• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೆನ್ನೈನ ದುರ್ಗಾ ಪೀಠಂನಲ್ಲಿ ಬರ್ಗರ್, ಕೇಕ್ ಪ್ರಸಾದ

|

ಚೆನ್ನೈ, ಮಾರ್ಚ್ 27: ದೇವಸ್ಥಾನ ಅಂದರೆ ಅಲ್ಲೇನು ಪ್ರಸಾದ ಕೊಡ್ತಾರೆ ಹೇಳಿ ನೋಡೋಣ. ಸಿಹಿ ಆದರೆ ಲಾಡು, ಪೇಡಾ, ಸಿಹಿ ಪೊಂಗಲ್..ಇನ್ನು ಸಿಹಿ ಬಿಟ್ಟರೆ ಚಿತ್ರಾನ್ನ, ಪುಳಿಯೋಗರೆ, ಮೊಸರನ್ನ, ಖಾರ ಪೊಂಗಲ್..ಅಂತ ಹೇಳ್ತಿರಲ್ವಾ? ದಕ್ಷಿಣ ಭಾರತದ ಬಹುತೇಕ ದೇವಸ್ಥಾನಗಳಲ್ಲಂತೂ ಇವೇ ಕಣ್ರೀ ಪ್ರಸಾದ ಅಂತ ಕೊಡೋದು.

ಆದರೆ, ಚೆನ್ನೈನಲ್ಲೊಂದು ದೇವಸ್ಥಾನವಿದೆ. ಅಲ್ಲಿ ಸ್ವಲ್ಪ ಡಿಫರೆಂಟು. ಬ್ರೌನೀ, ಸ್ಯಾಂಡ್ ವಿಚ್, ಅಷ್ಟೇ ಅಲ್ಲ ಬರ್ಗರ್ ನೆಲ್ಲ ಭಕ್ತರಿಗೆ ಪ್ರಸಾದ ಅಂತ ಕೊಡ್ತಾರಂತೆ. ಟೈಮ್ಸ್ ಆಫ್ ಇಂಡಿಯಾ ಮಾಡಿದ ವರದಿ ಪ್ರಕಾರ ಪಡಪ್ಪೈನ ದುರ್ಗಾ ಪೀಠಂನಲ್ಲಿ ಇಂಥ ಪ್ರಸಾದ ಕೊಡ್ತಾರಂತೆ.[ಆತ ಆಫ್ರಿಕಾದಲ್ಲಿ ಪೈಲಟ್, ದಕ್ಷಿಣ ಕನ್ನಡದಲ್ಲಿ ದೈವಾರಾಧನೆ ಪಾತ್ರಿ]

ಯಾವುದೇ ಆಹಾರವನ್ನು ಸ್ವಚ್ಛವಾದ ಅಡುಗೆ ಮನೆಯಲ್ಲಿ ಸಿದ್ಧ ಮಾಡಿ, ಆ ಆಹಾರ ಶುದ್ಧವಾಗಿದ್ದು, ಸ್ವಚ್ಛ ಮನಸಿನಿಂದ ಸಿದ್ಧಪಡಿಸಿ, ದೇಹದ ಆರೋಗ್ಯಕ್ಕೆ ಪೂರಕವಾಗಿದ್ದರೆ ಅಂಥದ್ದನ್ನು ದೇವರಿಗೆ ಸಮರ್ಪಣೆ ಮಾಡಬಹುದು ಎಂಬುದು ದೇವಸ್ಥಾನದವರು ನಂಬಿರುವ ತತ್ವ.

ದೇಗುಲ ನಿರ್ಮಾಣಕ್ಕೂ ಸಹಾಯ ಮಾಡಿರುವ ಶ್ರೀಧರ್ ಎಂಬುವರು ಹೇಳುವಂತೆ, ಹಿರಿಯ ಭಕ್ತರಲ್ಲಿ ಪ್ರಸಾದದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲಿಗೆ ಸಾಂಪ್ರದಾಯಿಕ ಪ್ರಸಾದ ಅಲ್ಲ ಎಂಬ ಕಾರಣಕ್ಕೆ ಆಕ್ಷೇಪ ವ್ಯಕ್ತವಾಗಬಹುದು ಎಂದುಕೊಂಡಿದ್ದರಂತೆ.[ಮಹಾಭಾರತ ವಿರುದ್ಧ ಹೇಳಿಕೆ, ಕಮಲ್ ವಿರುದ್ಧ ಪಿಐಎಲ್]

ಜಯದುರ್ಗ ಪೀಠಂನ ಅಡುಗೆಮನೆ ಪೂರ್ತಿಯಾಗಿ ಆಟೋಮೆಟೆಡ್. ಪ್ರಸಾದ ಪ್ಯಾಕ್ ಆಗಿ, ಇಷ್ಟು ಸಮಯದೊಳಗೆ ಬಳಸಬೇಕು ಎಂಬ ಲೇಬಲ್ ಜತೆಗೆ ಬರುತ್ತದೆ. ಜನ್ಮದಿನದ ವಿಶೇಷ ಪ್ರಸಾದವಾಗಿರುವ ಕೇಕ್ ಅನ್ನು ಭಕ್ತರು ಬಹಳ ಇಷ್ಟಪಡುತ್ತಾರೆ. ಭಕ್ತರ ಹೆಸರು, ಅವರ ಜನ್ಮದಿನದ ಮಾಹಿತಿ ನಮ್ಮ ಬಳಿ ಇರುತ್ತದೆ. ಆ ದಿನ ಅವರ ವಿಳಾಸಕ್ಕೆ ಪ್ರಸಾದ ಕಳಿಸ್ತೀವಿ ಎನ್ನುತ್ತಾರೆ ಶ್ರೀಧರ್.

English summary
Jaya Durga Peetham- A temple in Chennai has decided to funk its menu up and is offering brownies, sandwiches and even burgers as prasad to devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X