ಯುವ ರೂಪದರ್ಶಿ ಚೆನ್ನೈನಿಂದ ಅಚಾನಕ್ ನಾಪತ್ತೆ!

ಚೆನ್ನೈ, ಮೇ 29 : ಗಾನಮ್ ನಾಯರ್ ಅಕಾ ಜಿಕ್ಕಿ ಪಧೂ ಎಂಬ 28 ವರ್ಷದ ಚೆಲುವೆ, ರೂಪದರ್ಶಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಸ್ತುವಾಗಿದೆ. ಆಕೆ ನಾಪತ್ತೆಯಾಗಿರುವ ಬಗ್ಗೆ ಕೆಕೆ ನಗರ ಪೊಲೀಸರಿಗೆ ದೂರು ನೀಡಲಾಗಿದೆ.

ಚೆನ್ನೈನ ವಿರುಗಂಬಕ್ಕಂನಲ್ಲಿರುವ ಅವರ ಮನೆಯಿಂದ ಮೇ 26ರಂದು ಹೊರಬಿದ್ದವರು ನಂತರ ಮನೆಗೆ ಮರಳಿಲ್ಲ. ಅವರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾರೆ. ಅವರು ತಮ್ಮನ್ನು ಫೋಟೋಗ್ರಫರ್ ಮತ್ತು ಫ್ಯಾಷನ್ ಬ್ಲಾಗರ್ ಎಂದು ಫೇಸ್ ಬುಕ್ಕಿನಲ್ಲಿ ಪರಿಚಯಿಸಿಕೊಂಡಿದ್ದಾರೆ.

Young model Gaanam Nair missing from Chennai

ಅವರ ಸಂಬಂಧಿಗಳು ಗಾನಮ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವಿವರ ನೀಡಿದ್ದಾರೆ. ಗಾನಮ್ ತಾಯಿ ತೀರಿಕೊಂಡಿದ್ದು, ತಂದೆ ದೆಹಲಿಯಲ್ಲಿದ್ದಾರೆ. ಗಾನಮ್ ಕಲಿತಿರುವು ಚೆನ್ನೈನ ಯತಿರಾಜ್ ಕಾಲೇಜಿನಲ್ಲಿ.

ಶುಕ್ರವಾರ ತಮ್ಮ ಕಪ್ಪುಬಣ್ಣದ ಕೈನೆಟಿಕ್ ಹೋಂಡಾದಲ್ಲಿ, ಮನೆಯವರಿಗೆ ಹೇಳಿ ಮನೆಯಿಂದ ಹೊರಬಿದ್ದವರು ನುಗಂಬಕ್ಕಂನಲ್ಲಿರುವ ಕಚೇರಿ ತಲುಪಿಲ್ಲ. ಪೊಲೀಸರು ಸಿಸಿಟಿವಿಯನ್ನು ಪರೀಕ್ಷಿಸಿದ್ದು, ಗಾನಮ್ ಅವರು ಎಂದಿನ ದಾರಿಯನ್ನು ಹಿಡಿಯದೆ ಬೇರೆ ದಾರಿಯಲ್ಲಿ ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

Young model Gaanam Nair missing from Chennai

ಆಕೆ ಮತ್ತು ಸಂಬಂಧಿಕರ ನಡುವೆ ಜಗಳಗಳೇನಾದರೂ ನಡೆದಿತ್ತೆ ಎಂಬ ಬಗ್ಗೆಯೂ ಪೊಲೀಸರು ವಿಚಾರಿಸುತ್ತಿದ್ದಾರೆ. ಆದರೆ, ಇದನ್ನು ಆಕೆಯ ಸೋದರ ಸಂಬಂಧಿ ಸಾರಾಸಗಟಾಗಿ ನಿರಾಕರಿಸುತ್ತಾರೆ. ಅವರ ಫೇಸ್ ಬುಕ್ ಪುಟದಲ್ಲೇನಾದರೂ ಸುಳಿವು ಸಿಗುತ್ತಾ ಎಂಬ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಗಾನಮ್ 10 ವರ್ಷದವಳಿದ್ದಾಗಿಂದಲೇ ತಮ್ಮೊಂದಿಗಿದ್ದಾರೆ. ಅವರು ಕೇಶ ಶೃಂಗಾರ ಸಲೂನ್ ನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ 11 ಗಂಟೆಗೆ ಮನೆ ಬಿಡುತ್ತಿದ್ದ ಗಾನಮ್, ಅತ್ಯಂತ ವೇಗವಾಗಿ ಕಚೇರಿ ತಲುಪುವ ರಸ್ತೆಯಲ್ಲಿಯೇ ಹೋಗುತ್ತಿದ್ದರು ಎಂದು ಆಕೆಯ ಸಂಬಂಧಿ ಪ್ರಿಯಾಂಕಾ ಹೇಳಿದ್ದಾರೆ.

ಆಕೆಯನ್ನು ಹುಡುಕದ ಸ್ಥಳವೇ ಇಲ್ಲ. ಕಚೇರಿ, ಆಸ್ಪತ್ರೆ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ಹುಡುಕಿದರೂ ಆಕೆಯ ಸುಳಿವಿಲ್ಲದಿರುವುದು ಅವರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ. ನಂತರ ಈಕೆ ಕಂಡರೆ ತಿಳಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿಯೂ ಅಭಿಯಾನ ಆರಂಭಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+