'ಅಮ್ಮ' ಆರೋಗ್ಯದಲ್ಲಿ ಚೇತರಿಕೆ ಅಂತಾರೆ ಡಾ ಸ್ವಾಮಿ!

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಅಕ್ಟೋಬರ್ 26: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಆರೋಗ್ಯದ ಬಗ್ಗೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. 'ಆಕೆ ಶೀಘ್ರದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು. ಜೆ.ಜೆ.(ಜಯಲಲಿತಾ) ಭಕ್ತರಿಗೆ ಇದರಿಂದ ಖುಷಿಯಾಗಬಹುದು. ಆಕೆಗೆ ಪ್ರಜ್ಞೆ ಬಂದಿದೆ ಮತ್ತು ಶೀಘ್ರದಲ್ಲೇ ಬಿಡುಗಡೆ ಆಗ್ತಾರೆ. ಹಾಗೊಂದು ವೇಳೆ ಆದರೆ ಅದು ಪವಾಡ' ಎಂದಿದ್ದಾರೆ.

ಆ ಟ್ವೀಟ್ ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗೆ ಏನಾಗಿದೆ ಎಂದು ಸ್ವಾಮಿ ಅವರಿಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಕೂಡ ಜಯಲಲಿತಾ ಆರೋಗ್ಯದ ವಿಚಾರವಾಗಿ ಹಲವು ಬಾರಿ ಟ್ವೀಟ್ ಮಾಡಿದ್ದರು.

ಅಪೋಲೋ ಆಸ್ಪತ್ರೆಯ ವೈದ್ಯರು ಮೆಡಿಕಲ್ ಬುಲೆಟಿನ್ ನಲ್ಲಿ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.[ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ತನ್ನಿ: ಸುಬ್ರಮಣಿಯನ್ ಸ್ವಾಮಿ ಪತ್ರ]

Now Swamy says Jayalalithaa will be discharged soon

ಜಯಲಲಿತಾ ಅವರ ಆರೋಗ್ಯ ಸ್ಥಿತಿ ಬಗ್ಗೆ ತಮಿಳುನಾಡಿನಲ್ಲಿ ಈಗಲೂ ವದಂತಿಗಳು ನಿಂತಿಲ್ಲ. ಹಲವು ವೈದ್ಯರನ್ನು ಚೆನ್ನೈನ ಆಸ್ಪತ್ರೆಗೆ ಕರೆಸುತ್ತಿದ್ದಾರೆ. ಲಂಡನ್ ನಿಂದ ಕೂಡ ತಜ್ಞರು ಬಂದಿದ್ದರು. ಅರುಣ್ ಜೇಟ್ಲಿ, ಅಮಿತ್ ಷಾ, ರಾಹುಲ್ ಗಾಂಧಿ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ ಎಲ್ಲರೂ ವೈದ್ಯರನ್ನು ಮಾತ್ರ ಭೇಟಿ ಮಾಡಿದ್ದಾರೆ. ಜಯಲಲಿತಾ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಅಂತಷ್ಟೇ ಹೇಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jayalalithaa has got back her consciousness and may be discharged soon. If so, it is a miracle, tweeted by Rajya Sabha MP, Subramanian Swamy.
Please Wait while comments are loading...