ಕಬಾಲಿಗೆ ಪೈರಸಿ ಭೀತಿ, ಹೈಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ
ಚೆನ್ನೈ, ಜುಲೈ 14: 'ಉಡ್ತಾ ಪಂಜಾಬ್', 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಹಾಗೂ 'ಸುಲ್ತಾನ್' ಚಿತ್ರಗಳು ಬಿಡುಗಡೆಗೆ ಮುನ್ನ ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದು ತಿಳಿದಿರಬಹುದು. ಈಗ ರಜನಿಕಾಂತ್ ಅವರ ಕಬಾಲಿ ಚಿತ್ರಕ್ಕೂ ಪೈರಸಿ ಭೀತಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸುರಕ್ಷತೆ ಕೋರಿ ಚಿತ್ರದ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕಬಾಲಿ ಕೂಡಾ ಆನ್ ಲೈನ್ನಲ್ಲಿ ಲೀಕ್ ಆಗಿದೆ ಎಂಬ ಸುದ್ದಿ ಹಬ್ಬಿದೆ. ಸುಮಾರು 180 ವೆಬ್ ಸೈಟ್ ಗಳಲ್ಲಿ ಪೈರಸಿ ಲಿಂಕ್ ಕಂಡು ಬಂದಿದ್ದು, ಇಲ್ಲಿಂದ ಲೆಕ್ಕಕ್ಕೆ ಸಿಗದಷ್ಟು ಡೌನ್ ಲೋಡ್ ಲಿಂಕ್ ಗಳು ಉತ್ಪತ್ತಿಯಾಗುವ ಭೀತಿ ಇದೆ. ಹೀಗಾಗಿ ಕೂಡಲೇ ಈ ವೆಬ್ ಸೈಟ್ ಹಾಗೂ ಲಿಂಕ್ ಗಳನ್ನು ಕಿತ್ತು ಹಾಕಲು ಕ್ರಮ ಜರುಗಿಸುವಂತೆ ಕೋರಿ ಚೆನ್ನೈ ಹೈಕೋರ್ಟ್ ಗೆ ನಿರ್ಮಾಪಕ ಎಸ್ ಧನು ಅರ್ಜಿ ಸಲ್ಲಿಸಿದ್ದಾರೆ. [ಉಡ್ತಾ ಪಂಜಾಬ್ 700ಪ್ಲಸ್ ವೆಬ್ ಸೈಟ್ ಗಳಲ್ಲಿ ರನ್ನಿಂಗ್]

ಜುಲೈ 22ರಂದು ದೇಶ-ವಿದೇಶದಲ್ಲಿ ಏಕಕಾಲದಲ್ಲಿ ತೆರೆಕಾಣಲು ಸಿದ್ಧವಾಗಿದೆ. ಯುಎಸ್ ನಲ್ಲಿ 400 ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದ್ದು 25 ಡಾಲರ್ ಬೆಲೆ ನಿಗದಿ ಮಾಡಲಾಗಿದೆ. ಇದಕ್ಕೂ ಮುನ್ನ ಚಿತ್ರ ಡೌನ್ ಲೋಡ್ ಆಗಲು ಆರಂಭವಾದರೆ ಭಾರಿ ನಷ್ಟವಾಗುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ.[ರಜನಿಗೆ SMS ಕಳುಹಿಸಲು ಏರ್ ಟೆಲ್ ನಿಂದ ವಿಶೇಷ ಕೂಪನ್]
ಈ ಬಗ್ಗೆ ಕ್ರಮ ಜರುಗಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಗೆ ಸೂಚನೆ ನೀಡಬೇಕು ಎಂದೂ ಥನು ಮನವಿ ಮಾಡಿಕೊಂಡಿದ್ದಾರೆ.[ಅಂದಿನ ಬಸ್ ಕಂಡಕ್ಟರ್ ಇಂದು ವಿಮಾನದ ಮೇಲೆ ಜಾಹೀರಾತಾದ್ರು]
ಸುಮಾರು 200 ಕೋಟಿ ರು ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಹುಭಾಷಾ ಚಿತ್ರ ಏನಾದರೂ ಆನ್ ಲೈನ್ ನಲ್ಲಿ ಸೋರಿಕೆಯಾದರೆ ಒಟ್ಟು ಆದಾಯದ ಶೇ 70ರಷ್ಟು ನಷ್ಟವಾಗಲಿದೆ ಎಂದಿದ್ದಾರೆ.['ಕಬಾಲಿ' ಸೆನ್ಸಾರ್ ಆಯ್ತು: ರಿಲೀಸ್ ಡೇಟ್ ಕೂಡ ಫಿಕ್ಸ್ ಆಯ್ತು.!]
ರಜನಿಕಾಂತ್ ಅಲ್ಲದೆ ರಾಧಿಕಾ ಆಪ್ಟೆ, ಕಿಶೋರ್, ಕಲೈರಾಸನ್, ದಿನೇಶ್, ಧನ್ಸಿಕಾ, ತೈವಾನಿನ ನಟ ವಿನ್ಸ್ಟನ್ ಚೋ ಚಿತ್ರದಲ್ಲಿದ್ದಾರೆ.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications