ಮೀಸಲಾತಿಗೆ ಒತ್ತಾಯಿಸಿ ಶಾಸಕ ಸಿ.ಟಿ.ರವಿಗೆ ಮನವಿ ಸಲ್ಲಿಸಿದ ಬಲಿಜ ಸಮುದಾಯ
ಚಿಕ್ಕಮಗಳೂರು ನವೆಂಬರ್11 : ಚಿಕ್ಕಮಗಳೂರು ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಬಲಿಜ ಸಮುದಾಯ ಮೀಸಲಾತಿ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನಲ್ಲಿ ಸುಮಾರು 32 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಬಲಿಜ ಸಮುದಾಯಕ್ಕೆ ನಿವೇಶನ ಹಾಗೂ 2ಎ ಮೀಸಲಾತಿಯನ್ನು ಒದಗಿಸಿ ಜನಾಂಗಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಬಲಿಜ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ಸಿ.ಟಿ. ರವಿ ಅವರ ಬಳಿ ಮನವಿ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ನಗರದ ಕಚೇರಿಯಿಂದ ಎಂ.ಜಿ.ರಸ್ತೆ ಮುಖಾಂತರ ಮೆರವಣಿಗೆ ಸಾಗಿದ ಬಲಿಜ ಸಮುದಾಯದ ಹಿರಿಯರು, ಮಹಿಳೆಯರು ಹಾಗೂ ಮುಖಂಡರುಗಳು ಪಾಂಚಜನ್ಯ ಕಚೇರಿಯಲ್ಲಿ ಸಮಾವೇಶ ನಡೆಸಿದ್ದಾರೆ.

ಬಳಿಕ ಶಾಸಕ ಸಿ.ಟಿ. ರವಿ ಅವರನ್ನು ಭೇಟಿಯಾಗಿ ನಿವೇಶನ ಹಾಗೂ 2ಎ ಮೀಸಲಾತಿ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ಬಳಿ ಮೀಸಲಾತಿಗೆ ಆಗ್ರಹಿಸಿರುವ ಬಗ್ಗೆ ಮಾತನಾಡಿದ ಬಲಿಜ ಸಂಘದ ಅಧ್ಯಕ್ಷ ದೇವರಾಜ್, ಬಲಿಜ ಜನಾಂಗ 21 ಉಪ ಪಂಗಡಗಳನ್ನು ಒಳಗೊಂಡಿದೆ. ಬಳೆ, ಹೂವು, ಅರಿಶಿನ ಹಾಗೂ ಕುಂಕುಮ ವ್ಯಾಪಾರ ಮಾಡುವಂತಹ ಪಂಗಡವಾಗಿರುವ ಬಲಿಜ ಸಮಾಜಕ್ಕೆ ಜೀವನ ನಡೆಸಲು ಸರ್ಕಾರ ಸವಲತ್ತುಗಳನ್ನು ಒದಗಿಸಿ, ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇನ್ನು ಚಿಕ್ಕಮಗಳೂರು ತಾಲೂಕಿನಲ್ಲಿ 32 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಬಲಿಜ ಸಮಾಜಕ್ಕೆಇದುವರೆಗೂ ತನ್ನದೇಯಾದಂತಹ ಯಾವುದೇ ನಿವೇಶನ, ಸಮುದಾಯ ಭವನ, ಕಾಲೇಜು ಮತ್ತು ವಸತಿ ನಿಲಯಗಳು ಇರುವುದಿಲ್ಲ. ಆ ಹಿನ್ನೆಲೆಯಲ್ಲಿ ಸಮಾಜದ ಹಿರಿಯರು ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಈ ಮತ್ತೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಇನ್ನು ಆ ನಿಟ್ಟಿನಲ್ಲಿ ಶಾಸಕ ಸಿ.ಟಿ ರವಿ ಅವರು ಹಿಂದುಳಿದಿರುವ ಬಲಿಜ ಸಮುದಾಯ ಮನವಿಯನ್ನು ಪರಿಗಣಿಸಬೇಕು. ಸಂಘಕ್ಕೆ ಸಮುದಾಯ ಭವನ, ಕೈವಾರ ತಾತಯ್ಯನವರ ದೇವಾಲಯ ನಿರ್ಮಿಸಲು ನಿವೇಶನ ಹಾಗೂ ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಹಾಗೂ 2ಎ ಮೀಸಲಾತಿಯನ್ನು ಒದಗಿಸಿ ಜನಾಂಗದ ಬೆಳವಣಿಗೆಗೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications