ತಮಿಳುನಾಡಲ್ಲಿ ಆ.31ರ ತನಕ ಲಾಕ್ ಡೌನ್; ಭಾನುವಾರ ಬಂದ್

ಚೆನ್ನೈ, ಜುಲೈ 30 : ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಆಗಸ್ಟ್ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,34,114.

ಗುರುವಾರ ತಮಿಳುನಾಡು ಸರ್ಕಾರ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಇಲಾಖೆ ಬುಧವಾರ ಅನ್ ಲಾಕ್ 3.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು.

ಸರ್ಕಾರದ ಆದೇಶದ ಅನ್ವಯ ಇಡೀ ರಾಜ್ಯದಲ್ಲಿ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಲಾಕ್ ಡೌನ್ ಆಗಸ್ಟ್ 31ರ ತನಕ ಮುಂದುವರೆಯಲಿದೆ. ಕೆಲವು ವಿನಾಯಿತಿಗಳನ್ನು ಸರ್ಕಾರ ನೀಡಿದೆ.

 Tamil Nadu Extended Lockdown Till August 31

ಗುರುವಾರ ಸರ್ಕಾರ ಹೊರಡಿಸಿರುವ ಆದೇಶದಂತೆ ಆಗಸ್ಟ್ ತಿಂಗಳ ಎಲ್ಲಾ ಭಾನುವಾರದಂದು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಇರಲಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿಯೂ ಭಾನುವಾರ ಲಾಕ್ ಡೌನ್ ಜಾರಿಯಲ್ಲಿರಲಿದೆ.

ದೇಶದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಇರುವ ರಾಜ್ಯದಲ್ಲಿ ತಮಿಳುನಾಡು ಸಹ ಒಂದು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,34,114. ಇದುರೆಗೂ ರಾಜ್ಯದಲ್ಲಿ 3,741 ಜನರು ಮೃತಪಟ್ಟಿದ್ದಾರೆ.

ಈಗಾಗಲೇ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಗಳು ಲಾಕ್ ಡೌನ್ ಅನ್ನು ಆಗಸ್ಟ್ 31ರ ತನಕ ವಿಸ್ತರಣೆ ಮಾಡಿವೆ. ಬಿಹಾರ ಸರ್ಕಾರ ಆಗಸ್ಟ್ 16ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+