ಹೀಗೂಉಂಟೆ ಎಂಬಂತೆ 2 ಹೈಪ್ರೊಫೈಲ್ ಕಳ್ಳತನಗಳು

ಅದು ಚೆನ್ನೈನಲ್ಲಿರುವ ವೈಭವೋಪೇತ ಬಂಗಲೆ. ಅಂತಿಂಥವರ ನೆರಳೂ ಸಹ ಅದರ ಮೇಲೆ ಬೀಳುವಂತಿಲ್ಲ. ಅಂಥ ಪ್ರತಿಷ್ಠಿತ ವ್ಯಕ್ತಿಯ ಮನೆಯದು. ಆದರೆ ಆ ಮನೆಯನ್ನು ತಿಂಗಳ ಹಿಂದೆ ಯಾವಾಗಲೋ ಕಳ್ಳರು ದೋಚಿದ್ದರೂ ಸರ್ವಶಕ್ತ ಮನೆಯಾಕೆಗೆ ಅದರ ಸುಳಿವೂ ಸಿಕ್ಕಿಲ್ಲ. (ಅಶ್ವಿನಿ ನಾಚಪ್ಪ ಕ್ರೆಡಿಟ್ ಕಾರ್ಡ್ ಕಳವು; 1.7 ಲಕ್ಷ ಡ್ರಾ )
ಯಾರಪ್ಪಾ ಆಕೆ ಅಂದರೆ PepsiCo ಕಂಪನಿಯ ಅಧ್ಯಕ್ಷೆ, ಪದ್ಮಭೂಷಣ ಇಂದ್ರಾ ನೂಯಿ. ಚೆನ್ನೈನ ಟಿ. ನಗರದಲ್ಲಿರುವ ಜಿಎನ್ ಚೆಟ್ಟಿ ರಸ್ತೆಯಲ್ಲಿರುವ ಆಕೆಯ ಬಿಗಿಭದ್ರತೆ ಮನೆಗೆ ಕಳ್ಳರು ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಕಳ್ಳತನದ ಸಂಬಂಧ PepsiCo ಕಂಪನಿಯ ವತಿಯಿಂದ ಚೆನ್ನೈ ಪೊಲೀಸರಿಗೆ ದೂರು ನೀಡಲಾಗಿದೆ.
ಇಂದ್ರ ನೂಯಿ ತನ್ನ ಮನೆಗೆ ಮೊನ್ನೆ ಬುಧವಾರ ಭೇಟಿ ನೀಡಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಪ್ರಸಕ್ತ ನಡೆಯುತ್ತಿರುವ ಮಾರ್ಗಳಿ ಸಂಗೀತ ಉತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿ ನೂಯಿ ಚೆನ್ನೈಗೆ ಆಗಮಿಸಿದ್ದಾರೆ. (ಎಂಬಿಎ ಪದವೀಧರ ಬೆಳಗ್ಗೆ ಮ್ಯಾನೇಜರ್ ಸಂಜೆಗೆ ಸರಗಳ್ಳ)
ಜಿಎನ್ ಚೆಟ್ಟಿ ರಸ್ತೆಯಲ್ಲಿರುವ ತಮ್ಮ ಮನೆಗೆ ಹೋದಾಗ ಮುಂಬಾಗಿಲ ಬೀಗ ಒಡೆದಿರುವುದು ನೂಯಿಗೆ ಕಂಡುಬಂದಿದೆ. ಮನೆಯ ಕೋಣೆ/ ಕಪಾಟುಗಳನ್ನು ಜಾಲಾಡಲಾಗಿದೆ. ಮನೆಯಲ್ಲಿ ನೂಯಿಯ ತಾಯಿ ಶಾಂತಾ ಕೃಷ್ಣಮೂರ್ತಿ ವಾಸಿಸುತ್ತಿದ್ದರು. ಆರು ತಿಂಗಳ ಹಿಂದೆ ನೂಯಿ ತಾಯಿ ಅಮೆರಿಕಕ್ಕೆ ಹೋದ ಬಳಿಕ ಮನೆಗೆ ಬೀಗ ಹಾಕಿ. ಖಾಸಗಿ ಭದ್ರತಾ ಕಂಪನಿಯ ಉಸ್ತುವಾರಿಗೆ ವಹಿಸಲಾಗಿತ್ತು.
ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ನೂಯಿ ಅವರು ಪ್ರಸ್ತುತ, ತಮ್ಮ ಪತಿ ರಾಜ್ ಕೆ ನೂಯಿ ಅವರೊಂದಿಗೆ ಕನೆಕ್ಟಿಕಟ್, ಗ್ರೀನ್ ವಿಚ್ ನಲ್ಲಿ ವಾಸವಾಗಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರು ಇದ್ದಾರೆ. (ಹೀಗೂ ಉಂಟೆ! 12 ಜೈನ ವಿಗ್ರಹ ಅಂಚೆಯಲ್ಲಿ ವಾಪಸ್)
ಇನ್ನು, ಮುಂಬೈನಲ್ಲಿ ಮಂಗಳವಾರ ರಾತ್ರಿ ಏನಾಗಿದೆಯೆಂದರೆ ಕಳ್ಳನೊಬ್ಬ ಘಾಟ್ ಕೋಪರ್ ನಲ್ಲಿರುವ ಕೆನರಾ ಬಿಸಿನೆಸ್ ಸೆಂಟರ್ ಗೆ ನುಗ್ಗಿ 10ಕ್ಕೂ ಹೆಚ್ಚು ಮಳಿಗೆಗಳ ಬಾಗಿಲುಗಳನ್ನು ಮೀಟಿ, ಸರಿಸುಮಾರು 1.5 ಲಕ್ಷ ರೂ. ಕದ್ದೊಯ್ದಿದ್ದಾನೆ.
ಸುಮಾರು ಒಂದು ಗಂಟೆ ಬಿಸಿನೆಸ್ ಸೆಂಟರಿನಲ್ಲಿದ್ದ ಕಳ್ಳ, ಒಂದಾದ ನಂತರ ಒಂದರಂತೆ ಮಳಿಗೆಗಳಿಗೆ ನುಗ್ಗಿ ಆರಾಮವಾಗಿ ತನ್ನ ಕೆಲಸ ಪೂರೈಸಿದ್ದಾನೆ. ಚಾಣಾಕ್ಷ ಕಳ್ಳ ಇಲ್ಲಿ ಕರ್ತವ್ಯದಲ್ಲಿದ್ದ 8 ಮಂದಿ ಕಾವಲುಗಾರರ ಕಣ್ಣುತಪ್ಪಿಸಿ ಈ ಕೃತ್ಯವೆಸಗಿದ್ದಾನೆ. ಆದರೆ ಈ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಏಕೈಕ ಸಿಸಿಟಿವಿ ಕ್ಯಾಮರದಲ್ಲಿ ಕಳ್ಳನ ಕೆಲವು ಚಲನವಲನಗಳು ದಾಖಲಾಗಿವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications