ಪತಿ ವಿರುದ್ಧ ದೂರು ನೀಡಿದ ಬಹುಭಾಷಾ ನಟಿ

ಮನಸೆ ಮೌನಮಾ, ಓಯಿಲಟ್ಟಾಂ, ಕಿಳಕೈ ವರುಂ ಪಟ್ಟು, ಚೆಂದುಳ್ಳಿ ಚೆಲುವೆ, ಉನಕೈ ಆನ್ ಥೆಡುಥೆ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಚಾರ್ಮಿಳಾ ಅವರು ತನ್ನ ಪತಿ ರಾಜೇಶ್ ಅವರು ತಮ್ಮ ಸ್ವಂತ ಮಗ ಅಡೊನಿಸ್ ಜೂಡ್ ನನ್ನೇ ಕಿಡ್ನಾಪ್ ಮಾಡಿದ್ದಾರೆ. ಸಾಲಿಗ್ರಾಮಂ ನಿವಾಸದಿಂದ ಆತನನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ನನಗೆ ಹಾಗೂ ನನ್ನ ಮಗನಿಗೆ ನನ್ನ ಗಂಡ ಸತತವಾಗಿ ಕಾಟ ನೀಡುತ್ತಿದ್ದಾನೆ. ಆತನ ಕಾಟ ಸಹಿಸಲಾರದೆ ನಾನು ದೂರವುಳಿದಿದ್ದೆ. ಆದರೆ, ಇತ್ತೀಚೆಗೆ ನನ್ನ ಮಗ ಜೂಡ್ ಜತೆ ಸಂಪರ್ಕ ಬೆಳೆಸಿ ಆತನ ತಲೆಕೆಡಿಸಿ ಕರೆದುಕೊಂಡು ಹೋಗಿದ್ದಾರೆ.
ಜಾತಿ ಧರ್ಮ ತೊಂದರೆ: ನನ್ನ ಮಗನನ್ನು ಬಲವಂತವಾಗಿ ಅವರ ಧಾರ್ಮಿಕತೆಗೆ ಒಗ್ಗುವಂತೆ ಮಾಡುತ್ತಿದ್ದಾರೆ.ರಾಜೇಶ್ ಅವರ ಅಪ್ಪ ಅಮ್ಮ ಕೂಡಾ ನನ್ನ ಮಗನ ತಲೆಕೆಡಿಸಿದ್ದಾರೆ ಎಂದು ಚಾರ್ಮಿಳಾ ಹೇಳಿದ್ದಾಳೆ. ಚಾರ್ಮಿಳಾ ದೂರು ಸ್ವೀಕರಿಸಿರುವ ಚೆನ್ನೈ ಪೊಲೀಸರು ಪೊಲೀಸ್ ಆಯುಕ್ತ ಎಸ್ ಜಾರ್ಜ್ ಅವರು ವಡಪಳನಿ ಉಪ ಆಯುಕ್ತರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಯಾರೀಕೆ ಚಾರ್ಮಿಳಾ : ಚೆನ್ನೈನಲ್ಲಿ ನೆಲೆಸಿರುವ ಕೇರಳ ಮೂಲದ ಪಶುವೈದ್ಯ ಮನೋಹರನ್ ಹಾಗೂ ಹೈಸೆ ಅವರ ಪುತ್ರಿಯಾದ ಚಾರ್ಮಿಳಾ ಚೆನ್ನೈನ ಹೋಲಿ ಏಂಜೆಲ್ಸ್ ಕಾನ್ವೆಂಟ್ ವಿದ್ಯಾರ್ಥಿನಿಯಾಗಿದ್ದರು. ಈಕೆಗೆ ಏಂಜಲೀನಾ ಎಂಬ ತಂಗಿ ಇದ್ದಾರೆ.
ಇಂಜಿನಿಯರ್ ರಾಜೇಶ್ ಮದುವೆಯಾಗಿ ಸುಖವಾಗಿದ್ದ ಚಾರ್ಮಿಳಾ ಅವರಿಗೆ ಅಡೊನಿಸ್ ಜ್ಯೂಡ್ ಎಂಬ ಪುತ್ರನಿದ್ದಾನೆ. ಚೆನ್ನೈನ ಸಾಲಿಗ್ರಾಮಂನಲ್ಲಿ ನೆಲೆಸಿದ್ದರು. ವಿಜಯ್ ಟಿವಿಯಲಿ ಜುಲ್ಲನು ಒರು ಸಂಡಿಪ್ಪು ಎಂಬ ಕಾರ್ಯಕ್ರಮ ಹಾಗೂ ಜೋಡಿ ನಂ.1ಶೋ ನಿರೂಪಕಿಯಾಗಿ ಕೂಡಾ ಚಾರ್ಮಿಳಾ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದಲ್ಲಿ ಚೆಂದುಳ್ಳಿ ಚೆಲುವೆ ಎಂಬ ಚಿತ್ರ ಸೇರಿದಂತೆ 35ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಮಲೆಯಾಳಂ, ತಮಿಳು,ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications