ಚಿಕ್ಕಬಳ್ಳಾಪುರ : ಅತ್ಯಾಚಾರ ಪ್ರಕರಣದ ತೀರ್ಪು 16 ದಿನದಲ್ಲಿ ಪ್ರಕಟ

ಚಿಕ್ಕಬಳ್ಳಾಪುರ, ಡಿಸೆಂಬರ್ 16 : 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ 62 ವರ್ಷದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣ ನಡೆದ 16 ದಿನಗಳಲ್ಲಿಯೇ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಚಿಕ್ಕಬಳ್ಳಾಪುರದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಎಸ್.ಹನುಮಂತಪ್ಪಕೋರೆಡ್ಡಿ ಅವರು ಈ ತೀರ್ಪು ನೀಡಿದ್ದಾರೆ. 62 ವರ್ಷದ ಗಂಗಾಧರಪ್ಪ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ನೀಡಲಾಗಿದೆ.

ಶಾಲೆಯಿಂದ ಮನೆಗೆ ಬರುತ್ತಿದ್ದ 8 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದು ಚಾಕ್ಲೇಟ್‌ ಕೊಟ್ಟಿದ್ದ ಗಂಗಾಧರಪ್ಪ ಸೈಕಲ್ ತುಳಿಯಲು ಕೊಡುವುದಾಗಿ ಮನೆಗೆ ಕರೆದುಕೊಂಡು ಹೋಗಿದ್ದ, ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.

20 years of jail term for 62 year person who raped minor girl

ಈತನ ನಡವಳಿಕೆ ಕಂಡು ಅನುಮಾನಗೊಂಡ ಸ್ಥಳೀಯರು, ಮನೆಗೆ ನುಗ್ಗಿ ಪರಿಶೀಲಿಸಿದಾಗ ಬಾಲಕಿ ಅಲ್ಲಿ ಪತ್ತೆಯಾಗಿದ್ದಳು. ಗ್ರಾಮಸ್ಥರು ಗಂಗಾಧರಪ್ಪಗೆ ಚೆನ್ನಾಗಿ ಥಳಿಸಿ, ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು.

ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ 10 ದಿನದಲ್ಲಿಯೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.16 ದಿನದಲ್ಲಿಯೇ ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಗಂಗಾಧರಪ್ಪಗೆ 20 ವರ್ಷದ ಜೈಲು ಶಿಕ್ಷೆ, 14 ಸಾವಿರ ರೂ. ದಂಡ ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+