ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭದ್ರಾ ಮೇಲ್ದಂಡೆ ಕಾಮಗಾರಿ: ಮತ್ತೆ ಶುರುವಾಯಿತು ರಾಜಕೀಯದಾಟ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

Chikkamagaluru : ಭದ್ರಾ ಮೇಲ್ದಂಡೆ ಕಾಮಗಾರಿ ಹಿನ್ನೆಲೆ ಬಿಜೆಪಿ ಹಾಗು ಕಾಂಗ್ರೆಸ್ ನಡುವೆ ಜಟಾಪಟಿ|Oneindia Kannada

ಚಿಕ್ಕಮಗಳೂರು, ಡಿಸೆಂಬರ್ 03: ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ಮೂಲಕ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ 59 ಕೆರೆಗಳಗೆ ನೀರು ಪೂರೈಸುವ ಯೋಜನೆಯಲ್ಲಿ ರಾಜಕೀಯ ಶುರುವಾಗಿದೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಂಕುಸ್ಥಾಪನೆಯಾದ ಕಾಮಗಾರಿಗೆ ಈಗ ಬಿಜೆಪಿ ಶಾಸಕ ಸುರೇಶ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಮತ್ತೆ ಶಂಕುಸ್ಥಾಪನೆ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಮಾಜಿ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಸೋಮವಾರ ವೇದಿಕೆ ಕಾರ್ಯಕ್ರಮ ನಡೆಯುವ ವೇಳೆಯೇ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಬಯಲುಸೀಮೆಯ ರೈತರ ಮೊಗದಲ್ಲಿ ಸಂತಸ: ಕಾರಣವೇನು ಗೊತ್ತಾ?ಬಯಲುಸೀಮೆಯ ರೈತರ ಮೊಗದಲ್ಲಿ ಸಂತಸ: ಕಾರಣವೇನು ಗೊತ್ತಾ?

ತರೀಕೆರೆ ತಾಲೂಕಿನ ನರಸೀಪುರ ಬಳಿ ಭದ್ರಾ ಮೇಲ್ದಂಡೆ ಕಾಲುವೆಯಿಂದ ನೀರನ್ನು ಲಿಫ್ಟ್ ಮಾಡಿ ಕೆರೆಗಳಿಗೆ ಹರಿಸುವ ಯೋಜನೆಗೆ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೇಳೆ ತರೀಕೆರೆ ಕ್ಷೇತ್ರದ ಶಾಸಕರಾದ ಜಿ ಶ್ರೀನಿವಾಸ್ ಶಂಕುಸ್ಥಾಪನೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಆದರೆ ಇದೀಗ ತರೀಕೆರೆ ಬಿಜೆಪಿ ಶಾಸಕ ಸುರೇಶ್ ಅದೇ ಕಾಮಗಾರಿಗೆ ಮತ್ತೆ ಶಂಕುಸ್ಥಾಪನೆ ಮಾಡಿದ್ದಾರೆ. ಮುಂದೆ ಓದಿ..

ವೇದಿಕೆಯ ಮುಂಭಾಗ ಪ್ರತಿಭಟನೆ

ವೇದಿಕೆಯ ಮುಂಭಾಗ ಪ್ರತಿಭಟನೆ

ಈ ವೇಳೆ ಮಾಜಿ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ವೇದಿಕೆಯ ಮುಂಭಾಗವೇ ಪ್ರತಿಭಟನೆ ಮಾಡಿದರು. ಅಲ್ಲದೇ ಶಾಸಕ ಸುರೇಶ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಹಗರಣ : ಬಿಎಸ್ ವೈ ಗೆ ಜಾಮೀನುಭದ್ರಾ ಮೇಲ್ದಂಡೆ ಹಗರಣ : ಬಿಎಸ್ ವೈ ಗೆ ಜಾಮೀನು

ಕಾರ್ಯಕರ್ತರ ವಾಕ್ಸಮರ

ಕಾರ್ಯಕರ್ತರ ವಾಕ್ಸಮರ

ಇನ್ನು ವೇದಿಕೆ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಕೈ ಕೈ ಮಿಲಾಯಿಸುವ ಹಂತಕ್ಕೆ ವಾಕ್ಸಮರ ನಡೆಯಿತು. ಈ ವೇಳೆ ಮಾಜಿ ಶಾಸಕ ಶ್ರೀನಿವಾಸ್ ರನ್ನು ಪೊಲೀಸರು ಬಂಧಿಸಿದರು.

 ಯಡ್ಡಿಯತ್ತ ಮತ್ತೆ ಭದ್ರಾ ನೀರು ಹರಿಸಿದ ದತ್ತಾ ಯಡ್ಡಿಯತ್ತ ಮತ್ತೆ ಭದ್ರಾ ನೀರು ಹರಿಸಿದ ದತ್ತಾ

ಧರಣಿ ಮಾಡುತ್ತಿರುವುದು ವಿಪರ್ಯಾಸ

ಧರಣಿ ಮಾಡುತ್ತಿರುವುದು ವಿಪರ್ಯಾಸ

ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಶಾಸಕರು ಧರಣಿ ಮಾಡುತ್ತಿರುವುದು ವಿಪರ್ಯಾಸ. ಕೇವಲ ರಾಜಕಾರಣ ಮಾಡುವುದಕ್ಕೆ ಚುನಾವಣೆ ಸಂದರ್ಭದಲ್ಲಿ ಉದ್ಘಾಟನೆ ಮಾಡಿದ್ದಾರೆ ಅಷ್ಟೇ ಅಂದರು.

ಕಾದು ನೋಡಬೇಕಿದೆ

ಕಾದು ನೋಡಬೇಕಿದೆ

ಒಟ್ಟಾರೆ ಬಹುನಿರೀಕ್ಷಿತ ಯೋಜನೆಯೊಂದು ಹಲವು ವರ್ಷಗಳಿಂದ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ರಾಜಕಾರಣವನ್ನು ಮರೆತು ಬರದಿಂದ ಕಂಗೆಟ್ಟ ಭಾಗದ ರೈತರಿಗೆ ನೀರುಣಿಸುವ ಕೆಲಸ ಮಾಡುತ್ತಾರಾ ಕಾದು ನೋಡಬೇಕಿದೆ.

English summary
Upper Bhadra Project: Today BJP-Congress workers quarrelled with each other. BJP MLA Suresh, MP Shobha Karandlaje and former Congress MLA Srinivas were present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X