ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟ ಧನುಷ್ 'ಜನ್ಮರಹಸ್ಯ' ಮಾರ್ಚ್ 9ರ ನಂತರ ತೀರ್ಪು!

ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಮಾರ್ಚ್ 9ರ ತನಕ ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. ಧನುಷ್ ನಮ್ಮ ಮಗ ಎಂದು ಕದಿರೇಸನ್ ಅವರು ಹಾಕಿರುವ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

By Mahesh
|
Google Oneindia Kannada News

ಚೆನ್ನೈ, ಮಾರ್ಚ್ 03: ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ನಟ ಧನುಷ್, ಮಾರ್ಚ್ 9ರ ತನಕ ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. 'ಧನುಷ್ ನಮ್ಮ ಮಗ' ಎಂದು ಕದಿರೇಸನ್ ಎಂಬುವವರು ಹಾಕಿರುವ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಮಾರ್ಚ್ 9ರಂದು ಧನುಷ್ ಅವರು ಡಿಎನ್ಎ ಪರೀಕ್ಷೆಗೆ ಒಳಪಡಬೇಕೇ? ಬೇಡವೇ? ಎಂಬುದನ್ನು ಮದ್ರಾಸ್ ಹೈಕೋರ್ಟ್ ತಿಳಿಸಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 02ರಂದು ವಿಚಾರಣೆ ನಡೆಸಿದ ಜಸ್ಟೀಸ್ ಜಿ ಚೊಕ್ಕಲಿಂಗಂ ಅವರು ಮುಂದಿನ ಆದೇಶದ ತನಕ ಧನುಷ್ ವಿರುದ್ಧದ ತನಿಖೆಗೆ ತಡೆ ನೀಡಿದ್ದು, ಮಾರ್ಚ್ 9ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.

Parentage claim over Dhanush: HC stays proceedings

ಮೇಲೂರಿನ ಹಿರಿಯ ದಂಪತಿಗಳಾದ ಕದಿರೇಸನ್ ಹಾಗೂ ಮೀನಾಕ್ಷಿ ಅವರು ಧನುಷ್ ನಮ್ಮ ಮಗ ಎಂದು ಕೋರ್ಟಿಗೆ ಅರ್ಜಿ ಹಾಕಿದ್ದಾರೆ. ಧನುಷ್ ಅವರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿ, ನಾನು ಪರೀಕ್ಷೆಗೆ ಸಿದ್ಧ ಎಂದು ಕದಿರೇಸನ್ ಹೇಳಿದ್ದಾರೆ.

ಆದರೆ, ಡಿಎನ್ಎ ಪರೀಕ್ಷೆಗೆ ತಡವಾಗಿ ಅರ್ಜಿ ಹಾಕಿದ್ದೇಕೆ? ಎಂದು ಕದಿರೇಸನ್ ಪರ ವಕೀಲರನ್ನು ನ್ಯಾ. ಚೊಕ್ಕಲಿಂಗಂ ಪ್ರಶ್ನಿಸಿದ್ದಾರೆ. ಇದರ ಜತೆಗೆ ಮೇಲೂರಿನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನೀಡಿರುವ ಆದೇಶವನ್ನು ರದ್ದುಗೊಳಿಸುವಂತೆ ಧನುಷ್ ಕೋರಿರುವ ಅರ್ಜಿ ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಲಾಗಿದೆ.

ಮಚ್ಚೆ ಇದೆ: ಧನುಷ್ ಮೈಮೇಲೆ ಎಲ್ಲೆಲ್ಲಿ ಮಚ್ಚೆ, ಗುರುತುಗಳಿವೆ ಎಂಬುದನ್ನು ಕದಿರೇಸನ್ ಅವರು ಸ್ಪಷ್ಟವಾಗಿ ತಿಳಿಸಿ, ನಮ್ಮ ಮಗನನ್ನು ನಮಗೆ ಕೊಡಿ ಎಂದಿದ್ದರು. ಈಗಾಗಲೇ ಧನುಷ್ ಅವರ ದೈಹಿಕ ಪರೀಕ್ಷೆ ನಡೆಸಿ ದೃಢಪಡಿಸಿ ಹೈಕೋರ್ಟಿಗೆ ವರದಿ ಸಲ್ಲಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 28ರಂದು ನ್ಯಾ. ಚೊಕ್ಕಲಿಂಗಂ ಅವರ ಮುಂದೆ ಧನುಷ್ ಹಾಗೂ ಪೋಷಕರಾದ ನಿರ್ದೇಶಕ ಕಸ್ತೂರಿ ರಾಜ ಹಾಗೂ ವಿಜಯಲಕ್ಷ್ಮಿ ಅವರು ಹಾಜರಾಗಿದ್ದರು. ಧನುಷ್ ಅವರ ಬಾಲ್ಯದ ದಿನಗಳ ಚಿತ್ರಗಳನ್ನು ಎರಡು ಕಡೆಯವರು ನೀಡಿದ್ದಾರೆ.

'ಧನುಷ್ ನಮ್ಮ ಮೂರನೇ ಮಗ, ಬಾಲ್ಯದಲ್ಲಿ ಕಾಣೆಯಾದವನು ಸಿಕ್ಕಿರಲಿಲ್ಲ. ನಂತರ ಸಿನಿಮಾ ಸ್ಟಾರ್ ಆದಮೇಲೆ ಎಲ್ಲಿದ್ದಾನೆ ಎಂಬುದು ತಿಳಿಯಿತು' ಎಂದು ಕದಿರೇಸನ್ ವಾದಿಸಿದ್ದಾರೆ.

English summary
The Madras High Court today(March 02) stayed the proceedings on a paternity claim over actor Dhanush made by an elderly couple in a magistrate court as it posted their plea for a DNA test for hearing on March 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X