ಶೃಂಗೇರಿಯಲ್ಲಿ ನಿಖಿಲ್ ನಾಮಪತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಕುಟುಂಬ
Recommended Video

ಚಿಕ್ಕಮಗಳೂರು, ಮಾರ್ಚ್ 18: ಚುನಾವಣೆ ಯುದ್ದ ಗೆಲ್ಲಲು ಶಾರದಾಂಬೆಯ ಆರ್ಶಿರ್ವಾದ ಬೇಕು. ಕೇವಲ ನಿಖಿಲ್ ಒಬ್ಬರಿಗಾಗಿ ತಾಯಿ ಸನ್ನಿಧಿಗೆ ಬಂದಿಲ್ಲ. 28 ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಎಲ್ಲಾ ಅಭ್ಯರ್ಥಿಗಳ ಗೆಲುವಿಗಾಗಿ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಜೊತೆ ಇಂದು ಸೋಮವಾರ ಶೃಂಗೇರಿಗೆ ಆಗಮಿಸಿರುವ ಸಿಎಂ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು. ನಮ್ಮ ಕುಟುಂಬದ ನಂಬಿಕೆಯ ಹಿನ್ನೆಲೆ ಶೃಂಗೇರಿ ತಾಯಿಯ ಆರ್ಶಿವಾದ ಪಡೆಯಲು ಬಂದಿದ್ದೇನೆ ಎಂದರು.
ಪ್ರಮೋದ್ ಮಧ್ವರಾಜ್ ಬೇರೆಯವರಲ್ಲ, ಅವರು ನಮ್ಮವರೇ. ಕೂತು ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದ ಸಿಎಂ, ಸುಮಲತಾ ಸ್ಪರ್ಧಿಸುತ್ತಿರುವ ವಿಚಾರಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.ಮಂಡ್ಯ ಜಿಲ್ಲೆಯ ಜನರ ಪರವಾಗಿ ಏನೇನು ಮಾಡ್ತಾರೆ ನೋಡೋಣ ಎಂದು ತಿಳಿಸಿದರು.

ನಿಖಿಲ್ ನಾಮಪತ್ರ ಸಲ್ಲಿಕೆಗೂ ಮುನ್ನ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಲು ಶೃಂಗೇರಿಗೆ ಆಗಮಿಸಿರುವ ಸಿಎಂ ಕುಟುಂಬ, ನಾಮಪತ್ರವನ್ನು ಶೃಂಗೇರಿ ತಾಯಿ ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಿದರು.












Click it and Unblock the Notifications