ಚಿಕ್ಕಮಗಳೂರಿಗೆ ಭೂ ವಿಜ್ಞಾನಿಗಳ ಭೇಟಿ, ಶೀಘ್ರವೇ ಸರ್ಕಾರಕ್ಕೆ ಸಮಗ್ರ ವರದಿ
ಚಿಕ್ಕಮಗಳೂರು, ಆಗಸ್ಟ್ 22: ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಚಿಕ್ಕಮಗಳೂರಿನಲ್ಲಿ ಹೆಚ್ಚಿನ ಮಟ್ಟದಲ್ಲಿ ಭೂಕುಸಿತವಾಗಿದ್ದು, ಇಂದು ಅದರ ಪರಿಶೀಲನೆಗೆ ಭೂವಿಜ್ಞಾನಿಗಳು ಭೇಟಿ ನೀಡಿದ್ದರು.
ಭಾರತೀಯ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳ ತಂಡ, ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು.
ವಿಜ್ಞಾನಿಗಳಾದ ಕಪಿಲ್ ಸಿಂಗ್, ಕಮಲ್ ಕುಮಾರ್, ದಯಾನಂದ್ ನೇತೃತ್ವದ ತಂಡ ಹೆಚ್ಚಿನ ಭೂಕುಸಿತಕ್ಕೆ ಸಾಕ್ಷಿಯಾಗಿದ್ದ ಚಾರ್ಮಾಡಿ ಘಾಟ್, ಅಲೇಖಾನ್, ಮಲೆಮನೆ, ದುರ್ಗದಹಳ್ಳಿ ಸೇರಿದಂತೆ ಇತರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಭೂಕುಸಿತದ ಹಿಂದಿನ ಕಾರಣ, ಮಳೆಯ ತೀವ್ರತೆ, ಭೂಕಂಪನದ ಸಾಧ್ಯತೆ ಕುರಿತು ಈ ವೇಳೆ ಪರೀಕ್ಷಿಸಲಾಯಿತು. ಮುಂದಾಗಬಹುದಾದ ಅನಾಹುತದ ಸಾಧ್ಯತೆಯನ್ನೂ ಪರಿಶೀಲಿಸಲಾಗಿದೆ. ಈ ಅಧ್ಯಯನದ ಕುರಿತು ತಂಡ ಕೆಲವೇ ದಿನಗಳಲ್ಲಿ ಸರ್ಕಾರಕ್ಕೆ ಸಮಗ್ರ ವರದಿ ನೀಡಲಿದೆ.












Click it and Unblock the Notifications