ಹೊಸಕೋಟೆ ದೇವಾಲಯಗಳಲ್ಲಿ ಪ್ರಸಾದ ತಿಂದು ನೂರಾರು ಜನ ಅಸ್ವಸ್ಥ!

ಹೊಸಕೋಟೆ ಡಿಸೆಂಬರ್ 25: ದೇವಾಲಯಗಳಲ್ಲಿ ಪ್ರಸಾದ ತಿಂದು ನೂರಾರು ಜನ ಅಸ್ವಸ್ಥಗೊಂಡ ಘಟನೆ ಹೊಸಕೋಟೆಯಲ್ಲಿ ಭಾನುವಾರ ನಡೆದಿದೆ. ನಗರದ ಹನುಮ ಜಯಂತಿ, ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ದೇಗುಲಗಳಿಗೆ ಭೇಟಿ ನೀಡಿ‌ದ ನೂರಾರು ಭಕ್ತರು ಪ್ರಸಾದ ಸೇವಿಸಿದ್ದರು.

ಕಳೆದ ದಿನ ಭಕ್ತರು ನಗರದ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ಇತ್ಯಾದಿ ದೇವಾಲಯಗಳಿಗೆ ಹೋಗಿ ಪ್ರಸಾದ ಸೇವಿಸಿದ್ದರು. ದೇಗುಲಗಳಲ್ಲಿ ಪುಲಿಯೊಗರೆ, ಪಾಯಸ, ಲಡ್ಡು ಸೇವಿಸಿದ ಭಕ್ತರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಅಸ್ವಸ್ತಗೊಳ್ಳುತ್ತಿದ್ದಂತೆ ಅಸ್ಪತ್ರೆಗಳತ್ತ ದಾವಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Hundreds of people are sick after eating prasada in Hoskote temples!

ನಿನ್ನೆ ರಾತ್ರಿಯಿಂದಲೇ ಖಾಸಾಗಿ ಆಸ್ಪತ್ರೆಗಳಿಗೆ ಹೆಚ್ಚಿನ ಮಂದಿ‌ ದಾಖಲಾಗಿದ್ದಾರೆ. ಭಕ್ತರಿಗೆ ಪುಡ್ ಪಾಯಿಸಾನ್ ಅಗಿರುವ ಸಾದ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಹೊಸಕೋಟೆ ಖಾಸಗಿ ಆಸ್ಪತ್ರೆ, ಕೋಲಾರ, ಬೆಂಗಳೂರು ಆಸ್ಪತ್ರೆಗಳಲ್ಲಿ ಅಸ್ವಸ್ತಗೊಂಡ ಭಕ್ತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹೊಸಕೋಟೆ ನಗರದಲ್ಲಿ ಯಾವ ಖಾಸಗಿ ಆಸ್ಪತ್ರೆಗಳಲ್ಲಿ ನೋಡಿದ್ರು ದೇವಸ್ಥಾನದಲ್ಲಿ ಪ್ರಸಾದ ತಿಂದು ಅಸ್ವಸ್ಥಗೊಂಡ ಜನರೇ ಕಾಣಸಿಗುತ್ತಿದ್ದಾರೆ. ಎಲ್ಲ‌ ಖಾಸಾಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಡ್ ವ್ಯವಸ್ಥೆಗೆ ಅರೋಗ್ಯ ಇಲಾಖೆ ಅಧಿಕಾರಿಗಳು ಸಿದ್ದತೆ ಮಾಡಿಕೊಳ್ಳುತ್ತಿದೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ಅಸ್ವಸ್ಥಗೊಂಡವರ ನರಳಾಟ ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+