ಚೆನ್ನೈ: ಬ್ರಾಹ್ಮಣರ ಮೇಲೆ ಹಲ್ಲೆ, ಸರ್ಕಾರ ಗಪ್ ಚುಪ್
ಚೆನ್ನೈ, ಏ. 22: ಚೆನ್ನೈ ನಲ್ಲಿ ಬ್ರಾಹ್ಮಣರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ಕಳೆದ ಎರಡು ದಿನದಲ್ಲಿ ದೇವಾಲಯದ ಅರ್ಚಕರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಸೋಮವಾರ ಮೈಲಾಪುರ್ ದೇವಾಲಯದ ಅರ್ಚಕರೊಬ್ಬರ ಮೇಲೆ ತೀವ್ರ ತೆರೆನಾದ ಹಲ್ಲೆಯಾಗಿದೆ. ಇದಕ್ಕೂ ಮೊದಲು ಟ್ರಿಪಲಿಕೇನ್ ಮತ್ತು ಟಿ ನಗರದಲ್ಲೂ ಅರ್ಚಕರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು.[ಬ್ರಾಹ್ಮಣರು ಗೋಮಾಂಸ ತಿಂದಿದ್ದಾರೆ: ಕಮಲ್ ಹಾಸನ್]

ನಮ್ಮ ವಯೋವೃದ್ಧ ತಂದೆ 78 ವರ್ಷದ ವಿಶ್ವನಾಥನ್ ಗುರ್ಖಾ ಮೇಲೆ ಹಲ್ಲೆ ಮಾಡಿದ್ದಲ್ಲದೇ 10-12 ಜನರ ಗುಂಪು ಅವರ ಜನಿವಾರವನ್ನು ಕಿತ್ತೆಸೆದಿತ್ತು ಎಂದು ನಟ ಮಂಗಳಾನಾ ಗುರ್ಖಾ ಪೋಲಿಸರಿಗೆ ದೂರು ದಾಖಲು ಮಾಡಿದ್ದಾರೆ.
ಸೋಮವಾರ ಸಂಜೆ ದೇವಾಲಯದಿಂದ ಹಿಂದಿರುಗುತ್ತಿದ್ದ ತಂದೆಯವರ ಮೇಲೆ ಹಲ್ಲೆ ಮಾಡಲಾಗಿದೆ. ಕತ್ತಲಾಗಿದ್ದರಿಂದ ದುಷ್ಕರ್ಮಿಗಳ ಗುರುತು ಸಿಕ್ಕಿಲ್ಲ. ಆದರೆ ಹಲ್ಲೆ ಮಾಡುವ ವೇಳೆ ' ಪೆರಿಯಾರ್ ವಳಗಾ' ಎಂದು ಚೀರಿದ್ದರು ಎಂದು ಅವರು ತಿಳಿಸಿದ್ದಾರೆ. [ಕೃತಘ್ನ ಮಾತ್ರ ಹಸುವಿನ ಕೆಚ್ಚಲಿಗೆ ಚೂರಿ ಹಾಕುತ್ತಾನೆ]
ಹಲ್ಲೆ ಘಟನೆಗಳು ಮಂಗಳವಾರವೂ ನಡೆದಿದೆ, ದ್ರಾವಿಡ ವಿಡುದಲೈ ಕಳಗಮ್ ಗೆ ಸೇರಿದ ಆರು ಜನರು ಕೃತ್ಯ ಎಸಗಿದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ 12 ವರ್ಷದ ಹುಡುಗನ ಮೇಲೂ ಹಲ್ಲೆ ಮಾಡಲಾಗಿದೆ.
ಮನೆಗೆ ಹಿಂದಿರುಗುತ್ತಿದ್ದ 71 ವರ್ಷದ ಸಂತನ ಗೋಪಾಲ್ ಅವರ ಮೇಲೂ ಹಲ್ಲೆ ಮಾಡಲಾಗಿದೆ. ಮತ್ತೊಂದು ದೇವಾಲಯದ ಅರ್ಚಕ ರಂಗನಾಥನ್ ಅಯ್ಯರ್ ಅವರ ಮೇಲೂ ದುಷ್ಕರ್ಮಿಗಳು ಎರಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಮುಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ. [ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]
ಬಿಜೆಪಿಯೊಂದನ್ನು ಹೊರತುಪಡಿಸಿ ಉಳಿದ ಪ್ರಮುಖ ರಾಜಕೀಯ ಪಕ್ಷಗಳು ಘಟನೆಯ ಬಗ್ಗೆ ಮೌನ ವಹಿಸಿವೆ. ಬಿಜೆಪಿ ನಾಯಕ ಎಚ್. ರಾಜಾ ಇದರಲ್ಲಿ ದ್ರಾವಿಡ ಕಳಗಮ್ ನಾಯಕ ಕೆ. ವೀರಮಣಿ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.












Click it and Unblock the Notifications