• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಯಿಂದ ಸೇನೆಗೆ ದೇಶಿ ನಿರ್ಮಿತ ಯುದ್ಧ ಟ್ಯಾಂಕ್ ಅರ್ಜುನ್ ಹಸ್ತಾಂತರ

|

ಚೆನ್ನೈ, ಫೆಬ್ರವರಿ 14: ಚುನಾವಣೆ ಗುಂಗಿನಲ್ಲಿರುವ ತಮಿಳುನಾಡು ಹಾಗೂ ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಲಾಗಿದೆ.

ಎಐಎಡಿಎಂಕೆ ಹಾಗೂ ಬಿಜೆಪಿ ಕಾರ್ಯಕರ್ತರು ಜವಹರಲಾಲ್ ನೆಹರೂ ಕ್ರೀಡಾಂಗಣಕ್ಕೆ ತೆರಳುವ, ಅದ್ಯಾರ್ ಪ್ರದೇಶದಲ್ಲಿ ಸಾಲುಗಟ್ಟಿ ನಿಂತು, ಮೋದಿಗೆ ಜೈಕಾರ ಕೂಗಿದರು. ನೆಹರು ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಮೋದಿ ಅವರನ್ನು ತಮಿಳುನಾಡು ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಶಾಲು ಹೊದೆಸಿ ಸನ್ಮಾನಿಸಿ ಸ್ವಾಗತಿಸಿದರು.

ನಂತರ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಂಜಿ ರಾಮಚಂದ್ರನ್ ಹಾಗೂ ಜೆ ಜಯಲಲಿತಾ ಅವರಿಗೆ ಮೋದಿ ನಮನ ಸಲ್ಲಿಸಿದರು. ಜಯಲಲಿತಾ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಕೊಡುಗೆಯನ್ನು ಸಿಎಂ ಪಳನಿಸ್ವಾಮಿ ಸ್ಮರಿಸಿದರು.

ನಂತರ ಮೋದಿ ಅವರು ದೇಶಿ ನಿರ್ಮಿತ ಯುದ್ಧ ಟ್ಯಾಂಕ್ ಅರ್ಜುನ್ (ಎಂಕೆ -1ಎ) ಅನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದರು. ಸೇನಾ ಮುಖ್ಯಸ್ಥ ಎಂಎಂ ನವರಣೆ ಅವರು ಟ್ಯಾಂಕ್ ಸ್ವೀಕರಿಸಿದರು.

ಚೆನ್ನೈ ಮೆಟ್ರೋ ರೈಲಿಗೆ ಚಾಲನೆ

ಪ್ರಧಾನಿ ಮೋದಿ ಅವರು 3,770 ಕೋಟಿ ರು ಯೋಜನಾ ವೆಚ್ಚದ ಚೆನ್ನೈ ಮೆಟ್ರೋ ರೈಲು ಮೊದಲ ಹಂತಕ್ಕೆ ಹಸಿರು ನಿಶಾನೆ ತೋರಿದರು. ವಾಷರ್ ಮೆನ್ ಪೇಟ್ ನಿಂದ ವಿಮ್ಕೋ ನಗರ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿದೆ.

ಇದಾದ ಬಳಿಕ ಐಐಟಿ ಮದ್ರಾಸ್ ಆವರಣದಲ್ಲಿ ಡಿಸ್ಕವರಿ ಕ್ಯಾಂಪಸ್ ಶಂಕುಸ್ಥಾಪನೆ ನೆರವಿಸಲಾಗಿದೆ. ತಾಯಿಯೂರ್ ಬಳಿಯ ಕ್ಯಾಂಪಸ್ ಯೋಜನಾ ವೆಚ್ಚ 1,000 ಕೋಟಿ ರು ಆಗಿದ್ದು, 2 ಲಕ್ಷ ಚದರ ಮೀಟರ್ ನಷ್ಟಿದೆ.

ಚೆನೈ ಬೀಚ್ ನಿಂದ ಅಟ್ಟಿಪಟ್ಟು ಮಾರ್ಗದ 4ನೇ ರೈಲು ಮಾರ್ಗಕ್ಕೂ ಮೋದಿ ಚಾಲನೆ ನೀಡಿದ್ದಾರೆ. 22.1 ಕಿ.ಮೀ ಮಾರ್ಗದ ಯೋಜನಾ ವೆಚ್ಚ 293.40 ಕೋಟಿ ರು ನಷ್ಟಿದ್ದು ಚೆನ್ನೈ ಹಾಗೂ ತಿರುವಲ್ಲೂರ್ ಜಿಲ್ಲೆಯನ್ನು ಸಂಪರ್ಕಿಸಲಿದೆ.

English summary
Chennai: Prime Minister Narendra Modi hands over the Arjun Main Battle Tank (MK-1A) to Indian Army Chief General MM Naravane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X