ರಜನಿ ಸೋದರಳಿಯನ ಸಾಂಗ್ ಯೂಟ್ಯೂಬಿನಲ್ಲಿ ರಿಲೀಸ್

By: ಒನ್ಇಂಡಿಯಾ ಕನ್ನಡ ಸಿಬ್ಬಂದಿ
Subscribe to Oneindia Kannada

ಚೆನ್ನೈ, ಆಗಸ್ಟ್ 18: ಸೂಪರ್ ಸ್ಟಾರ್ ರಜನಿಕಾಂತ್ ಅವರ ಸೋದರಳಿಯ ಸಂಗೀತಗಾರ ಅನಿರುಧ್ ರವಿಚಂದರ್ ಅವರು ಮತ್ತೊಂದು ವಿಕ್ರಮ ಸಾಧಿಸಲು ಹೊರಟ್ಟಿದ್ದಾರೆ. 'ವೈ ದಿಎಸ್ ಕೊಲವೆರಿ ಡೇ' ಹಾಡಿನ ಮೂಲಕ ವಿಶ್ವದಾದ್ಯಂತ ಮನೆಮಾತಾದ ಅನಿರುಧ್ ಅವರು ಈಗ ತಮಿಳು ಚಿತ್ರವೊಂದಕ್ಕಾಗಿ ಸಂಯೋಜಿಸಿರುವ ಪ್ರಚಾರ ಗೀತೆಯನ್ನು ಯೂಟ್ಯೂಬಿನಲ್ಲಿ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.

ಶಿವಕಾರ್ತಿಕೇಯನ್ ಮತ್ತು ನಟಿ ಕೀರ್ತಿ ಸುರೇಶ್ ಅವರು ನಟಿಸಿರುವ 'ರೆಮೋ' ಚಿತ್ರದ 'ಸಿರಿಕ್ಕಾದೆ' ಎಂಬ ವಿಶೇಷ ಪ್ರಚಾರ ಗೀತೆಗೆ ಅನಿರುಧ್ ಅವರು ರಾಗ ಸಂಯೋಜಿಸಿದ್ದಾರೆ. [ಸಂಗೀತ ಪ್ರಿಯರನ್ನು ಸಮ್ಮೋಹನಗೊಳಿಸಲು ಸಜ್ಜಾದ ಅನಿರುದ್ಧ್ ರವಿಚಂದರ್]

Sirikkadhey promotional music video for Remo to release on August 18th

ರೆಮೋ' ಚಿತ್ರದ ಪ್ರಚಾರಾರ್ಥವಾಗಿ ಹೊರ ತರುತ್ತಿರುವ ವಿಡಿಯೋ ಇಂಗ್ಲೀಷ್ ವರ್ಷನ್ ಕೂಡಾ ಬರುತ್ತಿದೆ. ಈ ವಿಶೇಷ ಹಾಡು ಆಗಸ್ಟ್ 18, ಸಂಜೆ 6 ಗಂಟೆಗೆ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಈ ಹಾಡು ಸೋನಿ ಮ್ಯೂಸಿಕ್, ಆಫೀಶಿಯಲ್ ಯುಟ್ಯೂಬ್ ಚಾನೆಲ್ ನಲಿ ಬಿಡುಗಡೆ ಮಾಡಲಾಗುತ್ತಿದ್ದು, ನಂತರ ಟ್ವಿಟ್ಟರ್ ಪುಟಗಳಿಂದ ವಿಶ್ವಕ್ಕೆ ಹಂಚಿಕೆಯಾಗಲಿದೆ.

ಕನ್ನಡದ 'ಜ್ವಲಂತಂ' ಎಂಬ ಹೊಸಬರ ಚಿತ್ರದ, ತಮಟೆ ಎಂಬ ಹಾಡಿಗೆ ಅನಿರುದ್ಧ್ ಅವರು ಧ್ವನಿ ನೀಡಿದ್ದರು.ಈಗ ಯೂಟ್ಯೂಬಿನಲ್ಲಿ ಹಾಡು ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಈ ವಿಡಿಯೋ ಪ್ರಚಾರ ಗೀತೆಯನ್ನು ಪ್ರಭು ರಾಧಾಕೃಷ್ಣನ್ ನಿರ್ದೇಶಿಸಿದ್ದಾರೆ.

Sirikkadhey promotional music video for Remo to release on August 18th

ಇದಕ್ಕೆ ಮಲೆಯಾಳಂ ನಟ ನಿವಿನ್ ಪಾಲ್ ಮತ್ತು ಪ್ರಭು ರಾಧಾಕೃಷ್ಣನ್ ಅವರು ಸಾಥ್ ನೀಡಿದ್ದಾರೆ. 24ಎ.ಎಂ ಸ್ಟುಡಿಯೋಸ್, ಪ್ರೊಡಕ್ಷನ್ ನಂ.3 ಬ್ಯಾನರ್ ಅಡಿಯಲ್ಲಿ ಈ ಹಾಡು ಹೊರಬರುತ್ತಿದೆ. ಆರ್.ಡಿ ರಾಜಾ ಅವರು ಈ ಹಾಡಿಗೆ ಬಂಡವಾಳ ಹೂಡಿದ್ದಾರೆ. ಅಕ್ಟೋಬರ್ 7ರಂದು ಚಿತ್ರ ತೆರೆ ಕಾಣಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sirikkadhey is a promotional Music Video for the movie Remo is all set for its release on the 18th of August at 6.00 pm. Anirudh Ravichander tuned the songs for this movie. This grand promotional concept is directed by Prabhu Radhakrishnan
Please Wait while comments are loading...