ನಾಳೆಯಿಂದ ದತ್ತಮಾಲಾ ಅಭಿಯಾನ: ಕಾಫಿನಾಡಲ್ಲಿ ಬಿಗಿ ಭದ್ರತೆ, ಪ್ರವಾಸಿತಾಣಗಳಿಗೆ 3 ದಿನ ನಿರ್ಬಂಧ
ಕಾಫಿನಾಡಲ್ಲಿ ಬಾಬಾ ಬುಡನ್ಸ್ವಾಮಿ ದರ್ಗಾದಲ್ಲಿ ದತ್ತಮಾಲಾ ಅಭಿಯಾನ ನಾಳೆ ನಡೆಯಲಿದೆ. ದತ್ತಾಮಾಲೆ ಅಭಿಯಾನ ಇಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿರುವ ಎಲ್ಲಾ ಹಿಂದುಗಳು ಕೂಡ ಈ ಸಮಯದಲ್ಲಿ ಒಂದಾಗಿ ದತ್ತಾಮಾಲೆ ಧರಿಸಿ, ಕೊನೆಯ ದಿನ ಬೃಹತ್ ಶೋಭಾಯಾತ್ರೆ ಮೂಲಕ ಡಿಜೆ ವಾದ್ಯಗಳೊಂದಿಗೆ ನಗರದ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ.
ಅಂದಹಾಗೆ ಕಾಫಿನಾಡಲ್ಲಿ 2 ಬಾರಿ ದತ್ತಾಮಾಲೆ ಅಭಿಯಾನ ನಡೆಯುತ್ತೆ. ಈಗ ಶ್ರೀ ರಾಮ ಸೇನೆಯವ್ರು ನೆರವೇರಿಸಿದ್ರೆ. ಡಿಸೆಂಬರ್ ತಿಂಗಳಲ್ಲಿ ವಿಶ್ವ ಹಿಂದೂ ಪರಿಷತ್ತು ಭಜರಂಗದಳ ಕಾರ್ಯಕರ್ತರು ಅದ್ಧೂರಿಯಾಗಿ ಮತ್ತೊಮ್ಮೆ ದತ್ತಾಮಾಲ ಅಭಿಯಾನ ನೆಡೆಸುತ್ತಾರೆ. ನಾಳೆ ನಡೆಯುವ ಅಭಿಯಾನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಚಿಕ್ಕಮಕ್ಕಳೂರು ಜಿಲ್ಲೆಯಾದ್ಯಾಂತ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಶ್ರೀರಾಮಸೇನೆ ಕಾರ್ಯಕರ್ತರಿಂದ ನಡೆಯುತ್ತಿರುವ ದತ್ತಮಾಲಾ ಅಭಿಯಾನದ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಚಂದ್ರದ್ರೋಣ ಪವರ್ತದ ಸಾಲಿನ ಪ್ರವಾಸಿತಾಣಗಳಿಗೆ ಮೂರು ದಿನ ನಿರ್ಬಂಧ ಹೇರಿರುವುದಾಗಿ ಚಿಕ್ಕಮಗಳೂರು ಜಿಲ್ಲಾಡಳಿತ ಹೇಳಿದೆ.
ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿ ಕೈಮರ ಚೆಕ್ ಪೋಸ್ಟ್ ಬಳಿ ವಾಹನ ತಡೆದು ವಾಪಸ್ ಕಳುಹಿಸುತ್ತಿದ್ದಾರೆ. ವಾರಾಂತ್ಯದ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರು ಪ್ರವಾಸಿತಾಣಗಳಿಗೆ ಪ್ರವಾಸಕ್ಕೆ ಬಂದಿದ್ದು, ನಿರ್ಬಂಧದ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ವಾಪಸ್ ಕಳುಹಿಸುತ್ತಿದ್ದಾರೆ.
ಜಿಲ್ಲೆಯ ಗಡಿಭಾಗ ಸೇರಿ 26 ಚೆಕ್‌ಪೋಸ್ಟ್, 49 ಸೆಕ್ಟರ್ ಆಫೀಸರ್ ನೇಮಿಸಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ, ಡ್ರೋನ್ ಕಣ್ಗಾವಲು ಇರಿಸಿದ್ದು, ಮುನ್ನೆಚ್ಚರಿಕೆಯಿಂದ ಚಿಕ್ಕಮಗಳೂರಿನ M.G.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರಿಂದ ಪಥಸಂಚಲನ ಮಾಡಲಾಗಿದೆ.
ಇನಾಂ ಬಾಬಾ ಬುಡನ್ ಗಿರಿಯು ಹಿಂದುಗಳ ಆಸ್ತಿ. ಅಲ್ಲಿ ಹಿಂದುಗಳೇ ಸಾರ್ವಭೌಮ ಅದು ಸಂಪೂರ್ಣವಾಗಿ ಹಿಂದುಗಳಿಗೆ ತಲುಪವರೆಗೂ ಈ ಅಭಿಯಾನ ನಿಲ್ಲುವುದಿಲ್ಲ. ಅದಕ್ಕಾಗಿ ನಾವು ಕಳೆದ 20 ವರ್ಷಗಳಿಂದಲೂ ಈ ದತ್ತಾಮಾಲ ಅಭಿಯಾನ ನೆಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳುತ್ತಾರೆ ದತ್ತಾಮಾಲಧಾರಿಗಳು.
ದತ್ತಾಮಾಲ ಧಾರಾಣೆ ದತ್ತಾತ್ರೇಯ ಗುರುಗಳನ್ನು ನೆನಸಿಕೊಂಡು ಮಾಲಾಧಾರಾಣೆ ಮಾಡಿಕೊಳ್ಳುವ ಒಂದು ವಿಶಿಷ್ಟ ಸಂಪ್ರದಾಯ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ರೀತಿಯಲ್ಲಿ ಹಬ್ಬದ ವಾತಾವರಣವನ್ನು ಉಂಟು ಮಾಡುತ್ತದೆ. ಸುಮಾರು 7 ದಿನಗಳ ಕಾಲ ರಾಜ್ಯದ ವಿವಿಧಡೆ ಇರುವ ದತ್ತಾತ್ರೇಯ ಭಕ್ತರು ಮಡಿ, ಜಪ, ತಪಾಗಳಿಂದ ಇರುತ್ತಾರೆ. ಗುರು ದತ್ತರನ್ನು ನೆನಪಿಸಿಕೊಂಡು ಮಾಲಧಾರಣೆ ಮಾಡಿ, ಹೋಮ, ಹವನ ಜಪ, ಭಜನೆಗಳ ಮೂಲಕ ದತ್ತಾತ್ರೇಯರಲ್ಲಿ ಭಕ್ತಿಯಿಂದ ಇರುತ್ತಾರೆ.












Click it and Unblock the Notifications