ಟೊಮ್ಯಾಟೊ ಬೆಲೆ ಡಬ್ಬಲ್, ಕಂಗಲಾದ ಸಾರು, ಚಟ್ನಿ ಪ್ರಿಯರು

Posted By:
Subscribe to Oneindia Kannada

ಚೆನ್ನೈ, ಜೂನ್ 15 : ವಾರದ ಹಿಂದೆ ಒಂದು ಕೆ.ಜಿ ಟೊಮ್ಯಾಟೊ ಬೆಲೆ 44 ರು ದಾಟಿರಲಿಲ್ಲ ಈಗ 80 ಪ್ಲಸ್ ರೇಟ್ ಇದೆ, ಇದು ಬರೀ ಚೆನ್ನೈ ಮಾರುಕಟ್ಟೆಯಲ್ಲಿನ ಮಾತಲ್ಲ. ಬೆಂಗಳೂರು ಸೇರಿದಂತೆ ಮೆಟ್ರೋಸಿಟಿಗಳ ಹಣೆಬರಹ.

ಈರುಳ್ಳಿಗೆ ಹೋಲಿಸಿದರೆ ಟೊಮ್ಯಾಟೊಗೆ ಆಯಸ್ಸು ಕಮ್ಮಿ. ಚಟ್ನಿ, ಸಾರು, ಜಾಮ್, ಗೊಜ್ಜು ಹೀಗೆ ಮಾರುಕಟ್ಟೆಯಿಂದ ತಂದ ದಿನವೇ ಬಳಸುವುದು ಮಾಮೂಲಿ. ಹೀಗಾಗಿ ಕಳೆದ ವಾರದ ಟೊಮ್ಯಾಟೊ ಯಾರು ಇಟ್ಟುಕೊಳ್ಳುವುದಿಲ್ಲ.[ಬೆಂಗಳೂರಿನಲ್ಲಿ ಟೊಮೆಟೋ ದರ 70 ರೂ.]

Tomato prices double to Rs 80/kg on sluggish supply

ಕಳೆದವಾರ 20 ರಿಂದ 40 ರು ನಷ್ಟಿದ್ದ ಕೆಜಿ ಟೊಮ್ಯಾಟೊ ಬೆಲೆ ಈಗ ದುಪ್ಪಟ್ಟಾಗಿದೆ. ಚೆನ್ನೈನಲ್ಲಿ 80 ರು ನಷ್ಟಿದ್ದರೆ, ಕೋಲ್ಕತ್ತಾದಲ್ಲಿ 60 ರು/ಕೆಜಿ ಇದೆ. ಮುಂಬೈನಲ್ಲಿ 38 ರು ಇದ್ದ ಬೆಲೆ ಈಗ 58 ರು ದಾಟಿದೆ. ದೆಹಲಿಯಲ್ಲಿ 51 ರು ಪ್ರತಿ ಕೆಜಿಗೆ ನೀಡಬೇಕಾಗುತ್ತದೆ.

ಬೆಲೆ ಏರಿಕೆ ಏಕೆ? : ಸರಿಯಾದ ಪೂರೈಕೆ ಇಲ್ಲದ ಕಾರಣ, ಮಾರುಕಟ್ಟೆಯಲ್ಲಿ ದಿಢೀರ್ ಆಗಿ ಬೆಲೆ ವ್ಯತ್ಯಾಸ ಕಂಡು ಬಂದಿದೆ. ಇನ್ನು ಹರ್ಯಾಣ, ಪಂಜಾಬ್ ಸೇರಿದಂತೆ ಹಲವೆಡೆ ಅಕಾಲಿಕ ಮಳೆಗೆ ಟೊಮ್ಯಾಟೊ ಬೆಳೆ ಹಾಳಾಗಿದೆ. ಉತ್ತರ ಭಾರತದಲ್ಲಿ ಕಳೆದ ತಿಂಗಳು ಬಿಸಿಲಿಗೂ ಟೊಮ್ಯಾಟೊ ಬಾಡಿ ಹೋಗಿದೆ.

Tomato prices double to Rs 80/kg on sluggish supply

2015-16 ರ ಅವಧಿಯಲ್ಲಿ ದೇಶದ ಒಟ್ಟಾರೆ ಟೊಮ್ಯಾಟೊ ಬೆಳೆ ಉತ್ಪಾದನಾ ಪ್ರಮಾಣ 18.28 ಮಿಲಿಯನ್ ಟನ್ ಗಳಷ್ಟು ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16.38 ಮಿಲಿಯನ್ ಟನ್ ಗಳಷ್ಟಿತ್ತು.

ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬೆಂಗಾಲ ಹಾಗೂ ಒಡಿಶಾ ರಾಜ್ಯಗಳು ದೇಶದಲ್ಲಿ ಹೆಚ್ಚು ಟೊಮ್ಯಾಟೊ ಉತ್ಪಾದಿಸುವ ರಾಜ್ಯಗಳಾಗಿವೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Among metros, Chennai recorded the highest price at Rs. 80 a kg on Tuesday, compared to Rs. 44 on June 1. Tomato prices in most retail markets across the country have doubled to Rs. 80 per kg in last 15 days due to sluggish supply owing to crop damage.
Please Wait while comments are loading...