರದ ತಮಟೆ ವಾದನಕ್ಕೆ ಸಿ.ಟಿ.ರವಿ ಫುಲ್ ಫಿದಾ ಆಗಿ ಕುಣಿದಿದ್ದಾರೆ. ಸಚಿವರ ಕುಣಿತಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಸೇರಿದಂತೆ ಸ್ಥಳೀಯರು ಸಾಥ್ ನೀಡಿದ್ದಾರೆ. ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಮೂರು ದಿನ ಉತ್ಸವ ನಡೆಯಲಿದೆ.












Click it and Unblock the Notifications