ಬಂಡಾಯ ಶಮನಕ್ಕೆ ಕಾಂಗ್ರೆಸ್ ಯತ್ನ: ವೈಎಸ್‌ವಿ ದತ್ತಾ ನಡೆ ಇನ್ನೂ ನಿಗೂಢ!
ಚಿಕ್ಕಮಗಳೂರು, ಏಪ್ರಿಲ್ 08: ಕಳೆದ ನಾಲ್ಕೈದು ದಶಕಗಳಿಂದ ದೇವೇಗೌಡರಿಗೆ ಮಾನಸ ಪುತ್ರನಂತಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಾಜಿ ಶಾಸಕ ಶಾಸಕ ವೈ.ಎಸ್.ವಿ.ದತ್ತಾ ಜೆಡಿಎಸ್ ಸಖ್ಯ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಕಡೂರು ಕಾಂಗ್ರೆಸ್ ಹಾಗೂ ದತ್ತಾ ಅವರ ಅಭಿಮಾನಿಗಳಿಗೆ ಆನೆ ಬಲ ಬಂದಿತ್ತು.
ಈ ಹಿಂದೆ ಕಾಂಗ್ರೆಸ್ ಪಡಸಾಲೆಯಲ್ಲಿ ವೈ.ಎಸ್.ವಿ.ದತ್ತಾ ಅವರಿಗೆ ಟಿಕೆಟ್ ಎಂದು ಹೇಳಲಾಗ್ತಿತ್ತು. ಆದರೆ, ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ವರಿಷ್ಠರು ಕೆ.ಎಸ್.ಆನಂದ್‍ಗೆ ಮಣಿ ಹಾಕಿದ್ದಾರೆ. ಇದರಿಂದ ದತ್ತಾ ಸೇರಿದಂತೆ ಅವರ ಅಪಾರ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿತ್ತು. ಹೀಗಾಗಿ ಅಭಿಮಾನಿಗಳು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ದತ್ತಾ ಕೂಡ ಇದು ಅಭಿಮಾನಿಗಳ ಆತ್ಮಗೌರವ-ಸ್ವಾಭಿಮಾನದ ಪ್ರಶ್ನೆ ಅಂತ ಭಾವನಾತ್ಮಕ ಪತ್ರ ಬರೆದು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದ್ದರು.

ಇದೀಗ, ವೈ.ಎಸ್.ವಿ.ದತ್ತಾ ಅವರ ಮನೆಗೆ ಭೇಟಿ ನೀಡ್ತಿರೋ ಅಭಿಮಾನಿಗಳು ಕಾಂಗ್ರೆಸ್ ಟಿಕೆಟ್ ಕೊಡದಿದ್ರೆ ಏನಂತೆ. ಬೇಡ. ನೀವು ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಿ ನಾವು ಗೆಲ್ಲಿಸ್ತೀವಿ ಅಂತ ಶಪಥಗೈದಿದ್ದಾರೆ. ದತ್ತ ಕೂಡ ಕಡೂರಲ್ಲಿ 300 ಮತ ಹಾಗೂ ಹಣ ಬಲವೂ ಇಲ್ಲದ ಸಣ್ಣ ಜಾತಿ ನಂದು. ಜನ ನನ್ನ 47 ಸಾವಿರ ಮತಗಳ ಅಂತರದಿಂದ ಗೆಲ್ಲಸಿದ್ದರು. ನಾನು ಸೋತಾಗಲೂ ಎರಡನೇ ಸ್ಥಾನದಲ್ಲೇ ಇದ್ದೆ. ಜನ ಹೇಗೆ ಹೇಳುತ್ತಾರೋ ಹಾಗೇ ಮಾಡುತ್ತೇನೆ ಎಂದು ಹೇಳಿದ್ದಾರೆ
ಇನ್ನು ದತ್ತಾ ಅವರ ಭಾವನಾತ್ಮಕ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಕಡೂರಿನ ಕಾಂಗ್ರೆಸ್ ಅಭ್ಯರ್ಥಿ ಆನಂದ್, ದತ್ತಾ ಅವರ ಮನೆಗೆ ಭೇಟಿ ನೀಡಿ ಬಂಡಾಯವನ್ನು ಶಮನ ಮಾಡಲು ಮುಂದಾಗಿದ್ದಾರೆ. ಆದರೆ, ವೈ.ಎಸ್.ವಿ.ದತ್ತಾ ಅವರು ಎಲ್ಲವನ್ನೂ ಕಾರ್ಯಕರ್ತರ ಮೇಲೆ ಹಾಕಿ, ನನ್ನದೇನು ಇಲ್ಲ. ನನಗೆ ಅಭಿಮಾನಿಗಳೇ ದೇವರು. ನನ್ನನ್ನ ಬೆಳೆಸಿದ್ದೇ ಅವರು. ಅವರು ಹೇಳಿದಂತೆ, ನಾನು ಮಾಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧದ ಬಂಡಾಯವನ್ನು ಶಮನ ಮಾಡದೇ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಇನ್ನು ಕಡೂರಲ್ಲಿ ದತ್ತ ಅವರ ನಾಯಕತ್ವ, ಜನಬಳಕೆ, ಅಭಿಮಾನಿ ಬಳಗ ಪ್ರಶ್ನಾತೀತ. ಇಡೀ ತಾಲೂಕಲ್ಲಿ 300 ಮತವಿರುವ ಸಣ್ಣ ಸಮುದಾಯದ ದತ್ತ ಜಾತ್ಯಾತೀತ ನಾಯಕ. ಅವರು ಸ್ವಂತತ್ರವಾಗಿ ಚುನಾವಣೆ ಮಾಡಿದರೆ ಅದು ಕಾಂಗ್ರೆಸ್‌ಗೆ ಮಗ್ಗಲ ಮುಳ್ಳಾಗೋದು ಗ್ಯಾರಂಟಿ. ಯಾಕೆಂದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಗೆಲುವಿಗೆ ನಂಬಿರುವ ಮುಸ್ಲಿಂ ಮತಗಳು ಕಾಂಗ್ರೆಸ್‌ಗಿಂತ ದತ್ತಾ ಅವರಿಗೆ ಹೆಚ್ಚು ಮತ ಬೀಳುವುದು ಕಟ್ಟಿಟ್ಟ ಬುತ್ತಿಯಾಗಿದೆ.
ಹಾಗಾಗಿ, ಕಾಂಗ್ರೆಸ್ ಕೂಡ ಬಂಡಾಯ ಶಮನಕ್ಕೆ ಹರಸಾಹಸಪಡ್ತಿದೆ. ಈ ಮಧ್ಯೆ ದತ್ತ ಅವರು ಮತ್ತೆ ಜೆಡಿಎಸ್ ಹೋಗುತ್ತಾರೆಂಬ ಮಾತುಗಳು ಕಡೂರಲ್ಲಿ ಜನ ಜನಿತವಾಗಿದೆ. ಆದರೆ, ಎಲ್ಲವನ್ನೂ ಕಾರ್ಯಕರ್ತರ ಮೇಲೆ ಹಾಕಿರುವ ವೈ.ಎಸ್.ವಿ.ದತ್ತಾ ಅವರು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ.
ಒಟ್ಟಾರೆ, ಟಿಕೆಟ್ ಘೋಷಣೆ ಬಳಿಕ ಕಾಫಿನಾಡಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅನುಕೂಲಕರ ವಾತಾವರಣಕ್ಕಿಂತ ಅನಾನುಕೂಲದ ವಾತಾವರಣವೇ ಹೆಚ್ಚಿದೆ. ಶೃಂಗೇರಿ ಕ್ಷೇತ್ರ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಬಂಡಾಯ... ಬಂಡಾಯ... ಬಂಡಾಯದ ಧ್ವನಿ ಕೇಳಿ ಬರುತ್ತಿದೆ.
ಇನ್ನು ತರೀಕೆರೆ-ಚಿಕ್ಕಮಗಳೂರು-ಮೂಡಿಗೆರೆಯಲ್ಲಿ ಟಿಕೆಟ್ ಘೋಷಣೆ ಆಗಿಲ್ಲ. ಈಗಲೇ ಬಂಡಾಯ-ಅಸಮಾಧಾನ ಭುಗಿಲೆದ್ದಿದೆ. ಮಧ್ಯೆ ಮಾಜಿ ಶಾಸಕ ಶಾಸಕ ವೈ.ಎಸ್.ವಿ.ದತ್ತಾ ಕೂಡ ಕಾಂಗ್ರೆಸ್ ವಿರುದ್ಧ ಬಂಡಾಯದ ಕಹಳೆ ಊದಿರೋದು ಕಡೂರಲ್ಲಿ ಕಾಂಗ್ರೆಸ್‌ನ ಭವಿಷ್ಯಕ್ಕೆ ಅಡ್ಡಗಾಲು ಹಾಕಿದಂತಾಗಿದೆ. ಆದರೆ ಮತದಾರರು ವ್ಯಕ್ತಿ ಆಧಾರದಲ್ಲೋ ಅಥವಾ ಪಕ್ಷದ ಆಧಾರದಲ್ಲೋ ಮತ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications