ಅಮೂಲ್ಯ ತಂದೆಯಿಂದ ಕೊಪ್ಪದಲ್ಲಿ ದೂರು ದಾಖಲು
Recommended Video
ಚಿಕ್ಕಮಗಳೂರು, ಫೆಬ್ರವರಿ 21: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿ ಬಂಧಿತಳಾಗಿರುವ ಯುವತಿ ಅಮೂಲ್ಯ ಲಿಯೋನಾಳ ತಂದೆ ವಾಜಿ ಅವರು ಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿನ್ನೆ ರಾತ್ರಿ ಚಿಕ್ಕಮಗಳೂರಿನ ಕೊಪ್ಪದ ಶಿವಪುರ ಗ್ರಾಮದಲ್ಲಿರುವ ಅಮೂಲ್ಯ ಲಿಯೋನಾ ಮನೆ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೂಲ್ಯ ತಂದೆ ವಾಜಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಸುದ್ದಿ ಹಬ್ಬುತ್ತಿದ್ದಂತೆ ಅವರ ಮನೆಗೆ ನಿನ್ನೆ ನುಗ್ಗಿರುವ ಕೆಲ ಸಂಘಟನೆಯ ಮುಖಂಡರು ಅಮೂಲ್ಯ ತಂದೆಯಿಂದ "ಭಾರತ್ ಮಾತಾಕೀ ಜೈ" ಎಂದು ಕೂಗಿಸಿದ್ದರು.

ಅಮೂಲ್ಯ ಅವರ ಘೋಷಣೆಗೆ ತಂದೆ ತಾಯಿಯೂ ವಿರೋಧ ವ್ಯಕ್ತಪಡಿಸಿದ್ದರು. 'ಮಗಳನ್ನು ಹೊಡೆದು ಕೈ ಕಾಲು ಮುರಿಯಿರಿ, ಅವಳು ಮಾಡಿದ್ದು ತಪ್ಪು' ಎಂದು ತೀವ್ರವಾಗಿ ಖಂಡಿಸಿದ್ದರು. ಆದರೂ ಅಮೂಲ್ಯ ಲಿಯೋನಾ ಮನೆ ಮೇಲೆ ರಾತ್ರಿ ಕಲ್ಲು ತೂರಾಟ ನಡೆಸಿದ್ದು, ಐಪಿಸಿ ಸೆಕ್ಷನ್ 143, 144, 148, 447, 427, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications