ಶಾಲಾ ಶುಲ್ಕ ವಿಚಾರದಲ್ಲಿ ಖಾಸಗಿ ಶಾಲೆಗೆ ತಮಿಳುನಾಡು ಸರ್ಕಾರ ಎಚ್ಚರಿಕೆ
ಚೆನ್ನೈ, ಏಪ್ರಿಲ್ 21: ಖಾಸಗಿ ಶಾಲೆಗಳು ಪೋಷಕರಿಗೆ ಶಾಲಾ ಶುಲ್ಕ ಪಾವತಿ ಮಾಡುವಂತೆ ಒತ್ತಾಯ ಮಾಡುವಂತಿಲ್ಲ ಎಂದು ತಮಿಳುನಾಡು ಸರ್ಕಾರ ಎಚ್ಚರಿಕೆ ನೀಡಿದೆ.
2020-21ರ ಸಾಲಿನ ಶಾಲೆಯ ಶುಲ್ಕ ಪಾವತಿ ಮಾಡಿ ಅಥವಾ ಹಿಂದಿನ ವರ್ಷ ಬಾಕಿ ಹಣವನ್ನು ನೀಡಿ ಎಂದು ಯಾವ ಶಾಲೆಯೂ ಪೋಷಕರಿಗೆ ಒತ್ತಾಯಿಸುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದೆ. ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಗೆ ಈಗಾಗಲೇ ಅನೇಕ ದೂರುಗಳು ಬಂದಿದ್ದು, ಅನೇಕ ಪೋಷಕರು ಶಾಲೆಗಳು ಮೇಲೆ ಆರೋಪ ಮಾಡಿದ್ದಾರೆ.
ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಖಾಸಗಿ ಶಾಲೆಗಳ ಈ ವಿಷಯವನ್ನು ಸರ್ಕಾರ ಗಮನಕ್ಕೆ ತಂದಿದ್ದು, ಸರ್ಕಾರ ಖಾಸಗಿ ಶಾಲೆಗಳಿಗೆ ಶುಲ್ಕ ಪಾವತಿಯ ಬಗ್ಗೆ ಆದೇಶ ನೀಡಿದೆ. ಲಾಕ್‌ಡೌನ್ ಸಮಯದಲ್ಲಿ ಶಾಲೆಗಳು ಶುಲ್ಕಕ್ಕಾಗಿ ಪೋಷಕರನ್ನು ಒತ್ತಾಯ ಮಾಡುವುದು ಸರಿ ಅಲ್ಲ ಎಂದಿದೆ.

ಲಾಕ್‌ಡೌನ್‌ನಿಂದ ಸಾಕಷ್ಟು ಜನರು ಕೆಲಸ ಇಲ್ಲದೆ, ಆದಾಯವಿಲ್ಲದೆ ಕಂಗಾಲಾಗಿದ್ದಾರೆ. ಇದೀಗ ಸರ್ಕಾರದ ಈ ಆದೇಶ ಪೋಷಕರ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಿದೆ.
ದೆಹಲಿ ಸರ್ಕಾರ ಕೂಡ ಖಾಸಗಿ ಶಾಲೆಗಳಿಗೆ ಶುಲ್ಕ ಹೆಚ್ಚು ಮಾಡುವಂತಿಲ್ಲ, ಬೋಧನೆ ಶುಲ್ಕ ಬಿಟ್ಟೆ ಬೇರೆ ಹಣ ಪಡೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿತ್ತು.












Click it and Unblock the Notifications